ಹಲವಾರು ಯೋಜನೆಗಳಿಗಾಗಿ ಲಕ್ಪಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ. ಕಾಡುಗಳನ್ನು ರಕ್ಷಿಸಲು ಕರ್ನಾಟಕದ ೨೩ ಪರಿಸರವಾದಿ ಸಂಘಟನೆಗಳು “ಸಂಯುಕ್ತ ಸಂರಕ್ಷಣಾ ಅಭಿಯಾನ”ದಡಿ ಸೇರಿ, ಫೆಬ್ರುವರಿ ೧೬ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ “ಮರವಿಲ್ಲದೆ ನೀರಿಲ್ಲ” ಅಭಿಯಾನ ಹಮ್ಮಿಕೊಳ್ಳಲಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಸುಮಾರು ೬೫ ನದಿಗಳು ಉಗಮವಾಗುತ್ತವೆ. ಹಾಗಾಗಿ ಈ ವಲಯದ ಮೂಲಕ ಅನಾವಶ್ಯಕ ಹಾಗೂ ಪರಿಸರಕ್ಕೆ ಮಾರಕವಾಗುವಂತಹ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ.
ಅರಣ್ಯ ಸಂಘ, ಪರಿಸರ ಮತ್ತು ವನ್ಯಜೀವಿ ಅಧ್ಯಯನ ಕೇಂದ್ರ, ಫಾರೆಸ್ಟ್ ಫರ್ಸ್ಟ್, ಅರಿವು ಮತ್ತು ಪ್ರಕೃತಿ ಅಧ್ಯಯನ ಕೇಂದ್ರ, ನೇಚರ್ ಫರ್ಸ್ಟ್ ಇಕೋ ವಿಲ್ಲೇಜ್, ಕೊಡಗು ವನ್ಯಜೀವಿ ಸಂಘ, ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನ, ಐಕ್ಯಮ್ ಸಮುದಾಯ, ನೀರು ಭದ್ರತಾ ಒಕ್ಕೂಟ, ಬೆಂಗಳೂರಿಗಾಗಿ ನಾಗರಿಕ ಸನ್ನದು, ಹುಲಿ ಸಂರಕ್ಷಣೆಗಾಗಿ ಕ್ರಿಕೆಟಿಗರು – ಇವಿಷ್ಟೂ ಸಂಘಗಳು ಸಂಯುಕ್ತ ಸಂರಕ್ಷಣಾ ಅಭಿಯಾನದಡಿ ಒಟ್ಟು ಸೇರಲಿವೆ.