ದಕ್ಷಿಣ ಭಾರತದಲ್ಲಿರುವ ಪ್ರಮುಖ ಪ್ರವಾಸಿ ತಾಣ ಹಾಗೂ ಪುಣ್ಯಕ್ಷೇತ್ರ ತಲಕಾವೇರಿಯಿರುವ ಕೊಡಗು ಜಿಲ್ಲೆಯ ಕೇಂದ್ರ, “ಮಂಜಿನ ನಗರಿ” ಎಂದು ಹೆಸರುವಾಸಿಯಾಗಿರುವ ಮಡಿಕೇರಿಗೆ ನಗರ ಸಾರಿಗೆ ವ್ಯವಸ್ಥೆಯ ಅವಶ್ಯಕತೆ ಇದೆ.
ಪ್ರತಿ ದಿನ ಎಷ್ಟೋ ಜನ ತಮ್ಮ ಕೆಲಸಗಳನ್ನು ಸರ್ಕಾರಿ ಕಚೇರಿಗಳಲ್ಲಿ ಮಾಡಿಸಿಕೊಳ್ಳಲು, ಮತ್ತು ಪ್ರವಾಸಿಗರು ಪ್ರವಾಸಿತಾಣಗಳನ್ನು ನೋಡಲು ಬರುತ್ತಾರೆ. ಅವರಿಗೆ ಒಂದು ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮಡಿಕೇರಿ ನಗರ ಸಾರಿಗೆ ಸಂಸ್ಥೆ ಎಂಬ ಸರ್ಕಾರಿ ಸಂಸ್ಥೆ ರೂಪಿಸಿ, “ಎಂ ಸಿ ಟಿ ಸಿ” ಬಸ್ಸಿಗಳನ್ನು ಒದಗಿಸೋದು ಒಳಿತು.
ಉದಾಹರಣೆಗೆ: ಮಡಿಕೇರಿಯಲ್ಲಿ ಜಿಲ್ಲಾಡಳಿತ ಕಚೇರಿ ಜನರಲ್ ತಿಮ್ಮಯ್ಯ ಸರ್ಕಲ್ ಹತ್ತಿರವಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಇನ್ನೊಂದು ಕಡೆಯಿದೆ. ವೈಧ್ಯಕೀಯ ಕಾಲೇಜು ಮತ್ತೊಂದು ಕಡೆಯಿದೆ. ಜಿಲ್ಲಾ ಪೊಲೀಸ್ ಆಯುಕ್ತರ ಕಚೇರಿ ಮಗುದೊಂದು ಕಡೆಯಿದೆ. ಪ್ರವಾಸಿ ತಾಣಗಳು (ರಾಜಾ ಸೀಟ್, ಗದ್ದಿಗೆ, ಕೋಟೆ, ಅಬ್ಬೆ ಜಲಪಾತ) ಬೇರೆ-ಬೇರೆ ಕಡೆಯಿವೆ
ಹೀಗಿರುವಾಗ, ಸಾಮಾನ್ಯ ಜನರು ಆಟೋದಲ್ಲಿ ನೂರು ರೂಪಾಯಿ ಕೊಟ್ಟು ಪ್ರಯಾಣಿಸುವುದಕ್ಕಿಂತ, ಸಾರಿಗೆ ಬಸ್ಸುಗಳೇ ಒಳ್ಳೆಯದು ಎಂಬುದು ನಮ್ಮ ವಾದ; ಅಲ್ಲದೆ ಸರ್ಕಾರಕ್ಕೆ ಇದರಿಂದ ಆದಾಯ ಕೂಡ ಹೆಚ್ಚುತ್ತದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಈ ವಿಚಾರವನ್ನು ಕೂಡಲೇ ಪರಿಗಣಿಸಲಿ.

