ಮಲೆನಾಡಿನ ಜೀವನದಿ ತುಂಗಾ. ಅವಳ ಹರಿಯುವಿಕೆಯ ವೈಯಾರ ನೋಡುವುದೇ ಚಂದ.
ಆದರೆ ಕಳೆದ ಕೆಲವು ವರ್ಷಗಳಿಂದ ತುಂಗೆಯ ಮಡಿಲು ಗಣನೀಯವಾಗಿ ಬರಿದಾಗುತ್ತಿದೆ.
ಮೇ ಅಂತ್ಯದಲ್ಲಿ ಕಾಣಸಿಗುತ್ತಿದ್ದ ವಾತಾವರಣ ಈಗಲೇ ಉದ್ಭವಿಸಿರುವುದು ಮಲೆನಾಡಿನ ಬರಗಾಲದ ಮುನ್ಸೂಚನೆಯಂತೆ ಗೋಚರಿಸುವಂತಿದೆ. ನದಿಯಲ್ಲಿ ನೀರಿನ ಪ್ರಮಾಣ ಎಷ್ಟೆ ಕಡಿಮೆಯಾಗುತ್ತಿದ್ದರೂ ನಮ್ಮ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಂದೂ ಸೃಷ್ಟಿಯಾಗಿರಲಿಲ್ಲ. ಆದರೆ ಈ ಬಾರಿಯ ಪರಿಸ್ತಿತಿ ಭಿನ್ನವಾಗಿದೆ. ಈಗಲೇ ಕುಡಿಯುವ ನೀರಿನ ಹಾಹಾಕಾರ ಪ್ರಾರಂಭವಾಗಿದೆ.
ತೀರ್ಥಹಳ್ಳಿ ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೆಂದರೆ ಮಲೆನಾಡಿಗರು ಎಚ್ಚೆತ್ತುಕೊಳ್ಳುವ ಪರಿಸ್ತಿತಿ ನಿರ್ಮಾಣವಾಗಿದೆ ಎಂದರ್ಥ.
ಪ್ರಜ್ನಾವಂತರು ಕೋಮುವಾದ ಸೃಷ್ಟಿಸುವ ವಿಷಯಗಳು ರಾಜಕೀಯ ಕೆಸರೆರೆಚಾಟ ಬದಿಗಿಡಬೇಕು. ಮಲೆನಾಡಿನ ಈ ಪರಿಸ್ತಿತಿಗೆ ಕಾರಣಗಳೇನು, ಮುಂದಿನ ದಿನಗಳಲ್ಲಿ ನಮ್ಮ ಪ್ರದೇಶವನ್ನು ಮಲೆನಾಡಾಗಿಯೇ ಉಳಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಅವರು ಅವಲೋಕಿಸುವುದು ಉತ್ತಮ ಅನ್ನಿಸುತ್ತಿದೆ.
ಈ ನಿಟ್ಟಿನಲ್ಲಿ ಚರ್ಚಿಸುವುದಾದರೆ, ಕೆಳಕಂಡ ಅಂಶಗಳ ಪ್ರಭಾವವು ಕೂಡ ತುಂಗೆಯ ಮಡಿಲು ಬರಿದಾಗಲು ಕಾರಣವಾಗಿರಬಹುದು ಅನ್ನಿಸಿತ್ತಿದೆ:
೧. ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ
೨. ಅಭಿವೃದ್ದಿ ಹೆಸರಲ್ಲಿ ಮಾಡುತ್ತಿರುವ ನೈಸರ್ಗಿಕ ಕಾಡುಗಳ ಮಾರಣಹೋಮ
೩. ಮಲೆನಾಡಿನ ತುಂಗೆಯ ಇಕ್ಕೆಲಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ
೪. ನೈಸರ್ಗಿಕ ಅರಣ್ಯಕ್ಕೆ ಬೆಂಕಿಯಿಟ್ಟು ಲಾಭಮಾಡುವ ದೃಷ್ಟಿಯಿಂದ ಬೆಳೆಸುತ್ತಿರುವ ಅಕೇಶಿಯ ಪ್ಲಾಂಟುಗಳು
೫. ಸುಪ್ರಿಂಕೋರ್ಟು ಅಕೇಶಿಯ ಬೆಳೆಯಲು ನಿಷೇಧ ಹೇರಿದ್ದರೂ ಮುಂದುವರಿದಿರುವ ದುಡ್ಡು ಮಾಡುವ ದಂಧೆ
೬. ಅಗತ್ಯಕಿಂತ ಅತಿಯಾಗಿ ಪಂಪ್ ಸೆಟ್ ಗಳ ಬಳಕೆಯಿಂದ ನದಿಯಿಂದ ನೀರೆತ್ತುತ್ತಿರುವುದು
೭. ಸರ್ಕಾರ ಕೃಷಿಚಟುವಟಿಕೆ ನೀಡಿದ ಅವೈಜ್ನಾನಿಕ ವಿದ್ಯುತ್ ನೀತಿ
೮. ಕೃಷಿ ಭೂಮಿಗಳನ್ನ ದುಡ್ಡು ಮಾಡುವ ಉದ್ದೇಶದಿಂದ ಲೇಔಟ್ ಗಳಾಗಿ ಪರಿವರ್ತಿಸುತ್ತಿರುವುದು
೯. ಮಲೆನಾಡು ಭಾಗದ ರಾಜಕೀಯ ಮುಖಂಡರುಗಳು ಪರಿಸರ ಕಾಡುಗಳ ರಕ್ಷಣೆಗೆ ನಿಲ್ಲುವುದರ ಬದಲು ಅಲ್ಲಿರುವ ಅವರ ಮತ್ತು ಬೆಂಬಲಿಗರ ಭೂಮಿಯನ್ನ ರಕ್ಷಣೆ ಮಾಡುವುದರ ಬಗ್ಗೆ ಗಮನ ಹರಿಸಿರುವುದು
ಪ್ರಜ್ಞಾವಂತರು ಇನ್ನಾದರೂ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿ, ಮಲೆನಾಡಿನ ಉಳಿವಿಗಾಗಿ ತುಂಗೆಯ ಪುನರುಜ್ಜೀವನಕ್ಕಾಗಿ ಒಂದಾಗಿ ಜಾತಿ ಮತ ಪಕ್ಷ ಭೇದ ಮರೆತು ಎನಾದರೂ ಮಾಡಬೇಕು.
ಕೃಪೆ: ಪಶ್ಚಿಮ ಘಟ್ಟ ಜಾಗೃತಿ ವೇದಿಕೆ / ಸಂಯುಕ್ತ ಸಂರಕ್ಷಣಾ ಅಭಿಯಾನ
