ತಿಂಗಳ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆರೆಯಿತು. ಭಕ್ತರು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದರು.
ಇದು “ಕುಂಭಂ” ಎನ್ನಲಾದ ಮಲಯಾಳಂ ತಿಂಗಳ ಐದು ದಿನಗಳ ಪೂಜೆ.
ಅಯ್ಯಪ್ಪ ಸ್ವಾಮಿ ದರ್ಶನವು ವಿಶ್ವಲ್ಲೇ ಅತಿ ದೊಡ್ಡ ವಾರ್ಷಿಕ ತೀರ್ಥಯಾತ್ರೆ ಎನ್ನಲಾಗಿದೆ. ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ವಿರಾಜಮಾನನಾಗಿರುವ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ, ತಮ್ಮ ತನು-ಮನ-ಧನ ಒಗ್ಗೂಡಿಸಿ ಇಲ್ಲಿ ಬರುತ್ತಾರೆ.
ಕಳೆದ ವರ್ಷ ಸೆಪ್ಟೆಂಬರ್ ೩೮ರಂದು ಭಾರತೀಯ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ೧೦ ರಿಂದ ೫೦ ವರ್ಷ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಿದಾಗಿಂದಲೂ ಬಹಳಷ್ಟು ಕಡೆ, ಬಹಳಷ್ಟು ಬಾರಿ ಪ್ರತಿಭಟನೆಗಳು ನಡೆದಿವೆ. ಜನವರಿ ತಿಂಗಳಲ್ಲಿ ಇಬ್ಬರು ಮಹಿಳೆಯರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದದ್ದನ್ನು ಸ್ಮರಿಸಬಹುದು.
ಪುರಾಣ ಕಥೆಗಳ ಪ್ರಕಾರ ೧೦ ರಿಂದ ೫೦ ವರ್ಷ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇಗುಲದೊಳಗಿನ ಪ್ರವೇಶ ನಿಶಿದ್ಧವಾಗಿದೆ. ೮೦೦ಕ್ಕೂ ಹೆಚ್ಚು ವರ್ಷಗಳಿಂದ ಇದನ್ನು ಪಾಲಿಸಲಾಗಿತ್ತು.
WhatsApp us