ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರ “ದಲಿತ” ಹೇಳಿಕೆ ಮತ್ತು ಅದರ ಸಂದರ್ಭ ನನಗೆ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಆಗು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧ್ರಾಮಯ್ಯ ಅವರು ಹೇಳಿದರ.
ಅವರು ಇಂದು ಹುಬ್ಬಳ್ಳಿಯಲ್ಲಿ ಈ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದರು. “ಕಾಂಗ್ರೆಸ್ ಪಕ್ಷವು ದಲಿತ ಹಾಗೂ ಇತರೆ ಹಿಂದುಳಿದ ವರ್ಗಗಳ ಕಾಳಜಿ ವಹಿಸುತ್ತಿದೆ. ಅವರು ಯಾವ ವಿಚಾರದಲ್ಲಿ ಆ ಹೇಳಿಕೆ ನೀಡಿದರು ಎಂಬುದು ನನಗೆ ಗೊತ್ತಿಲ್ಲ. ಅವರನ್ನೇ ಕೇಳುವುದು ಉತ್ತಮ” ಎಂದು ಸಿದ್ಧರಾಮಯ್ಯ ಅವರು ಹೇಳಿದರು.
ತಾವು ದಲಿತ ಆಗಿರುವುದರಿಂದ ಮೂರು ಬಾರಿ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ ಎಂದು ಡಾ. ಪರಮೇಶ್ವರ ಹೇಳಿದ್ದು ರಾಜಕೀಯ ವಲಯದಲ್ಲಿ ಸುದ್ದಿಯಾಗಿದೆ. ಪಿ ಕೆ ಬಸವಲಿಂಗಪ್ಪ, ಕೆ ಎಚ್ ರಂಗನಾಥ್ ಅವರಿಗೂ ಸಹ ಮುಖ್ಯಮಂತ್ರಿ ಹುದ್ದೆ ಲಭಿಸಲಿಲ್ಲ. ಮಲ್ಲಿಕಾರ್ಜು ಖರ್ಗೆ ಅವರಿಗೂ ಸಹ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ. ಈಗ ನಾನು ಉಪಮುಖ್ಯಮಂತ್ರಿಯಾಗಿದ್ದೇನೆ ಎಂದು ಡಾ. ಪರಮೇಶ್ವರ ಹೇಳಿದ್ದರು.
WhatsApp us