ಅಮೆರಿಕಾದ ಪ್ರಮುಖ ಯುದ್ಧವಿಮಾನ ತಯಾರಕ ಲಾಖೀಡ್ ಮಾರ್ಟಿನ್ (ಎನ್ವೈಎಸ್ಇ: LMT) ಭಾರತೀಯ ವಾಯು ಸೇನೆಯ ಅಗತ್ಯತೆಗಾಗಿ ಹೊಂದಿಸಿ ತಯಾರಿಸಿದ ಎಫ್-೨೧ ಯುದ್ಧವಿಮಾನವನ್ನು ಅನಾವರಣಗೊಳಿಸಿತು.
ಬೆಂಗಳೂರಿನಲ್ಲಿ ಇಂದು ಆರಂಭವಾದ ಏರೊ ಇಂಡಿಯಾ ೨೦೧೯ ಪ್ರದರ್ಶನದಲ್ಲಿ ಈ ವಿಮಾನವನ್ನು ಅನಾವರಣಗೊಳಿಸಿ ಪ್ರದರ್ಶಿಸಲಾಯಿತು.
ಈ ವಿಮಾನದಿಂದಾಗಿ ಮೇಕ್ ಇನ್ ಇಂಡಿಯಾ ಅಭಿಯಾನದಡಿ ಹಲವು ಅವಕಾಶಗಳನ್ನು ಒದಗಿಸುವಂತಾಯಿತು. ಹಾಗೂ ಪ್ರಬಲವಾದ ವಾಯು ಸೇನಾ ಶಕ್ತಿ ಹೊಂದುವತ್ತ ಸಾಗುತ್ತಿರುವ ಭಾರತಕ್ಕೆ ದೃಢ ಬೆಂಬಲ ನೀಡಲಿದೆ.
ಎಫ್-೨೧ ಭಾರತೀಯ ವಾಯುಸೇನೆಯ ಅಗತ್ಯಗಳನ್ನು ಪೂರೈಸುತ್ತದೆ. ಜೊತೆಗೆ ವಿಶ್ವದ ಅತಿ ದೊಡ್ಡ ರಕ್ಷಣಾ ಸಂಸ್ಥೆಗಳ ಪೈಕಿ ಭಾರತವೂ ಸಹ ಒಂದಾಗಲಿದೆ.
“ಮೇಕ್ ಇನ್ ಇಂಡಿಯಾ” ದ ಈ ಅವಕಾಶವು ವಿಶ್ವದ ಅತಿ ದೊಡ್ಡ ರಕ್ಷಣಾ ಗುತ್ತಿಗೆದಾರ ಹಾಗೂ ಭಾರತದ ಪ್ರಮುಖ ಕೈಗಾರಿಕಾ ಕ್ಷೇತ್ರ ಒಟ್ಟು ಸೇರಿ ಭಾರತ ಹಾಗೂ ಅಮೆರಿಕಾಗಾಗಿ ಐತಿಹಾಸಿಕ ಗೆಲುವು ತಂದುಕೊಟ್ಟಿದೆ.
ಎಫ್-೨೧ ಇತರೆ ವಿಮಾನಗಳಿಗಿಂತಲು ಭಿನ್ನವಾಗಿದೆ. ಇದರ ಹೊಸ ವಿನ್ಯಾಸವು, ಬಾರತೀಯ ವಾಯುಸೇನೆಗಾಗಿ ಅತ್ಯಾಧುನನಿಕ ಹಾಗೂ ಹೊಂದಿಸಬಲ್ಲ ಯುದ್ಧವಿಮಾನವನ್ನು ನೀಡಲು ನಮ್ಮ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕಾ ನಡುವೆ ಬಾಂಧವ್ಯವನ್ನು ಬಲಗೊಳಿಸುತ್ತದೆ ಎಂದು ಲಾಖೀಡ್ ಮಾರ್ಟಿನ್ ಏರೊನಾಟಿಕ್ಸ್ನ ಡಾ. ವಿವೇಕ್ ಲಾಲ್ ಹೇಳಿದರು.
ಚಿತ್ರ ಕೃಪೆ: ANI
