ಕನ್ನಡ

ಬೆಂಗಳೂರಿನಿಂದ ಮೂರು ನಗರಗಳಿಗೆ ಓಡಲಿದೆ “ವಂದೇ ಭಾರತ್ ಎಕ್ಸ್‌ಪ್ರೆಸ್‌”

ಬೆಂಗಳೂರಿನಿಂದ ಮೂರು ಪ್ರಮುಖ ನಗರಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸುವ ಪ್ರಕ್ರಿಯೆ ಆರಂಭಗಾಗಿದೆ. ಈ ಮಾಹಿತಿಯನ್ನು ಕೇಂದ್ರೀಯ ರೈಲು ಮಂತ್ರಿ ಪೀಯುಷ್ ಗೊಯಲ್ ತಿಳಿಸಿದರು.

ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾದ ಅತ್ಯಾಧುನಿಕ ರೈಲು “ಟ್ರೈನ್-೧೮”ಅನ್ನು “ವಂದೇ ಭಾರತ್‌ ಎಕ್ಸ್‌ಪ್ರೆಸ್” ಎಂದು ಮರುಹೆಸರಿಸಲಾಗಿದೆ. ಈಗ ಇದನ್ನು ಬೆಂಗಳೂರು-ಮಂಗಳೂರು, ಬೆಂಗಳೂರು-ಹೈದರಾಬಾದ್, ಹಾಗೂ ಬೆಂಗಳೂರು-ಚೆನ್ನೈ ನಡುವೆ ಓಡಿಸುವ ಪ್ರಕ್ರಿಯೆ ಆರಂಭವಾಗಿದೆ.

ಈ ರೈಲು ಪ್ರಮುಖ ನಗರಗಳ ಸಂಪರ್ಕ ಕೊಂಡಿಯಾಗಲಿದೆ. ಈ ರೈಲು ಓಡುವ ಮಾರ್ಗಗಳಲ್ಲಿ ಜಾಗತಿಕ ಗುಣಮಟ್ಟದ, ಇಲ್ಲೇ ತಯಾರಿಸಲಾದ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆಯಿರಲಿದೆ.

ಈ ರೈಲು ಸದ್ಯಕ್ಕೆ ಹೊಸ ದೆಹಲಿ-ವಾರಾಣಸಿ ನಡುವೆ ಸಂಚರಿಸುತ್ತಿದೆ. “ವಂದೇ ಭಾರತ್ ಎಕ್ಸ್‌ಪ್ರೆಸ್‌” ತಾಸಿಗೆ ೧೮೦-೨೦೦ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಈ ರೈಲಿನಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದೆ. ಶತಾಬ್ದಿ ಎಕ್ಷ್‌ಪ್ರೆಸ್‌ಗೆ ಪರ್ಯಾಯವಾಗಿ ಈ ರೈಲುಗಳನ್ನು ಓಡಿಸುವ ಚಿಂತನೆಯೂ ಇದೆ.

ಇನ್ನು ಆರು ತಿಂಗಳಲ್ಲಿ ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಅಳವಡಿಸಲಾಗುವುದು ಎಂದು ಗೊಯಲ್ ಹೇಳಿದರು.

ಸಿಬಿನ್ ಪನಯಿಲ್ ಸೊಮನ್

ಉತ್ಪನ್ನ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್

Click to comment

Leave a Reply

Your email address will not be published.

four × 2 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: info@indsamachar.com

Middle East

IND SAMACHAR
Digital Media W.L.L
Flat: 11, 1st floor, Bldg: A – 0782
Road: 0123, Block: 701, Tubli
Kingdom of Bahrain

 

Download Our Mobile App

IndSamachar Android App IndSamachar IOS App
To Top
WhatsApp WhatsApp us