ಶ್ರೀಲಂಕಾ, ದಕ್ಷಿಣ ಆಫ್ರಿಕಾ ನೆಲೆಯಲ್ಲಿ ಕ್ರಿಕೆಟ್ ಟೆಸ್ಟ್ ಸರಣಿಯೊಂದನ್ನು ಗೆದ್ದ ಮೊಟ್ಟಮೊದಲ ಏಷ್ಯನ್ ತಂಡವಾಗಿದೆ.
ಡರ್ಬನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ರೋಮಾಂಚನಕಾರಿ ಗೆಲುವು ಸಾಧಿಸಿತು. ಕುಸಲ್ ಪೆರೆರಾ ಅಜೇಯ ಶತಕ ಗಳಿಸಿ ಕೊನೆಯ ಕ್ರಮಾಂಕದ ಬ್ಯಾಟುಗಾರರೊಂದಿಗೆ ಜೊತೆಯಾಟ ಕಟ್ಟಿ ಗೆಲುವು ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರು;
ದಕ್ಷಿಣ ಆಫ್ರಿಕಾ: ೨೩೫ ಮತ್ತು ೨೫೯
ಶ್ರೀಲಂಕಾ: ೧೯೧ ಮತ್ತು ೯ ವಿಕೆಟ್ ನಷ್ಟಕ್ಕೆ ೩೦೪
ಎರಡನೆಯ ಹಾಗೂ ಅಂತಿಮ ಟೆಸ್ಟ್ ಪೋರ್ಟ್ ಎಲಿಜಬೆತ್‌ನಲ್ಲಿ ನಡೆಯಿತು. ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಹಿನ್ನಡೆಗ ಸಿಲುಕಿದರೂ ಎರಡನೆಯ ಇನ್ನಿಂಗ್ಸ್‌ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿ ದಕ್ಷಿಣ ಆಫ್ರಿಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕೆಡವಿತು. ನಂತರ ಶ್ರೀಲಂಕಾ ಎಂಟು ವಿಕೆಟ್ ಅಂತರದಿಂದ ಜಯಗಳಿಸಿತು.
ಸಂಕ್ಷಿಪ್ತ ಸ್ಕೋರು;
ದಕ್ಷಿಣ ಆಫ್ರಿಕಾ: ೨೨೨ ಮತ್ತು ೧೨೮
ಶ್ರೀಲಂಕಾ: ೧೫೪ ಮತ್ತು ೨ ವಿಕೆಟ್ ನಷ್ಟಕ್ಕೆ ೧೯೭
ಇತ್ತೀಚಿನ ಕೆಲ ತಿಂಗಳುಗಳಿಂದ ಶ್ರೀಲಂಕಾ ಕ್ರಿಕೆಟ್ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಮತ್ತು ಆಟಗಾರರ ವೈಫಲ್ಯದ ಸಮಸ್ಯೆ ತಲೆಯೆತ್ತಿತ್ತು. ದಿಮುತ್ ಕರುಣಾರತ್ನೆ ಹೊಸದಾಗಿ ತಂಡದ ನಾಯಕರಾಗಿ ನೇಮಕಗೊಂಡರು. ಇವರ ನಾಯಕತ್ವವು ತಂಡಕ್ಕೆ ಚೈತನ್ಯ ತುಂಬಿದಂತಾಗಿ ದಕ್ಷಿಣ ಆಫ್ರಿಕಾ ನೆಲೆಯಲ್ಲಿ ಸರಣಿ ಗೆಲ್ಲಲು ಕಾರಣವಾಯಿತು ಎನ್ನಲಾಗಿದೆ.