ಪಾಕಿಸ್ತಾನದ ಎಫ್-೧೬ ಯುದ್ಧವಿಮಾನಗಳು ಗಡಿ ದಾಟಿ ಭಾರತ ನೆಲೆಯ ಮೇಲೆ ಹಾರಾಡಲು ಯತ್ನಿಸಿದವು, ಐಎಎಫ್ ಈ ವಿಮಾನವನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಈ ವಿಮನದಿಂದ ಪ್ಯಾರಚೂಟ್ ಮೂಲಕ ಕೆಳಕ್ಕಿಳಿದ ಪೈಲಟ್‌ನನ್ನು ಐಎಎಫ್ ಬಂಧಿಸಿ ಪೊಲೀಸರಿಗೆ ಹಸ್ತಾಂತರರಿಸಿದ್ದಾರೆ.
ಪಾಕಿಸ್ತಾನದ ಯುದ್ಧವಿಮಾನ ಭಾರತೀಯ ನೆಲೆಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಉತ್ತರ ಗಡಿಗೆ ಹತ್ತಿರವಾಗಿರುವ ಪ್ರಮುಖ ನಗರಗಳಲ್ಲಿ ಅತಿ ಕಟ್ಟೆಚ್ಚರದ ಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಭಾರತದಲ್ಲಿ ಮುಂಜಾಗರೂಕತಾ ಕ್ರಮವಾಗಿ ಶ್ರೀನಗರ, ಜಮ್ಮು ಮತ್ತು ಲೇಹ್ ವಿಮಾನ ನಿಲ್ದಾಣಗಳನ್ನು ನಾಗರಿಕ ವಿಮಾನಯಾನ ರದ್ದುಗೊಳಿಸಲಾಗಿದೆ. ಹಲವು ವಿಮಾನ ಯಾನ ಸಂಸ್ಥೆಗಳು ಸಹ ಶ್ರೀನಗರ, ಜಮ್ಮು, ಚಂಡೀಗಢ, ಅಮೃತಸರ ಮತ್ತು ಡೆಹರಾಡೂನ್ ನಗರಗಳಿಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿರವುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯಪಡಿಸಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ತರ್ತು ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಅತ್ತ, ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ ವಿದ್ಯಾಸಂಸ್ಥೆಗಳನ್ನು ಮುಚ್ಚಲಾಗಿದೆ. ಪಾಕಿಸ್ತಾನದಲ್ಲಿರುವ ಇಸ್ಲಾಮಾಬಾದ್, ಫೈಸಲಾಬಾದ್, ಮುಲ್ತಾನ್, ಸಯಾಲ್ಕೋಟ್ ಮತ್ತು ಲಾಹೋರ್ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂಬ ವರದಿಗಳು ಬಂದಿವೆ.
