“ಕಾಶ್ಮೀರ ಕಣಿವೆಯಲ್ಲಿ ಯವ ಜನತೆಯನ್ನು ಕೆಣಕಿ ರೊಚ್ಚಿಗೆಬ್ಬಿಸುವವವರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಾರೆ. ಕಣಿವೆಯಲ್ಲಿರುವ ಶಾಲೆಗಳನ್ನು ಮುಚ್ಚುವಂತೆ ಮಾಡುತ್ತಾರೆ” ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಅಮಿತ್ ಶಾ ಜಮ್ಮುವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
“‘ನಿಮ್ಮ ಮಕ್ಕಳು ಎಲ್ಲಿ ಓದುತ್ತಿದ್ದಾರೆ’ ಎಂಬ ಪ್ರಶ್ನೆಯನ್ನು ಯುವ ಜನತೆಯು ಕಾಶ್ಮೀರದ ನಾಯಕರನ್ನು ಕೇಳಬೇಕು. ಜಮ್ಮು ಮತ್ತು ಕಾಶ್ಮೀರದ ಬೊಕ್ಕಸದ ಹಣ ಬಳಸಿ ಅವರೆಲ್ಲರೂ ಲಂಡನ್, ಅಮೆರಿಕಾದಂತಹ ಸ್ಥಳಗಳಲ್ಲಿ ಓದುತ್ತಿದ್ದಾರೆ. ಅವರು ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಾರೆ, ಕಣಿವೆಯಲ್ಲಿ ಯುವಕರನ್ನು ಕೆಣಕುತ್ತಾರೆ ಹಾಗೂ ಪ್ರತ್ಯೇಕತವಾದವನ್ನು ಪ್ರಚೋದಿಸುತ್ತಾರೆ. ಇಲ್ಲಿ ಶಾಲೆಗಳನ್ನು ಮುಚ್ಚಿಸುವವರೆಲ್ಲರೂ ಸಹ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುತ್ತಾರೆ” ಎಂದು ಅಮಿತ್ ಶಾ ಹೇಳಿದರು.
ಕಾಂಗ್ರೆಸ್, ನ್ಯಾಷನಲ್ ಕಾನ್ಫೆರೆನ್ಸ್ ಮತ್ತು ಪಿಡಿಪಿ ಈ ಮೂರೂ ಪಕ್ಷಗಳು ಕುಟುಂಬವಾದಿ ಪಕ್ಷಗಳು, ದೇಶವನ್ನು ಕಡೆಗಾಣಿಸಿ ಕೇವಲ ಕುಟುಂಬದ ಬಗ್ಗೆಯೇ ಯೊಚಿಸುತ್ತವೆ ಎಂದರು.
“ನಾವು ಎಂದಿಗೂ ಈ ದೇಶದಲ್ಲೇ ಉಳಿಯುವೆವು. ಆಗಾಗ್ಗೆ ರಜೆಯ ಮೇಲೆ ಲಂಡನ್‌ಗೆ ಹೋಗುವವರಲ್ಲ” ಎಂದು ಅಮಿತ್ ಶಾ ಫಾರೂಕ್ ಅಬ್ದುಲ್ಲಾ ಬಗ್ಗೆ ಹೇಳಿದರು.
“ಭಯೋತ್ಪಾದಕರನ್ನು ಯಾವುದೇ ಮುಲಾಜಿಲ್ಲದೇ ಸಂಹಾರ ಮಾಡಲಾಗುವುದು. ಪುಲ್ವಾಮಾ ಧಾಳಿಗೆ ಪ್ರತೀಕಾರ ತೀರಿಸುವೆವು” ಎಂದು ಅಮಿತ್ ಶಾ ಎಚ್ಚರಿಕೆ ನೀಡಿದರು.
