ಭಾರತ ಸರ್ಕಾರವು ಸಣ್ಣ ಹಾಗೂ ಅತಿ ಸಣ್ಣ ರೈತರ ಆಧಾಯ ವೃದ್ದಿಸಲು “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ” (PM-KISAN) ಯೋಜನೆಯನ್ನು ಘೋಷಿಸಿದೆ.
ಈ ಘೋಷಣೆಯನ್ನು ಪತ್ರ ಸಂಖ್ಯೆ No1-1/2019 Credit, ದಿನಾಂಕ: ೦೧-೦೨-೨೦೧೯ರಂದು ಘೋಷಿಸಲಾಯಿತು.
ಸದರಿ ಯೋಜನೆಯಡಿ ೨ ಹೆಕ್ಟೆರಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ೩ ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು ೬,೦೦೦ ರೂಪಾಯಿಗಗಳನ್ನು ನೀಡಲು ಸರ್ಕಾರವು ಉದ್ದೇಶಿಸಿದೆ. ಅರ್ಹ ಪಲಾನುಭವಿಗಳು ರೈತರ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯತಿಗಳಲ್ಲಿ ಶೀಘ್ರವಾಗಿ ಪ್ರಕಟಿಸಲಾಗುವುದು.
ಸದರಿ ಸಂಭಾವ್ಯ ಅರ್ಹ ಪಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾಮಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ. ಹೆಸರು ನೊಂದಾವಣಿಯಾಗದ ರೈತರು “ಅನುಬಂದ ಡಿ” ಅರ್ಜಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಅರ್ಜಿಯನ್ನು ಸಮಯವಕಾಶ ಕಡಿಮೆ ಇರುವ ಕಾರಣ ಬೇಗ ಸಲ್ಲಿಸಬೇಕಾಗಿ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.
ರೈತರು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಲಾದ ಅಂತರಜಾಲತಾಣಕ್ಕೆ ಭೇಡಿ ನೀಡಬಹುದು. ಫಲಾನುಭವಿ ರೈತರ ಹೆಸರುಗಳನ್ನು ಈ ಅಂತರಜಾಲತಾಣಕ್ಕೆ ಸೇರಿಸಲು ಕೊನೆಯ ದಿನಾಂಕ ೨೫ ಫೆಬ್ರುವರಿ ೨೦೧೯.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಂತರಜಾಲತಾಣ ಇಲ್ಲಿದೆ: http://www.pmkisansammannidhi.in/
