“ಕಾರವಾನ್-ಎ-ಅಮನ್” ಎಂಬ ಹೆಸರಿನ ಬಸ್ಸು, ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಹಾಗೂ ಪಾಕಿಸ್ತಾನ-ಅಕ್ರಮಿತ ಕಾಶ್ಮೀರದ ರಾಜಧಾನಿ ಮುಜಫರಾಬಾದ್ ನಡುವೆ ಸಾರಿಗೆ ಸೇವೆ ಸಲ್ಲಿಸುತ್ತಿದೆ.
ಪ್ರಯಾಣಿಕರಿಲ್ಲದ ಈ ಬಸ್ಸು ಇಂದು ಬೆಳಿಗ್ಗೆ ೭.೩೦ಗೆ ಶ್ರೀನಗರದ ಬೆಮಿನಾದಿಂದ ಕಮಾನ್ ಪೋಸ್ಟ್ ಕಡೆಗೆ ಹೊರಟಿತು. ಉರಿ ವಲಯದ ಎಲ್‌ಒಸಿ ಗಡಿಯಲ್ಲಿರುವ ಕಮಾನ್ ಪೊಸ್ಟ್, ಭಾರತೀಯ ಸೇನೆಯ ಕೊನೆಯ ಪೋಸ್ಟ್ ಆಗಿದೆ.
ಮಾರ್ಗದಲ್ಲಿ ಬಸ್ಸು ಟಿಎಫ್‌ಸಿ (Trade Facility Centre) ತಲುಪಿ, ಅಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಕಮಾನ್ ಪೋಸ್ಟ್ ಕಡೆ ಹೊರಡಲಿದೆ. ಬಸ್ಸಿನಲ್ಲಿ ಪಿಒಕೆ ಕಡೆ ಪ್ರಯಾಣಿಸುವವರ ಸಂಖ್ಯೆ ಮಧ್ಯಾಹ್ನ ಗೊತ್ತಾಗುವುದು; ಇದೇ ರೀತಿ, ಪಿಒಕೆಯಿಂದ ಶ್ರೀನಗರದ ಕಡೆ ಪ್ರಯಾಣಿಸುವವರ ಸಂಖ್ಯೆ ಸಂಜೆ ಗೊತ್ತಾಗುವುದು ಎಂದು ಮೂಲಗಳು ತಿಳಿಸಿವೆ.
ಚಳಿಗಾಲದಲ್ಲಿ ಉಷ್ಣಾಂಶ ಸೊನ್ನೆಗಿಂತಲೂ ಕಡಿಮೆಯಾಗಲಿದೆ. ಇದರ ಕಾರಣ, ಪಿಒಕೆಯಿಂದ ಶ್ರೀನಗರಕ್ಕೆ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿ, ಬೇಸಿಗೆಯಲ್ಲಿ ಹೆಚ್ಚಾಗುತ್ತದೆ. ಇದೇ ರೀತಿ, ಚಳಿಗಾಲದಲ್ಲಿ ಪಿಒಕೆ ಕಡೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿ ಬೇಸಿಗೆಯಲ್ಲಿ ಕಡಿಮೆಯಾಗುತ್ತದೆ.
೨೦೦೫ರ ಏಪ್ರಿಲ್ ೭ರಂದು ಈ ಬಸ್ಸಿನ ಸೇವೆ ಆರಂಭಗೊಂಡಿತು. ೧೯೪೭ರಲ್ಲಿ ಭಾರತವು ಇಬ್ಭಾಗವಾಗಿ ಪ್ರತೇಕಗೊಂಡ ಹಲವಾರು ಕುಟುಂಬಗಳ ಪಾಲಿಗೆ ಈ ಬಸ್ಸು ವರವಾಗಿದೆ.
