ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯದ ಜಲ ಸಂಪನ್ಮೂಲ ಖಾತೆ ಸಚಿವ ಡಿಕೆ ಶಿವಕುಮಾರ್, ತಮ್ಮ ವಿರುದ್ಧ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳು ದಾಖಲಿಸಿದ ಹಲವು ಪ್ರಕರಣಗಳ ಸಿಂಧುತ್ವವನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಸದರಿ ಇಲಾಖೆಗಳು ಐಪಿಸಿ, ಐಟಿ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ತಾವು ದಾಖಲಿಸಿದ ಪ್ರಕರಣಗಳನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿವೆ. ಶಿವಕುಮಾರ್ ಸಲ್ಲಿಸಿದ ಮನವಿಯ ವಿರುದ್ಧ ಅವು ತಮ್ಮ ಆಕ್ಷೇಪಗಳನ್ನು ಸಲ್ಲಿಸಿವೆ.
ಶಿವಕಕುಮಾರ್ ಪರ ವಕೀಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ತಮ್ಮ ವಾದ ಮಂಡಿಸಲು ಎರಡು ತಾಸುಗಳ ಕಾಲಾವಕಾಶ ಕೋರಿದ ಪರಿಣಾಮವಾಗಿ ವಿಚಾರಣೆ ಆಲಿಸುತ್ತಿದ್ದ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮುಂದಿನ ವಿಚಾರಣೆಯನ್ನು ಮಾರ್ಚ್ ೭ಕ್ಕೆ ಮುಂದೂಡಿದರು.
ಅಕ್ರಮ ಹಣ ವರ್ಗಾವಣೆಗ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯವು ಡಿಕೆ ಶಿವಕುಮಾರ್‌ಗೆ ನೋಟೀಸ್ ನೀಡಿತ್ತು. ಅಕ್ರಮ ವಿಶೇಷ ತೆರಿಗೆ ವಿನಾಯಿತಿಗೆ ಸಂಬಂಧಿಸಿ ಶಿವಕುಮಾರ್‌ರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿತ್ತು.
ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿರುವ ಕಾರಣ ನೋಟೀಸನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯವು ತನ್ನ ಆಕ್ಷೇಪದಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ.
ಐಟಿ ಇಲಾಖೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ವಿಚಾರಣೆ ನಡೆಸುತ್ತಿದೆ. ಶಿವಕುಮಾರ್ ಸರಿಯಾದ ಲೆಕ್ಕಪತ್ರಗಳಾಗಲಿ, ದಾಖಲೆಗಳಾಗಲಿ ಇಟ್ಟಿರಲಿಲ್ಲ, ನಗದು ಹಣದ ಮೂಲವನ್ನು ವಿವರಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದಿಸಿದೆ.
ಚಿತ್ರ ಕೃಪೆ: ಡಿಕೆ ಶಿವಕುಮಾರ್ ಟ್ವಿಟರ್ @dkshivakumar

ಸಿಬಿನ್ ಪನಯಿಲ್ ಸೊಮನ್
ಉತ್ಪನ್ನ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್
WhatsApp us