ಬಿ ಎಸ್ ಯಡಿಯೂರಪ್ಪ ಅವರು ಜಾತ್ಯಾತೀತ ಜನತಾ ದಳದ ಒಬ್ಬ ಶಾಸಕರಿಗೆ ಹಣದ ಆಮಿಷ ಒಡ್ಡಿದ ಆರೋಪದ ತನಿಖೆ ನಡೆಸುವಂತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀವು ಇಂದು ಆದೇಶಿಸಿದೆ.
ಈ ತನಿಖೆಯ ವಿರುದ್ಧ ತಡೆಯಾಜ್ಞೆ ಹಾಗೂ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಯಡಿಯೂರಪ್ಪ ಅವರು ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ನೀಡಿದ ದೂರಿನ ಪ್ರಕರಣದಲ್ಲಿ ಯಡಿಯೂರಪ್ಪ, ಪ್ರೀತಮ್ ಗೌಡ, ಶಿವಣ್ಣ ಗೌಡ ಮತ್ತು ಮರಕಲ್ ಅವರಿಗೆ ಜಾಮೀನು ದೊರಕಿತು.
ಜಾಮೀನು ನೀಡಿದ ನಗರ ವಿಶೇಷ ನ್ಯಾಯಾಲಯವು, ನಾಲ್ವರೂ ಸಹ ತಲಾ ೧ ಲಕ್ಷ ರೂಪಾಯಿಗಳ ಬಾಂಡ್ ನೀಡಲು ಆದೇಶಿಸಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆಗೊಳಿಸಿದ ಆಡಿಯೋ ಟೇಪ್ ನಲ್ಲಿ ಯಡಿಯೂರಪ್ಪ ಅವರ ದ್ವನಿಯು ಶರಣಗೌಡರೊಂದಿಗೆ ಮಾತುಕತೆ ನಡೆಸಿತ್ತು.
ಈ ಪ್ರಕರಣವನ್ನು ತನಿಖೆ ಮಾಡಲು ಎಸ್‌ಐಟಿ ಬದಲು ಸದನ ಸಮಿತಿ ರಚನೆಯಾಗಬೇಕು, ಏಕೆಂದರೆ ಮುಖ್ಯಮಂತ್ರಿಯವರ ಆಧೀನದಲ್ಲಿರುವ ಎಸ್‌ಐಟಿ ನಿಷ್ಪಕ್ಷಪಾತ ತನಿಖೆ ನಡೆಸಲಾರದು ಎಂದು ಯಡಿಯೂರಪ್ಪನವರು ಪಟ್ಟು ಹಿಡಿದಿದ್ದರು.
