ಮೋದಿಯವರು ಮತ್ತೆ ಪ್ರಧಾನಿಯಾಗದಿದ್ದಲ್ಲಿ ನಮ್ಮ ದೇಶಕ್ಕೆ ೫೦ ವರ್ಷಗಳ ಹಿನ್ನಡೆಯುಂಟಾಗಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಎಚ್ಚರಿಸಿದರು.
ಬೆಂಗಳೂರಿನಲ್ಲಿ “ಥಿಂಕರ್ಸ್ ಫೊರಮ್” ಆಯೋಜಿಸಿದ ಅನೌಪಚಾರಿಕ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಾವು ಯಾಮಾರಿದರೆ, ಸದೃಡ ಮತ್ತು ಬಹುಮತ ಹೊಂದಿರುವ ಸರ್ಕಾರಕ್ಕಾಗಿ ಶ್ರಮಿಸದಿದ್ದರೆ, ನಮ್ಮ ದೇಶ ಕನಿಷ್ಠ ಪಕ್ಷ ೫೦ ವರ್ಷಗಳ ತನಕ ಹಿನ್ನಡೆ ಅನುಭವಿಸಬೇಕಾದೀತು ಎಂದು ರಕ್ಷಣಾ ಸಚಿವೆ ಎಚ್ಚರಿಕೆಯ ಕರೆ ನೀಡಿದರು.
ಭಾರತೀಯ ಜನತಾ ಪಕ್ಷದ ಸರ್ಕಾರವು ಮಾಡಿರುವ ಕೆಲಸವನ್ನು ಗುರುತಿಸಲಾಗದಿದ್ದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವವರ ನಂಬಿಕೆಗೆ ದ್ರೋಹ ಮಾಡಿದಂತಾಗುವುದು, ಇದಕ್ಕೆ ಆಸ್ಪದ ಕೊಡಬಾರದು ಎಂದು ಅವರು ಹೇಳಿದರು.
ನರೇಂದ್ರ ಮೋದಿಯವರ ನಾಯಕತ್ವವನ್ನು ಹೊಗಳಿದ ನಿರ್ಮಲಾ ಸೀತಾರಾಮನ್, ಈ ತರಹದ ನಾಯಕತ್ವ ಸಿಗುವುದು ವಿರಳ ಎಂದು ಅವರು ಹೇಳಿದರು.
ಪ್ರಧಾನಿಯವರು ಕಳೆದ ಐದು ವರ್ಷಗಳ ಕಾಲದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ದೇಶದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಇತರೆ ಮಂತ್ರಿಗಳಿಗೆ ಪ್ರೋತ್ಸಾಹಿಸುತ್ತಿದ್ದರು, ಸಮರ್ಕಪಕವಾಗಿ ಕೆಲಸ ಮಾಡದಿದ್ದಾಗ ತರಾಟೆಗೆ ತೆಗೆದುಕೊಂಡಂದ್ದೂ ಉಂಟು.
ಕಳೆದ ಐದು ವರ್ಷಗಳಿಂದ ಯಾವುದೇ ಭ್ರಷ್ಟಾಚಾರದ ಕುರುಹೂ ಇಲ್ಲದಿದ್ದರಿಮದ ಕಾಂಗ್ರೆಸ್ ಅಧ್ಯಕ್ಷ ವಿಚಾರಗಳನ್ನು ಕೆದಕುವಂತೆ ಮಾಡಿದೆ ಎಂದು ರಕ್ಷಣಾ ಸಚಿವೆ ಹೇಳಿದರು.
ಕಾಶ್ಮೀರ ಹೊರತುಪಡಿಸಿ ದೇಶದಲ್ಲಿ ಇನ್ನೆಲ್ಲೂ ಸಹ ಭಯೊತ್ಪಾದಕ ಕೃತ್ಯ ನಡೆದಿಲ್ಲ. ಇದಕ್ಕೆ ನಮ್ಮ ಸರ್ಕಾರ ಭದ್ರತೆಗಾಗಿ ಕೈಗೊಂಡ ಕ್ರಮಗಳು ಫಲ ಬೀರುತ್ತಿವೆ ಎಂದರು.
ಪ್ರತಿಯೊಬ್ಬರೂ ಚುನಾವಣಾ ಪ್ರಚಾರಕರಾಗಿ ಮೋದಿಯವರ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು.
