ದೂರದರ್ಶನ ವಾಹಿನಿಯ ಮೂಲಕ ತಮ್ಮ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶಾಂತಿಗಾಗಿ ಅವಕಾಶ ನೀಡಬೇಕು ಎಂದರು.
ಭಾರತ ಯಾವುದಾದರೂ ದೃಢ ಸಾಕ್ಷ್ಯ ಒದಗಿಸಿದಲ್ಲಿ ನಮ್ಮ ಸರ್ಕಾರ ಪುಲ್ವಾಮಾ ಭಯೋತ್ಪಾದನಾ ಕೃತ್ಯದ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಇಮ್ರಾನ್ ಹೇಳಿದರು.
ಒಬ್ಬ ಪಠಾನ್ ಆಗಿ ತಾವು ಆಡಿದ ಮಾತು ಉಳಿಸಿಕೊಂಡು, ಬಡತನ ಮತ್ತು ಅನಕ್ಷರತೆ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರು ಇಮ್ರಾನ್‌ಗೆ ಕಿವಿಮಾತು ಹೇಳಿದ ಹಿನ್ನೆಲೆಯಲ್ಲಿ ಇಮ್ರಾನ್ ಈ ಹೇಳಿಕೆ ನೀಡಿದರು.
೨೦೧೫ರ ಡಿಸೆಂಬರ್ ತಿಂಗಳಲ್ಲಿ ಇಮ್ರಾನ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭೇಟಿಯಾದರು. “ಆಗ ಬಡತನ ನಿರ್ಮೂಲನೆ ಎರಡೂ ದೇಶಗಳ ಆದ್ಯತೆ, ಹಾಗೂ ಯಾವುದೇ ಭಯೋತ್ಪಾದನಾ ಕೃತ್ಯ ಶಾಂತಿಗೆ ಧಕ್ಕೆ ತರಬಾರದು ಎಂದು ಒಪ್ಪಿಕೊಂಡಿದ್ದೆವು. ಆದರೆ ಪುಲ್ವಾಮಾಗೂ ಮುಂಚೆ ಈ ಪ್ರಯತ್ನಗಳು ಹಳಿತಪ್ಪಿದವು” ಎಂದು ಹೇಳಿದರು.
ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿ ೩೫ಎ ಸಂವಿಧಾನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗಳನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಗೆ ಎತ್ತಿಕೊಳ್ಳಲಿರುವ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತಳಮಳ ವ್ಯಕ್ತಪಡಿಸಿದೆ.
