ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಸಿಒಎ ತಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿಬೇಕಿದೆ ಎಂದು ತಿಳಿಸಿದೆ.
ಸಿಒಎ ಇಂದು ಮಧ್ಯಾಹ್ನ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಆಧಿಕಾರಿಗಳೊಂದಿಗೆ ಸಭೆ ನಡೆಸಿತು.
ಈ ಸಮಿತಿಯು, ಭಯೋತ್ಪಾದಕರಿಗೆ ಬೆಂಬಲ ನೀಡುವ ರಾಷ್ಟ್ರಗಳೊಂದಿಗೆ ಯಾವುದೇ ಪಂದ್ಯಗಳನ್ನು ಆಡದಿರುವ ತನ್ನ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಪರಿಷತ್‌ಗೆ ಪತ್ರ ಬರೆಯಲು ಸಿಒಎ ನಿರ್ಧರಿಸಿದೆ.
ಐಸಿಸಿ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯು ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಜೂನ್ ತಿಂಗಳ ೧೬ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನಾಡಬೇಕಿದೆ.
ಪುಲ್ವಾಮಾದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಧಾಳಿ ನಡೆದ ಹಿನ್ನೆಲೆಯಲ್ಲಿ, ಭಾರತ ಮತ್ತು ಪಾಕಿಸ್ತಾನ ವಿಶ್ವ ಕಪ್ ಪಂದ್ಯದಲ್ಲಿ ಆಡಲೇಬೇಕೇ ಎಂಬುದರ ಬಗ್ಗೆ ಸಿಒಎನಲ್ಲಿ ಒಮ್ಮತದ ಅಭಾವವಿದೆ.
ಭಾರತದ ಹಲವು ಮಾಜಿ ಕ್ರಿಕೆಟಿಗರು, ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಯಾವುದೇ ರೀತಿಯ ಕ್ರೀಡಾ ಪಂದ್ಯಗಳನ್ನು ಆಡಬಾರದು; ಕ್ರೀಡೆಗಿಂತ ದೇಶದ ಭಾವನೆಗಳು ಮುಖ್ಯ ಎಂದು ಹೇಳಿದ್ದಾರೆ.
ಈ ವರ್ಷ ಐಪಿಎಲ್ ಪಂದ್ಯಾವಳಿಯ ಆರಂಭಿಕ ಕಾರ್ಯಕ್ರಮವಿರುವುದಿಲ್ಲ. ಇದಕ್ಕೆ ಬಳಸಬೇಕಾಗಿರುವ ಹಣವ್ನನು ಪುಲ್ವಾಮಾ ಹುತಾತ್ಮರ ಕುಟುಂಬಗಳಿಗೆ ನೀಡಲಾಗುವುದು ಎಂದು ಸಿಒಎ ನಿರ್ಧರಿಸಿತು.
WhatsApp us