ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಲವು ಕ್ರಾಂತಿಕಾರಿ ಯೋಜನೆಗಳನ್ನು ಚಾಲ್ತಿಗೊಳಿಸಿದೆ. ಆಯುಷ್ಮಾನ್ ಭಾರತ್, ಅನಿಲ ಸಂಪರ್ಕ, ಗ್ರಾಮ ಪಂಚಾಯತ್ಗಳಿಗೆ ೨ ಲಕ್ಷ ಕೋಟಿ ರೂಪಾಯಿ ನೇರ ಅಉದಾನ, ರೈತ-ಸ್ನೇಹಿ ಯೋಜನೆಗಳು ಸೇರಿದಂತೆ ಪ್ರಮುಖ ಯೋಜನೆಗಳು ದೇಶದ ಅರ್ಧದಷ್ಟು ಜನಸಂಖ್ಯೆಗೆ ನೆರವಾಗಿವೆ ಎಂದು ಕೇಂದ್ರ ಪಂಚಾಯತ್ರಾಜ್ ಮತ್ತು ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ ರೂಪಾಲ್ ಹೇಳಿದರು.
ರೂಪಾಲ್, ಭಾರತೀಯ ಜನತಾ ಪಕ್ಷದ ವತಿಯಿಂದ, ನಗರದ ಎಚ್ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಲಾದ ಪ್ರಬುದ್ಧರ ಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಿಂದೆ ಸಂಸದರಾದವರಿಗೆ ೨೫ ಅನಿಲ ಸಂಪರ್ಕ ಕೊಡಿಸುವ ಅಧಿಕಾರವಿತ್ತು. ಈಗ 6 ಕೋಟಿ ಅನಿಲ ಸಂಪರ್ಕ ದೊರಕಿರುವುದು, ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ನೇರ ಅನುದಾನ ನೀಡಿರುವುದು, ಹಾಗೂ ಸರ್ಕಾರ ಜಿಎಸ್ಟಿಗೆ ಬದ್ಧ್ರವಾಗಿರುವುದು ದೇಶದ ಇತಿಹಾಸವನ್ನೇ ಬದಲಿಸುತ್ತಿದೆ ಎಂದು ಹೇಳಿದರು.
ಈ ಸಮಯದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ಭಗವಂತ್ ಖೂಬಾ ಅವರೂ ಸಹ ಮಾತನಾಡಿದರು.
ಕಲಬುರಗಿ ವಿಮಾನ ನಿಲ್ದಾಣದ ಸಿದ್ಧತೆ ಸಂಪೂರ್ಣಗೊಳ್ಳುತ್ತಿದ್ದು, ಲೋಕಸಭಾ ಚುನಾವಣೆಗಳ ನಂತರ ಇಲ್ಲಿಂದ ವಿಮಾನ ಹಾರಾಟ ಅರಂಭವಾಗಲಿದೆ ಎಂದರು.
ಚಿತ್ರಕೃಪೆ: Dailyhunt.in
ಸಿಬಿನ್ ಪನಯಿಲ್ ಸೊಮನ್
ಉತ್ಮನ್ನ ವ್ಯವಸ್ಥಾಪಕರು ಹಾಗೂ ಪ್ರಾದೇಶಿಕ ಮುಖ್ಯಸ್ಥರು, ಇಂಡ್ಸಮಾಚಾರ್
