ಕನ್ನಡ

ನಿಮ್ಮ ಸಂಗಾತಿ ಯಾರು?

ನಿಮ್ಮ ಸಂಗಾತಿ ಯಾರು?

ಅಮ್ಮ / ಅಪ್ಪ / ಹೆಂಡತಿ / ಗಂಡ / ಮಗಳು / ಸ್ನೇಹಿತರು

ಮೇಲೆ ತಿಳಿಸಿದವರ ಪೈಕಿ ಇವರ್ಯಾರೂ ಅಲ್ಲ. ನಿಮ್ಮ ಶರೀರವೇ ನಿಮ್ಮ ಸಂಗಾತಿ. ನಿಮ್ಮ ಶರೀರದ ಸ್ಪಂದನ ಸ್ಥಗಿತಗೊಂಡಲ್ಲಿ ನಿಮ್ಮೊಂದಿಗೆ ಯಾರೂ ಇರುವುದಿಲ್ಲ. ನೀವು ಮತ್ತು ನಿಮ್ಮ ಶರೀರ ಹುಟ್ಟಿನಿಂದ ಸಾವಿನ ತನಕ ಒಟ್ಟಿಗೆಯೇ ಇರುತ್ತೀರಿ. ನಿಮ್ಮ ಶರೀರದೊಂದಿಗೆ ಏನು ಮಾಡುಕೊಳ್ಳುವಿರೋ ಅದು ನಿಮ್ಮ ಸಂಪೂರ್ಣ ಹೊಣೆಗಾರಿಕೆಯಾಗಿರುತ್ತದೆ, ಅದು ನಿಮಗೇ ವಾಪಸ್ ಬರುತ್ತದೆ. ನಿಮ್ಮ ಶರೀರದ ಕಾಳಜಿ ವಹಿಸಿದಷ್ಟು ನಿಮ್ಮ ಶರೀರ ನಿಮ್ಮ ಕಾಳಜಿ ವಹಿಸುತ್ತದೆ. ನೀವು ಸೇವಿಸುವ ಆಹಾರ, ಮಾಡುವ ವ್ಯಾಯಾಮ, ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ, ಎಷ್ಟು ವಿಶ್ರಾಂತಿ ನೀಡುತ್ತೀರಿ ಇವೆಲ್ಲವೂ ಲೆಕ್ಕಕ್ಕೆ ಬರುತ್ತವೆ.

ನಿಮ್ಮ ಶರೀರವೇ ನೀವು ವಾಸಿಸುವ ವರ್ತಮಾನ ಮತ್ತು ಖಾಯಂ ವಿಳಾಸ. ನಿಮ್ಮ ಶರೀರವೇ ಯಾರೊಂದಿಗೂ ಹಂಚಿಕೊಳ್ಳಲಾಗದ ನಿಮ್ಮ ಸ್ವತ್ತು. ನಿಮ್ಮ ಶರೀರವೇ ನಿಮ್ಮ ಜೀವ ಸಂಗಾತಿ. ಎಂದೆಂದಿಗೂ ಆರೋಗ್ಯದಿಂದಿರಿ, ನಿಮ್ಮ ಕಾಳಜಿಯನ್ನು ನೀವೇ ವಹಿಸಿಕೊಳ್ಳಿ. ದುಡ್ಡು ಇಂದು ಬರುತ್ತದೆ ನಾಳೆ ಹೋಗುತ್ತದೆ. ಮಿತ್ರ-ಬಂಧು-ಬಳಗದವರು ಶಾಶ್ವತರಲ್ಲ. ನಿಮ್ಮನ್ನು ಹೊರತುಪಡಿಸಿ ಇವರು ಯಾರೂ ನಿಮ್ಮ ಶರೀರಕ್ಕೆ ಸಹಾಯ ಮಾಡಲಾರರು.

ಇವನ್ನು ದಿನವೂ ಮಾಡಿ:

  • ಶ್ವಾಸಕೋಶಗಳಿಗಾಗಿ ಪ್ರಾಣಾಯಾಮ
  • ಮನಸ್ಸಿಗಾಗಿ ಧ್ಯಾನ
  • ಶರೀರಕ್ಕಾಗಿ ಯೋಗ
  • ಹೃದಯಕ್ಕಾಗಿ ಕಾಲ್ನಡಿಗೆ
  • ಕರುಳಿಗಾಗಿ ಒಳ್ಳೆಯ ಆಹಾರ
  • ಆತ್ಮಕ್ಕಾಗಿ ಒಳ್ಳೆಯ ಚಿಂತನಗಳು
  • ಪ್ರಪಂಚಕ್ಕಾಗಿ ಒಳ್ಳೆಯ ಕರ್ಮ
Click to comment

Leave a Reply

Your email address will not be published. Required fields are marked *

three × three =

To Top
WhatsApp WhatsApp us