ಆನಂದಪುರಂ ಸಮೀಪದ ಇರುವಕ್ಕಿ ಕಾಡಿನಲ್ಲಿ ನಿನ್ನೆ ರಾತ್ರಿ ಸತ್ತ ಮಂಗ ಪತ್ತೆ!
ನೂತನವಾಗಿ ನಿಮಾ೯ಣ ಆಗುತ್ತಿರುವ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ, ಯಡೇಹಳ್ಳಿ ಗ್ರಾ.ಪಂ.ನ ಇರುವಕ್ಕಿ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ಸಮೀಪದ ಕಾಡಿನಲ್ಲಿ ಮಂಗ ಒ೦ದು ಮೃತ ಪಟ್ಟಿದ್ದು ನಿನ್ನೆ ರಾತ್ರಿ (7 ಜನವರಿ 2019ರ ಸೋಮವಾರ ) ಅರಣ್ಯ ಇಲಾಖೆ, ಮಂಗನ ಕಾಯಿಲೆಗೆ ಸಂಬಂದ ಪಟ್ಟ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯವರು ಸುಟ್ಟು ಹಾಕಿದ್ದಾರೆ.
ಶಾಸಕ ಹರತಾಳು ಹಾಲಪ್ಪರ ಹರತಾಳು ಗ್ರಾಮದ ಮನೆ ಇಲ್ಲಿ೦ದ 5-6 ಕಿ.ಮೀ ದೂರದಲ್ಲಿದೆ.
ಯಾವುದೇ ಕಾಯಿಲೆ ಹರಡಿದ ವರದಿ ಆಗಿಲ್ಲ ಆದರೆ ಮುಂಜಾಗ್ರತೆಗೆ ಬಳಸುವ ಎಣ್ಣಿ ಸಮೀಪದ ಗ್ರಾಮ ಪಂಚಾಯತ್ ಕೇಂದ್ರಕ್ಕೆ ಅಥವ ಆನಂದ ಪುರದ ಆಸ್ಪತ್ರೆಗೆ ಬಂದಿಲ್ಲ.
ನಿಯೋಜಿತ ವಿಶ್ವವಿದ್ಯಾಲಯ ಕಾಮಗಾರಿ ಪ್ರಗತಿಯಲ್ಲಿದ್ದು ನೂರಾರು ಕಾಮಿ೯ಕರು ಕೆಲಸ ಮಾಡುತ್ತಿದ್ದು ಬೇರೆ ಬೇರೆ ರಾಜ್ಯದಿಂದ ಬಂದವರಿದ್ದಾರೆ, ಇರುವಕ್ಕಿ ಗ್ರಾಮದ ವಾಸಿಗಳ ಜೊತೆ ತಕ್ಷಣ ಇವರುಗಳಿಗೆ ರೋಗ ನಿರೋದಕ ಚುಚ್ಚುಮದ್ದು ನೀಡದಿದ್ದರೆ ಈ ಕಾಯಿಲೆ ಇನ್ನೊಂದು ರಾಜ್ಯಕ್ಕೆ ಹರಡುವ ಭೀತಿ ಇದೆ.
ಸಾಗರ ತಾಲ್ಲೂಕಿನ 5 ಹೋಬಳಿಗಳಲ್ಲಿ 3 ಹೋಬಳಿಗಳಲ್ಲಿ ಮಂಗಗಳು ಸಾಯುತ್ತಿರುವ ವರದಿ ಆಗಿದೆ
Author : Arun Prasad Anandapuram
