ಶಿವಮೊಗ್ಗ : ಕಳೆದ ಮಳೆಗಾಲದಲ್ಲಿ ರಾಜ್ಯದ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ನಡೆದ ಪ್ರಕೃತಿ ವಿಕೋಪದ ದುರಂತ ನಮ್ಮ ಕಣ್ಣ ಎದುರು ಇದೆ.
ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದ ಸಮೀಪ ವಿಠಲನಗರ, ಮೇಗರವಳ್ಳಿ, ಶಿರೂರು, ಆಗುಂಬೆ ಹಾಗೂ ಮುಖ್ಯವಾಗಿ ಮಾಸ್ತಿಕಟ್ಟೆ, ಯಡೂರು ಪ್ರದೇಶಗಳಲ್ಲಿ ಭೂಕಂಪವಾಗಿ ೨ ಬಾರಿ ನಡೆದ ಘಟನೆಯಿಂದ ಜನತೆ ಭೀತಿಯಾಗಿದ್ದಾರೆ. ಕಾಡಿನ ನಾಶ, ಮಾಲತಿ, ವರಾಹಿ, ತುಂಗಾ ನದಿಗಳಲ್ಲಿ ಹಾಗೂ ಹತ್ತಾರು ಹಳ್ಳಿಗಳಲ್ಲಿ ಮರಳು ತೆಗೆದು ನೀರಿನ ಮೂಲ ಹಾಗೂ ನದಿಯ ಮೂಲಗಳಿಗೆ ಧಕ್ಕೆಯಾಗಿದೆ. ಅರಣ್ಯ ಕಂದಾಯ ಭೂಮಿ ಒತ್ತುವರಿ ಮಾಡಿಕೊಂಡು ಸಾವಿರಾರು ಲೋಡ್ ಮಣ್ಣು ತೆಗೆದು ಭೂಮಿನಾಶವಾಗುತ್ತಿದೆ. ಎಂಪಿಎಂ ಖಾಸಗಿಯವರು ಸ್ವಾಭಾವಿಕ ಮತು ನೈಸರ್ಗಿಕವಾಗಿ ಬೆಳೆದ ಅರಣ್ಯ ನಾಶ ಮಾಡಿ ಅಕೇಶಿಯಾ, ನೀಲಗಿರಿ ಮರಗಳನ್ನು ಬೆಳೆಸುತ್ತಿದ್ದಾರೆ. ಹೊರ ರಾಜ್ಯದವರು ಬಂದು ಶುಂಠಿ, ರಬ್ಬರ್ ಬೆಳೆಯಲು ಕಾಡು ನಾಶ ಮಾಡುತ್ತಿದ್ದಾರೆ. ಅನುಮತಿ ಇಲ್ಲದೇ ಗುಡ್ಡಗಳನ್ನು ಬಗೆದು ಮಣ್ಣು ತೆಗೆದು ನಾಶ ಮಾಡುತ್ತಿದ್ದಾರೆ. ಅಡಿಕೆ ತೋಟ, ಕಾಡುನಾಶ ಮಾಡಿ ಲೇಔಟ್ ನಿರ್ಮಿಸಲಾಗುತ್ತದೆ.
ಮೇಲೆ ತಿಳಿಸಲಾದ ಈ ಎಲ್ಲಾ ಸಮಸ್ಯೆಗಳಿಗೆ ಕಂದಾಯ, ಅರಣ್ಯ, ಭೂವಿಜ್ಞಾನ, ಗಣಿ ಮತ್ತು ಪರಿಸರ ಅಧಿಕಾರಿಗಳು ಕೆಲವರು ಶಾಮೀಲಾಗಿದ್ದಾರೆ. ಜೊತೆಯಲ್ಲಿ ಜನಪ್ರತಿನಿಧಿಗಳ ಒತ್ತಡ ರಾಜಕೀಯ ಪ್ರಭಾವ ಜನರ ದುರಾಸೆಗಳೆಂದರೆ ತಪ್ಪಾಗಲಾರದು. ಪ್ರಮಾಣಿಕ ದಕ್ಷ ಅರಣ್ಯ ಅಧಿಕಾರಿಗಳನ್ನು ಸೇವೆ ಸಲ್ಲಿಸಲು ಬಿಡದೇ ಅಕಾಲ ವರ್ಗಾವಣೆಗೆ ತುತ್ತಾಗುತ್ತಿದ್ದಾರೆ. ಜನಪ್ರತಿನಿಧಿಗಳು ಮಾಫಿಯಾದವರ ಕಿರುಕುಳದಿಂದ ಅಧಿಕಾರಿಗಳೇ ಸುಮ್ಮನಿರುವ ಸ್ಥಿತಿ ಜಿಲ್ಲೆಯಲ್ಲಿದೆ. ಈ ಎಲ್ಲಾ ಕಾರಣಗಳಿಂದ ಆಗುಂಬೆ ಘಾಟಿ, ಹುಲಿಕಲ್ ಬಾಳೇಬರೆ ಘಾಟಿ ಹಾಗೂ ವರಾಹಿ ಡ್ಯಾಮ್, ಚಕ್ರ ನಗರ ಡ್ಯಾಮ್, ತುಂಗಾ ಡ್ಯಾಮ್‌ಗಳು ಅಪಾಯದ ಸ್ಥಿತಿಯಲ್ಲಿ ನಿರೀಕ್ಷಿಸಬಹುದು.
ಅತೀ ಮುಖ್ಯವಾಗಿ ಈಗಾಗಲೇ ತುಂಗಾ, ಮಾಲತಿ, ವರಾಹಿ, ಶರಾವತಿ ನದಿಗಳು ನೀರಿನ ಹರಿವು ನಿಂತಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಏಳುವ ಸ್ಥಿತಿ ಇದೆ. ಶಿವಮೊಗ್ಗ ಭದ್ರಾವತಿ ನಗರಗಳು ಸಧ್ಯದಲ್ಲೇ ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗುವ ಎಲ್ಲಾ ಸಾಧ್ಯತೆಗಳಿವೆ. ಹೋರಾಟಗಾರರು, ಪರಿಸರ ಪ್ರೇಮಿಗಳು ಏಕೋ ಮುಂದಾಲೋಚನೆ ಮಾಡದೇ ಸುಮ್ಮನಿದ್ದಾರೆ ಎಂದು ಕಾಣುತ್ತಿದೆ.
ಏನೇ ಇರಲಿ, ಭೂಮಿ ಕಂಪನದೊಂದಿಗೆ ಸರ್ಕಾರಕ್ಕೆ ಜನತೆಗೆ ಮುನ್ನೆಚ್ಚರಿಕೆ ನೀಡಿದೆ.
ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣ ಕಂದಾಯ ಗಣಿ ಅರಣ್ಯ ಪರಿಸರ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯಲ್ಲಿ ಮುಂದೆ ಆಗಬಹುದಾದ ದುರಂತದ ಬಗ್ಗೆ ಸೂಕ್ತ ಕ್ರಮಜರುಗಿಸಲು ಮುಂದಾಗಲಿ ಎಂದು ಈ ಲೇಖನದ ಉದ್ದೇಶ.
ಅತಿಥಿ ಲೇಖಕರು: ಲಿಯೋ ಅರೋಜ
ಲಿಯೋ ಅರೋಜ ಮೀಡಿಯಾ9
Whatsapp: 9448137473, 9880123040
Facebook: Leoaroza
ಸಿಬಿನ್ ಪನಯಿಲ್ ಸೊಮನ್
ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್
