ಕನ್ನಡ

ಫೆ. ೪ರಿಂದ ಬೆಂಗಳೂರು – ಶಿವಮೊಗ್ಗ ಶತಾಬ್ಧಿ ರೈಲು

ಫೆಬ್ರುವರಿ ೪ರಿಂದ ಬೆಂಗಳೂರು – ಶಿವಮೊಗ್ಗ ನಡುವೆ ಶತಾಬ್ಧಿ ರೈಲು ಸೇವೆ ಆರಂಭವಾಗಲಿದೆ ಎಂದು ಶಿವಮೊಗ್ಗ ಸಂಸದ, ಭಾರತೀಯ ಜನತಾ ಪಕ್ಷದ ಬಿ ವೈ ರಾಘವೇಂದ್ರ ತಿಳಿಸಿದರು.

ಮಲೆನಾಡಿಗರ  ಅಪೇಕ್ಷೆಯಂತೆ ಈ ರೈಲು ವಾರಕ್ಕೆ ಮೂರು ದಿನ (ಸೋಮವಾರ, ಬುಧವಾರ, ಶುಕ್ರವಾರ) ಸಂಚರಿಸಲಿದೆ.

ಶಿವಮೊಗ್ಗದಿಂದ ಬೆಳಿಗ್ಗೆ ೫.೩೦ಗೆ ತೆರಳುವ ರೈಲು, ನಾಲ್ಕೂವರೆ ತಾಸಿನ ಪಯಣ ಮಾಡಿ ೧೦ ಘಂಟೆಗೆ ಯಶವಂತಪುರ ತಲುಪಲಿದೆ. ಸಂಜೆ ಯಶವಂತಪುರದಿಂದ ಸಂಜೆ ೫.೩೦ಗೆ ತೆರಳಿ ರಾತ್ರಿ ೧೦ ಘಂಟೆಗೆ ಶಿವಮೊಗ್ಗ ತಲುಪಲಿದೆ.

ಈ ರೈಲಿಗೆ ಭದ್ರಾವತಿ, ಬೀರೂರು, ಕಡೂರು, ಅರಸೀಕೆರೆ, ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಯುಂಟು.

ಈ ಮೂರು ದಿನಗಳ ಜೊತೆಗೆ, ಪ್ರತಿ ಶನಿವಾರ ಬೆಳಿಗ್ಗೆ ಶಿವಮೊಗ್ಗದಿಂದ ಬೆಂಗಳೂರಿಗೆ, ಹಾಗೂ ಪ್ರತಿ ಭಾನುವಾರ ಸಂಜೆ ಯಶವಂತಪುರದಿಂದ ಶಿವಮೊಗ್ಗಕ್ಕೆ ರೈಲು ಸೌಲಭ್ಯ ನೀಡಲಾಗುವುದು.

ಈ ಮಾರ್ಗವನ್ನು ಬೆಂಗಳೂರು ಮೆಜೆಸ್ಟಿಕ್ (ಸಂಗೊಳ್ಳಿರಾಯಣ್ಣ) ರೈಲು ನಿಲ್ದಾಣದ ತನಕ ವಿಸ್ತರಿಸಲು ಕೋರಲಾಗುವುದು ಎಂದರು.

ಫೆಬ್ರುವರಿ ೩ರ ಸಂಜೆ ಶಿವಮೊಗ್ಗ ರೈಲು ನಿಲ್ದಾಣದಿಂದ ಮುಂಭಾಗದಲ್ಲಿ ಸಾಂಕೇತಿಕ ಚಾಲನೆ ನೀಡಲಾಗುವುದು ಎಂದು ರಾಘವೇಂದ್ರ ಹೇಳಿದರು.

 

ಸಿಬಿನ್ ಪನಯಿಲ್ ಸೊಮನ್

ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್

Click to comment

Leave a Reply

Your e-mail address will not be published. Required fields are marked *

17 + twenty =

To Top
WhatsApp WhatsApp us