೨೦೦೪ ವೃಂದದ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್, ಮಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿಕೊಂಡರು.
ಬುಧವಾರದಂದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಪಾಟೀಲ್ ಅವರನ್ನು ಮಂಗಳೂರು ನಗರಕ್ಕೆ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದರಂತೆ, ಶುಕ್ರವಾರ ಮಧ್ಯಾಹ್ನ ಪಾಟೀಲ್ ಅವರು ಪೊಲೀಸ್ ಆಯುಕ್ತರ ಕಾರ್ಯಾಲಯಕ್ಕೆ ಆಗಮಿಸಿ, ನಿರ್ಗಮಿತ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಇದಕ್ಕೆ ಮುಂಚೆ ಸಂದೀಪ್ ಪಾಟೀಲ್ ಬಳ್ಳಾರಿ, ಕೊಡಗು, ದಾವಣಗೆರೆ, ಬೆಳಗಾವಿ ಜಿಲ್ಲೆಯ ಎಸ್‌ಪಿ ಆಗಿ, ಬೆಂಗಳೂರು ನಗರದ ಉತ್ತರ ಮತ್ತು ಕೇಂದ್ರ ಉಪ ವಿಭಾಗಳ ಡಿಸಿಪಿ ಆಗಿದ್ದರು. ಅಲ್ಲದೆ ಗುಪ್ತದಳದ ಎಸ್‌ಪಿಯಾಗಿದ್ದರು. ಡಿಐಜಿ ಆಗಿ ಬಡ್ತಿ ಹೊಂದಿದ ನಂತರ ರಾಜ್ಯ ಮೀಸಲು ಪೊಲೀಸ್ ಪಡೆ ಮತ್ತು ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಡಿಐಜಿ ಆಗಿದ್ದರು.
ಟಿ ಅರ್ ಸುರೇಶ್ ೨೦೦೩ ವೃಂದದ ಐಪಿಎಸ್ ಅಧಿಕಾರಿ. ೨೦೧೭ರ ಜೂನ್ ೧೨ರಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ವರ್ಷ ವಿಧಾನ ಸಭಾ ಚುನಾವಣೆಗಳ ಪ್ರಯುಕ್ತ ಏಪ್ರಿಲ್ ೧೮ರಿಂದ ಜೂನ್ ೧೮ರ ತನಕ ಬೇರೆಡೆ ವರ್ಗಾವಣೆಯಾಗಿದ್ದರು. ಜೂನ್‌ನಲ್ಲಿ ಮತ್ತೆ ಅಧಿಕಾರ ವಹಿಸಿಕೊಂಡಿದ್ದರು.
ಚಿತ್ರ ಕೃಪೆ: mangalurutoday.com
ಸಿಬಿನ್ ಪನಯಿಲ್ ಸೊಮನ್
ಉತ್ಪನ್ನ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್
