ಕ್ರಿಸ್ಟ್ಮಸ್ ಸಭಾಭಾಷಣದಲ್ಲಿ ‘ಕೊಡು-ಕೊಳ್ಳು”ವ ಮನೋಭಾವಕ್ಕಾಗಿ ಕರೆ ನೀಡಿದ ಪೋಪ್
“ನಮ್ಮ ದಿನದಲ್ಲಿ, ಅನೇಕ ಜನರು ಅಗತ್ಯಕ್ಕಿಂತಲೂ ಹೆಚ್ಚು ವಸ್ತುಗಳನ್ನು ಕೂಡಿಡುವುದರ ಮೂಲಕ ಬದುಕಿನ ಅರ್ಥ ಕಂಡುಕೊಳ್ಳುತ್ತಿದ್ದಾರೆ” ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಡಿಸೆಂಬರ್ ೨೪ರಂದು ನಡೆದ ಪ್ರಾರ್ಥನಾಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಈಗಿನ ಕೊಳ್ಳುಬಾಕ ಸಂಸ್ಕೃತಿಯು ತಂದ “ಇಂಗಿಸಲಾಗದಂತಹ ದುರಾಸೆ”ಯನ್ನು ಟೀಕಿಸದರು. ತಮ್ಮ ಕ್ರಿಸ್ಟ್ಮಸ್ ಭಾಷೆಯಲ್ಲಿ “ಕೊಡುವ-ಕೊಳ್ಳುವ” ಸದ್ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಪೋಪ್ ಜನತೆಗೆ ಕರೆ ನೀಡಿದರು.
ರೋಮ್‌ನ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸಾವಿರಾರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಪೋಪ್, “ಮಾನವನು ಬಹಳ ದುರಾಸೆ ಮತ್ತು ಬಕಾಸುರನಂತಾಗಿದ್ದಾನೆ” ಎಂದು ಹೇಳಿದರು. ಫೋಪ್ ಫ್ರಾನ್ಸಿಸ್ ವಿಶ್ವಾದ್ಯಂತ ಸುಮಾರು ೧.೩ ಕೋಟಿ ಕ್ಯಾಥೊಲಿಕ್ ಸಮುದಾಯದವರ ಧರ್ಮಗುರು.
“ನಮ್ಮ ದಿನದಲ್ಲಿ, ಅನೇಕ ಜನರು ಅಗತ್ಯಕ್ಕಿಂತಲೂ ಹೆಚ್ಚು ವಸ್ತುಗಳನ್ನು ಕೂಡಿಡುವುದರರಲ್ಲಿ ಬದುಕಿನ ಅರ್ಥ ಕಂಡುಕೊಳ್ಳುತ್ತಿದ್ದಾರೆ” ಎಂದು ಅವರು ಹೇಳಿದರು.
“ನಮ್ಮ ಇತಿಹಾಸವು ಲಂಗುಲಗಾಮಿಲ್ಲದ ದುರಾಸೆಯ ಹಲವು ಪ್ರಸಂಗಗಳಿಂದ ಕೂಡಿದೆ. ಇಂದಿಗೂ ಸಹ, ಕೆಲವರು ಐಷಾರಾಮಿ ಭೋಜನ ಸವಿದರೆ, ಇನ್ನೊಂದೆಡೆ ಬಹಳಷ್ಟು ಜನರಿಗೆ ಒಪ್ಪೊತ್ತಿನ ಊಟವೂ ಸಿಗದೆ ಬದುಕುಳಿಯಲು ತುಂಬಾನೇ ಪರದಾಡುತ್ತಿದ್ದಾರೆ” ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. “ಯೇಸು ಕ್ರಿಸ್ತನ ಜನನವು ಗದಕುವಿಕೆ ಹಾಗೂ ಅತಿಯಾದ-ಕೂಡಿಟ್ಟುಕೊಳ್ಳುವಿಕೆಯ ಮೂಲಕ ಅಲ್ಲ, ಬದಲಿಗೆ ಹಂಚಿಕೆ ಮತ್ತು ಕೊಡುವಿಕೆಯ ಮೂಲಕ ಬದುಕಲು ಹೊಸ ದಾರಿ ಕಲ್ಪಿಸಿತು” ಎಂದು ಅವರು ತಮ್ಮ ಕ್ರಿಸ್ಟ್ಮಸ್-ಪೂರ್ವ ಪ್ರಾರ್ಥನಾ ಸಭೆಯಲ್ಲಿ ಹೇಳಿದರು.
“ನಾವು ನಮ್ಮ ಅಡಿಪಾಯವನ್ನು ಕಳೆದುಕೊಳ್ಳಬಾರದು ಅಥವಾ ಲೌಕಿಕತೆ ಮತ್ತು ಕೊಳ್ಳುಬಾಕತನದ ಹಿಡಿತದಲ್ಲಿ ಸಿಲುಕಿಕೊಳ್ಳಬಾರದು” ಎಂದು ಅವರು ಹೇಳಿದರು.
“‘ಬದುಕಲು ಇವೆಲ್ಲಾ ವಸ್ತುಗಳು ಮತ್ತು ಜಟಿಲವಾದ ಪರಿಕರಗಳು ಬೇಕೇ? ಇವೆಲ್ಲ ಅನಗತ್ಯ ಹೆಚ್ಚುವರಿ ವಸ್ತು-ವಿಚಾರಗಳಿಲ್ಲದೇ ನಾನು ಸರಳ ಜೀವನ ನಡೆಸಬಹುದೇ?’ ಎಂದು ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದರು.
