ಕಳೆದ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಡಗಾಮ್ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯಿತು. ಪಡೆಗಳು ಇಬ್ಬರು ಭಯೋತ್ಪಾದಕನ್ನು ಕೊಂದರು.
ಈ ಭಯೋತ್ಪಾದಕರ ಗುರುತು ಮತ್ತು ಸಂಘಟನೆಯ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಚಕಮಕಿ ನಡೆದ ಸ್ಥಳದಿಂದ ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಡಗಾಮ್ ಜಿಲ್ಲೆಯ ಚಾಡೂರಾದ ಗೋಪಾಲ್ಪೋರಾದಲ್ಲಿ ಭಯೋತ್ಪಾದಕರು ಪತ್ತೆಯಾಗಿರುವ ಬಗ್ಗೆ ಪೊಲೀಸ್ ಮತ್ತು ಭದ್ರತಾ ಪಡೆಗಳಿಗೆ ವಿಶ್ವಾಸಾರ್ಹ ಮಾಹಿತಿ ತಲುಪಿತ್ತು. ಆ ರಾತ್ರಿ ಪೊಲೀಸರು ಮತ್ತು ಭದ್ರತಾ ಪಡೆಗಳು ಒಟ್ಟಿಗೆ ಸೇರಿ ಶೋಧನ ಕಾರ್ಯ ನಡೆಸಿದವು. ಆಗ ಇದ್ದಕ್ಕಿದ್ದಂತೆ ಭಯೋತ್ಪಾದಕರು ಅವರ ಮೇಲೆ ಗುಂಡಿನ ದಾಳಿ ಹಾರಿಸಿದರು. ಶೋಧನಕಾರ್ಯದಲ್ಲಿದ್ದ ಪಡೆಯವರು ಕೂಡಲೇ ಗುಂಡಿನ ಸುರಿಮಳೆಗೈದು ಇಬ್ಬರು ಉಗ್ರರನ್ನು ಕೊಂದುಹಾಕಿದರು.
“ಸಿಡಿಮದ್ದು ಅಡಗಿರುವ ಸಾಧ್ಯತೆಯಿರುವ ಕಾರಣ ಸಾರ್ವಜನಿಕರು ಈ ವಲಯದೊಳಗೆ ಬರಬೇಡಿ. ಇಲ್ಲಿಂದ ಸಿಡಿಮದ್ದುಗಳನ್ನು ತೆಗೆದು ವಿಲೇವಾರಿ ಮಾಡುವ ತನಕ ನಮ್ಮೊಂದಿಗೆ ಸಹಕರಿಸಿ” ಎಂದು ಪೊಲೀಸ್ ಮತ್ತು ಭದ್ರತಾ ಪಡೆಗಳು ಸೂಚನೆ ನೀಡಿವೆ.
ಸಿಬಿನ್ ಪನಯಿಲ್ ಸೊಮನ್
ಇಂಡ್ ಸಮಾಚಾರ್, ಸಾಗರ
