ಒಂದೆಡೆ ಭಾರತೀಯ ವಾಯು ಸೇನೆಯ ಯುದ್ಧವಿಮಾನಗಳು ಎಲ್‌ಒಸಿ ಗಡಿ ದಾಟಿ ಪಿಒಕೆಯಲ್ಲಿರುವ ಭಯೋತ್ಪಾದಕ ಕೇಂದ್ರ-ಶಿಬಿರಗಳ ಮೇಲೆ ಧಾಳಿ ನಡೆಸುತ್ತಿರುವಾಗ, ರಾಷ್ಟ್ರೀಯ ತನಿಖಾ ಆಯೋಗ (ಎನ್‌ಐಎ) ಅಧಿಕಾರಿಗಳು ಪ್ರತ್ಯೇಕತಾವಾದಿ ಮುಖಂಡ ಜಮ್ಮು ಮತ್ತು ಕಾಶ್ಮೀರ ವಿಮೋಚನಾ ಮಂಡಳಿಯ ಅಧ್ಯಕ್ಷ ಯಾಸಿನ್ ಮಲಿಕ್ ಅವರ ಮನೆಯ ಮೇಲೆ ಧಾಳಿ ನಡೆಸಿದ್ದಾರೆ.
ಧಾಳಿ ನಡೆಸುವ ಸಮಯ ಯಾಸೀನ್ ಮಲಿಕ್ ಮನೆಯ ಸುತ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಶುಕ್ರವಾರ ರಾತ್ರಿಯಂದೇ ಯಾಸನ್‌ನನ್ನು ಪೊಲೀಸರು ಬಂಧಿಸಿದ್ದರು.
ವಿಧಿ ೩೫ಎ ವಿಚಾರವಾಗಿ ಭಾರತೀಯ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಗೆ ಎತ್ತಿಕೊಳ್ಳುವ ಹಿನ್ನೆಲೆಯಲ್ಲಿ ಯಾಸಿನ್‌ನನ್ನು ಬಂಧಿಸಲಾಗಿದೆ. ೩೫ಎ ಜಮ್ಮು ಮತ್ತು ಕಾಶ್ಮೀರದ ಪ್ರಜೆಗಳಿಗೆ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ನೀಡುತ್ತದೆ.
ಪುಲ್ವಾಮಾ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದುಕೊಂಡಿದೆ.
