ನಾಶ ಮಾಡಬೇಕಿದ್ದ ಮರಗಳನ್ನು ಪರಿಸರವಾದಿಗಳು ಸಮಯಕ್ಕೆ ಸರಿಯಾಗಿ ಬಂದು ರಕ್ಷಿಸಿದ್ದು ಮಂಗಳೂರಿನಿಂದ ವರದಿಯಾಗಿದೆ.
ಮಂಗಳೂರಿನಲ್ಲಿ ಮಂಗಳೂರು ನಗರ ಪಾಲಿಕೆ (ಎಂಸಿಸಿ) ಕಾಮಗಾರಿ ನಡೆಸುವ ಸಲುವಾಗಿ ಆರು ಮಧ್ಯಮ ಗಾತ್ರದ ಮರಗಳನ್ನು ಕಿತ್ತುಹಾಕಲು ಮುಂದಾಗಿತ್ತು. ರಾಷ್ಟ್ರೀಯ ಪರಿಸರ ರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಕಾರ್ಯಕರ್ತರು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಧಾವಿಸಿ, ಅಲ್ಲಿದ್ದ ಎಂಸಿಸಿ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು. ಕಿತ್ತುಹಾಕಿದ್ದ ಮರವನ್ನು ವಾಪಸ್ ನೆಡುವಂತೆ ಮಾಡಿದರು.
ಎಂಸಿಸಿ ಮುಂದಿನ ಮುಂಗಾರು ಆಗಮಿಸುವ ತನಕ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಗಿಡಗಳಿಗೂ ನೀರು ಹಾಕಿ ಅವುಗಳನ್ನು ಬೆಳೆಸುವುದೆಂದು ಎಂಸಿಸಿ ಮುಖ್ಯ ಅಭಿಯಂತರರು ಎನ್‌ಇಸಿಎಫ್ ಕಾರ್ಯಕರ್ತರಿಗೆ ಭರವಸೆ ನೀಡಿದರು.
ಅಭಿಯಂತರ ಲಕ್ಷ್ಮಣ ಪೂಜಾರಿ ಅವರ ಮೇಲ್ವಿಚಾರಣೆಯಲ್ಲಿ ಮರಗಳನ್ನು ಮತ್ತೆ ನೆಡಲಾಯಿತು.
