ದುಬೈ ಟೆನ್ನಿಸ್ ಚಾಂಪಿಯನ್ಷಿಪ್ಸ್ ಪಂದ್ಯಾವಳಿಯ ಎರಡನೆಯ ಸುತ್ತಿನಲ್ಲಿ ವಿಶ್ವದ ಅಗ್ರ ಟೆನ್ನಿಸ್ ಆಟಗಾರ್ತಿ ನವೊಮಿ ಒಸಾಕಾ ಸೋತು ನಿರ್ಗಮಿಸಿದರು. ಇದರಿಂದ ಅವರ ಅಭಿಮಾನಿಗಳು ನಿರಾಶರಾದರರು. ಈ ಹಿನ್ನೆಲೆಯಲ್ಲಿ ಪ್ರಮುಖ ಟೆನ್ನಿಸ್ ಆಟಗಾರ್ತಿಯರಾದ ಪೀಟ್ರಾ ಕ್ವಿಟೋವಾ ಹಾಗೂ ಸಿಮೋನಾ ಹಾಲೆಪ್, ನವೊಮಿ ಒಸಾಕಾ ಅವರ ಅಭಿಮಾನಿಗಳಿಗೆ ತಾಳ್ಮೆಯಿಂದಿರಲು ಮನವಿ ಮಾಡಿದ್ದಾರೆ.
ಉದಯೋನ್ಮುಖಿ ಆಟಗಾರ್ತಿಯಾಗಿದ್ದ ಜಪಾನ್ ದೇಶದ ನವೊಮಿ ಒಸಾಕಾ ತ್ವರಿತ ಗತಿಯಲ್ಲಿ ವಿಶ್ವದ ಅಗ್ರ ಟೆನ್ನಿಸ್ ಆಟಗಾರ್ತಿಯಾದರು. ಹಾಗಾಗಿ, ಖ್ಯಾತಿ ಮತ್ತು ಒತ್ತಡಗಳನ್ನು ನಿರ್ವಹಿಸಿ ನಿಭಾಯಿಸಲು ಅವರಿಗೆ ಸಮಯ ಬೇಕು ಎಂದು ಪೀಟ್ರಾ ಕ್ವಿಟೋವಾ ಮತ್ತು ಸಿಮೋನಾ ಹಾಲೆಪ್ ಅಭಿಪ್ರಾಯಪಟ್ಟಿದ್ದಾರೆ.
“ಆ ಕಾಲದಲ್ಲಿ ಬಹುಶಃ ನನ್ನಂತೆ, ಆಕೆಯದೂ ಸಹ ದಾಕ್ಷಿಣ್ಯದ ವ್ಯಕ್ತಿತ್ವ, ಅಂದು ನನಗೂ ಸಹ ಬಹಳ ಕಷ್ಟವಿತ್ತು. ನವೊಮಿ ಅವರ ಪರಿಸ್ಥಿತಿ ನನಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ” ಎಂದು ಪೀಟ್ರಾ ಕ್ವಿಟೋವಾ ಹೇಳಿದರು.
“ನನ್ನ ಅಭಿಪ್ರಾಯದ ಪ್ರಕಾರ, ಕಳೆದ ವರ್ಷ ಯುಎಸ್ ಒಪನ್ ಪಂದ್ಯಾವಳಿ ಗೆದ್ದಾಗ ನವೊಮಿಯ ಮೇಲಿನ ಒತ್ತಡ ಈಗಿನಕ್ಕಿಂತಲೂ ಹೆಚ್ಚಾಗಿರಬೇಕಿತ್ತು. ಏಕೆಂದರೆ ಆ ಪಂದ್ಯ ಗೆದ್ದದ್ದು ಅಚ್ಚರಿಯ ವಿಚಾರವಾಗಿತ್ತು. ಈಗ ಅವರು ಎರಡು ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳನ್ನು ಗೆದ್ದು ಅಗ್ರ ಸ್ಥಾನಕ್ಕೆ ಏರುವಷ್ಟು ಚೆನ್ನಾಗಿ ಆಡುತ್ತಿದ್ದಾರೆ. ನವೊಮಿ ಅತ್ಯುತ್ತಮ ಆಟಗಾರ್ತಿಯಾಗಿರುವ ಕಾರಣ, ಆಕೆ ಆಡುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಾರೆ” ಎಂದು ಸಿಮೋನಾ ಹಾಲೆಪ್ ಹೇಳಿದರು.
