೫೦೦ ವರ್ಷ ಹಳೆಯ ಶಿವನ ದೇವಾಲಯವೊಂದನ್ಉ ಮುಸ್ಲಿಮ್ ಕುಟುಂಬವು ನೋಡಿಕೊಳ್ಲುತ್ತಿರುವುದು ವರದಿಯಾಗಿದೆ.
ಈ ದೇವಾಲಯ ಅಸಮ್ ರಾಜ್ಯದ ಗುವಾಯಾಟಿ ಜಿಲ್ಲೆಯ ರಂಗಮಹಲ್ ಗ್ರಾಮದಲ್ಲಿದೆ.
ಈ ಗ್ರಾಮದಲ್ಲಿರುವ ಹಿಂದೂಗಳು ಮತ್ತು ಮುಸ್ಲಿಮರಿಬ್ಬರೂ ಶಿವನಲ್ಲಿ ಅಪಾರ ಭಕ್ತಿ ಹೊಂದಿದ್ದಾರೆ. ಪ್ರಾರ್ಥನೆ ಮತ್ತು ಪುಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಎರಡೂ ಸಮುದಾಯದವರು ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಶಿವ ತಮ್ಮ ಮಾತಾಮಹ ಇದ್ದ ಹಾಗೆ ಎಂದು ದೇವಸ್ಥಾನದ ಪಾಲಕ ಮತೀಬರ್ ರಹಮಾನ್ ಹೆಮ್ಮೆಯಿಂದ ಹೇಳುತ್ತಾರೆ.
ನಾನು ಶಿವನನ್ನು “ನಾನಾ” ಎಂದು ಕರೆಯುತ್ತೇನೆ. ಇದು ೫೦೦ ವರ್ಷ ಹಳೆಯ ದೇವಸ್ಥಾನ. ನಮ್ಮ ಕುಟುಂಬವು ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿದೆ. ಇಲ್ಲಿ ಹಿಂದೂಗಳೂ, ಮುಸ್ಲಿಮರೂ ಸಹ ಪ್ರಾರ್ಥನೆ ಸಲ್ಲಿಸಲು ಇಲ್ಲಿ ಬರುತ್ತಾರೆ ಎಂದು ರಹಮಾನ್ ಹೇಳುತ್ತಾರೆ.
“ಇಲ್ಲಿ ಮುಸ್ಲಿಮರು ‘ದುವಾ’ ಸಲ್ಲಿಸುತ್ತಾರೆ, ಹಿಂದೂಗಳು ‘ಪೂಜೆ’ ಸಲ್ಲಿಸುತ್ತಾರೆ. ಇಲ್ಲಿ ಪ್ರತಿಯೊಬ್ಬರ ಇಚ್ಛೆಯೂ ನೆರವೇರುತ್ತದೆ” ಎನ್ನುತ್ತಾರೆ ರಹಮಾನ್. ತಾವೂ ಸಹ ಶಿವಾಲಯಲ್ಲಿ ‘ದುವಾ’ ಸಲ್ಲಿಸುತ್ತಿರುವುದಾಗಿ ರಹಮಾನ್ ಹೇಳಿದ್ದಾರೆ.
ರಹಮಾನ್‌ರವರ ಕುಟುಂಬವು ಹಲವು ತಲೆಮಾರುಗಳಿಂದ ಈ ಶಿವಾಲಯವನ್ನು ನೋಡಿಕೊಳ್ಳುತ್ತಿದೆ. ಶಿವಾಲಯವು ಈ ವಲಯದಲ್ಲಿ ಹಿಂದೂ-ಮುಸ್ಲಿಮ್ ಏಕತೆಯ ಒಳ್ಳೆಯ ಉದಾಹರಣೆಯಾಗಿದೆ.
ಚಿತ್ರ ಕೃಪೆ: ಮತೀಬರ್ ರಹಮಾನ್ – ಟೈಮ್ಸ್ ಆಫ್ ಇಂಡಿಯಾ
