ಕನ್ನಡ

ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ ವಿಜಯ್ ಗೋಖಳೆ ಅವರ ಅಧಿಕೃತ ಹೇಳಿಕೆ

೨೦೧೯ರ ಫೆಬ್ರುವರಿ ೧೪ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಷ್‌-ಎ-ಮೊಹಮ್ಮದ್ ಸಿಆರ್‌ಪಿಎಫ್ ಸೈನಿಕರ ಮೇಲೆ ಆತ್ಮಾಹುತಿ ಧಾಳಿ ನಡೆಸಿದ ಕಾರಣ, ೪೦ ಜನ ವೀರ ಯೋಧರು ಹುತಾತ್ಮರಾದರು. ಜೈಷ್‌-ಎ-ಮೊಹಮ್ಮದ್ ಪಾಕಿಸ್ತಾನದಲ್ಲಿ ಸುಮಾರು ೨ ದಶಕಗಳಿಂದಲೂ ಸಕ್ರಿಯವಾಗಿದೆ. ಇದರ ಕೇಂದ್ರ ಕಾರ್ಯಾಲಯವು ಪಾಕಿಸ್ತಾನದ ಬಹಾವಾಲ್ಪುರ್‌ನಲ್ಲಿದೆ. ಮಸೂದ್ ಅಜರ್ ಇದರ ಮುಖ್ಯಸ್ಥ.

ವಿಶ್ವ ಸಂಸ್ಥೆಯು ನಿಷೇಧಿಸಿದ ಈ ಭಯೋತ್ಪಾದಕ ಸಂಘಟನೆಯು, ೨೦೦೧ರಲ್ಲಿ ಭಾರತೀಯ ಸಂಸದ್ ಮೇಲಿನ ಹಲ್ಲೆ ಹಾಗೂ ೨೦೧೬ರ ಪಠಾಣ್‌ಕೋಟ್ ವಾಯುನೆಲೆಯ ಮೇಲಿನ ಭಯೋತ್ಪಾದಕ ಹಲ್ಲೆ ಸೇರಿದಂತೆ ಹಲವು ಭಯೋತ್ಪಾದಕ ಹಲ್ಲೆಗಳನ್ನು ನಡೆಸಿದೆ.

ಪಾಕಿಸ್ತಾನ ಹಾಗೂ ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ ಜೈಷ್-ಎ-ಮೊಹಮ್ಮದ್ ತರಬೇತಿ ಕೇಂದ್ರಗಳಿರುವ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿದ್ದೆವು. ಆದರೆ, ಪಾಕಿಸ್ತಾವು ಈ ತರಬೇತಿ ಕೇಂದ್ರ-ಶಿಬರಗಳ ಆಸ್ತಿತ್ವವನ್ನು ತಳ್ಳಿಹಾಕುತ್ತಲೇ ಇದೆ. ಪಾಕಿಸ್ತಾನದ ಅಧಿಕಾರಿಗಳಿಗೆ ಗೊತ್ತಿಲ್ಕದಯೇ ಅಷ್ಟು ದೊಡ್ಡ ಪ್ರಮಾಣದ ತರಬೇತಿ ಕೇಂದ್ರಗಳು ಆಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ.

ಭಾರತವು ಪಾಕಿಸ್ತಾನಕ್ಕೆ ತನ್ನ ನೆಲೆಯಲ್ಲಿರುವ ಜೈಷ್ ವಿರುದ್ಧ ಕ್ರಮ ಕೈಗೊಳ್ಳುವುದರ ಮೂಲಕ ಜಿಹಾದಿಗಳ ತರಬೇತಿ ಮತ್ತು ಸಶಸ್ತ್ರಗೊಳಿಸುವಿಕೆಯನ್ನು ತಡೆಗಟ್ಟಲು ಹೇಳುತ್ತಲೇ ಇತ್ತು. ಆದರೆ ಪಾಕಿಸ್ತಾನವು  ಈ ವಿಚಾರದಲ್ಲಿ ಯಾವುದೇ ದೃಢ ಮನಸ್ಸು ಮಾಡಿಲ್ಲ.

ವಿದೇಶಾಂಗ ಮಂತ್ರಾಲಯ ವಿಜಯ್ ಗೋಖಳೆ:

ವಿಶ್ವಾಸಾರ್ಹ ಗುಪ್ತದಳ ಮಾಹಿತಿಯ ಪ್ರಕಾರ, ಜೈಷ್‌-ಎ-ಮೊಹಮ್ಮದ್‌ ಭಾರತದ ವಿವಿಧ ಭಾಗಗಳಲ್ಲಿ ಆತ್ಮಾಹುತಿ ಧಾಳಿ ನಡೆಸಲು ಸಂಚು ಹೂಡುತ್ತಿತ್ತು. ಜೈಷ್ ಈ ಉದ್ದೇಶಕ್ಕಾಗಿ ಫಿದಾಯೀನ್‌ ಜಿಹಾದಿಗಳಿಗೆ ತರಬೇತಿ ನೀಡುತ್ತಿತ್ತು. ಜೈಷ್‌ ಇತರೆ ಭಯೋತ್ಪಾದಕ ಹಲ್ಲೆಗಳನ್ನು ಮಾಡಲು ಹೊಂಚು ಹಾಕುತ್ತಿದೆ ಎಂದು ವಿಶ್ವಾಸಾರ್ಹ ಗುಪ್ದದಳ ಮಾಹಿತಿ ಬಂದಿತು. ಇವನ್ನು ತಡೆಗಟ್ಟುವಂತಹ ಕಾರ್ಯಾಚರಣೆ ಮಾಡುವುದು ಅಗತ್ಯವಾಯಿತು. ಬಾಲಾಕೋಟ್‌ನಲ್ಲಿರುವ ಜಯಷ್‌ನ ಅತಿ ದೊಡ್ಡ ಭಯೋತ್ಪಾದಕ ಶಿಬಿರದ ಮೇಲೆ ಭಾರತವು ಧಾಳಿ ನಡೆಸಿತು.

ಇಂದು ಮುಂಜಾನೆ ಗುಪ್ತಚರ ಇಲಾಖೆ ನೇತೃತ್ವದಲ್ಲಿ ನಡೆಸಲಾದ ಧಾಳಿಯಲ್ಲಿ, ಬಾಲಾಕೋಟ್‌ನಲ್ಲಿದ್ದ ಅತಿದೊಡ್ಡ ಜೈಷ್ ತರಬೇತಿ ಶಿಬಿರವನ್ನು ಧ್ವಂಸಗೊಳಿಸಿತು. ಈ ಧಾಳಿಯಲ್ಲಿ ನೂರಾರು ಜೈಷ್ ಭಯೋತ್ಪಾದಕರು, ತರಬೇತುದಾರರು, ಹಿರಿಯ ದಂಡನಾಯಕರು, ಜಿಹಾದಿಗಳು ಸತ್ತುಹೋದರು.

ಭಯೋತ್ಪಾದನೆಯ ಪಿಡುಗನ್ನು ಎಲ್ಲಾ ರೀತಿಗಳಲ್ಲೂ ನಿರ್ಮೂಲ ಮಾಡುವ ನಿರ್ಧಾರಕ್ಕೆ ಭಾರತವು ಬದ್ಧವಾಗಿದೆ. ಸೇನೇತರ ಕಾರ್ಯಾಚರಣೆಯನ್ನು ವಿಶಿಷ್ಟವಾಗಿ ಜೈಷ್ ಶಿಬಿರಗಳ ಮೇಲೆ ಮಾಡಲಾಯಿತು. ಅಲ್ಲಿನ ನಾಗರಿಕರಿಗೆ ಯಾವುದೇ ಅಪಾಯವಾಗದಿರಲೆಂದು ಗಮನದಲ್ಲಿಟ್ಟುಕೊಂಡು, ನಿಖರ ಗುರಿಗಳನ್ನಿಟ್ಟುಕೊಂಡು ಈ ಧಾಳಿಯನ್ನು ನಡೆಸಿದೆವು.

ಜೈಷ್ ಮುಖ್ಯಸ್ಥ ಮಸೂದ ಅಜರ್‌ನ ಭಾಮೈದ ಮೌಲಾನ ಯೂಸುಫ್ ಅಜರ್ (ಉಸ್ತಾದ್ ಘೋರಿ) ಬಾಲಾಕೋಟ್‌ನಲ್ಲಿರುವ ಭಯೊತ್ಪಾದಕ ಶಿಬಿರದ ಮುಖ್ಯಸ್ಥನಾಗಿದ್ದ. ಈ ಶಿಬರವು ಕಾಡೊಂದರ ಮಧ್ಯೆ ಬೆಟ್ಟದ ಮೇಲಿತ್ತು.

೨೦೦೪ರಲ್ಲಿ ಪಾಕಿಸ್ತಾನ ಸರ್ಕಾರವು, ತಮ್ಮ ನೆಲೆಯಲ್ಲಿ ಭಾರತದ ವಿರುದ್ಧ ಯಾವುದೇ ಭಯೋತ್ಪಾದಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಮಾಣ ಮಾಡಿತ್ತು. ಪಾಕಿಸ್ತಾನವು ತಾನು ಕೊಟ್ಟ ಮಾತು ಉಳಿಸಿಕೊಳ್ಳುವತ್ತ ಗಮನ ನೀಡಬೇಕು. ಜೈಷ್ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳ ಶಿಬಿರವನ್ನು ಧ್ವಂಸ ಮಾಡಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದನ್ನು ಭಾರತವು ಅಪೇಕ್ಷಿಸುತ್ತದೆ.

ಕೃಪೆ: ಪಿ ಐಬಿ

14 Comments

14 Comments

 1. Pingback: get subscribers

 2. Pingback: mẹ mua cho con heo đất í o

 3. Pingback: https://www.pinterest.com/ketquaxosotv/

 4. Pingback: Best Drones For Beginners

 5. Pingback: para pharma vs dragon pharma

 6. Pingback: social media marketing agency Hong Kong

 7. Pingback: cbd oil with thc

 8. Pingback: eatverts

 9. Pingback: buy Glocks online

 10. Pingback: พีจีสล็อต/พีจีสล๊อต

 11. Pingback: bbw sexdoll

 12. Pingback: 토토사이트

 13. Pingback: best quality zury sis wig under $79

 14. Pingback: kids swimming

Leave a Reply

Your email address will not be published.

3 × 1 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us