ಮಂಗನ ಕಾಯಿಲೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್, ಹೊಸನಗರ ತಾಲ್ಲೂಕ್, ಸೊರಬ ತಾಲ್ಲೂಕ್, ಶಿಕಾರಿಪುರ ತಾಲ್ಲೂಕ್, ತೀಥ೯ಹಳ್ಳಿ ತಾಲ್ಲೂಕ್ ಮತ್ತು ಭದ್ರಾವತಿ ತಾಲ್ಲೂಕ್‌ಗಳಲ್ಲಿ ಹರಡಿದೆ. ಉತ್ತರ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯಲ್ಲೂ ಕಂಡು ಬಂದಿದೆ, ಮೈಸೂರಿನ ಹೆಚ್.ಡಿ.ಕೋಟೆ ಮತ್ತು ನೆರೆ ರಾಜ್ಯ ಕೇರಳದಲ್ಲೂ ಕಂಡು ಬಂದಿದೆ. ಹಲವಾರು ಸಾವು ವರದಿ ಆಗಿದೆ ಈಗಾಗಲೆ ನೂರಾರು ಜನರಿಗೆ ವೈರಸ್ ಹಬ್ಬಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕಾಯಿಲೆ ಹರಡುವುದನ್ನು ತಡೆಯುವುದರಲ್ಲಿ ನಿಲ೯ಕ್ಷ್ಯ ತೋರಿದ್ದಾರೆಂದು ಶಿವಮೊಗ್ಗೆ ಜಿಲ್ಲಾ ವೈದ್ಯಾಧಿಕಾರಿ ಮತ್ತು ಜಿಲ್ಲಾ ವೈರಾಣು ನಿಯಂತ್ರಣ ಕೇಂದ್ರದ ಅಧಿಕಾರಿಯನ್ನು ಅಮಾನತ್ತು ಮಾಡಿ ರಾಜ್ಯ ಸಕಾ೯ರ ಆದೇಶ ಮಾಡಿದೆ. ವೈರಾಣು ಪೀಡಿತ ಸಾಗರ ತಾಲ್ಲೂಕ್ ಗೆ ಬೇಟಿ ನೀಡಿದ ಆರೋಗ್ಯ ಮಂತ್ರಿಗಳೇ ತಮ್ಮ ಇಲಾಕೆಯಿ೦ದ ಕೆಲ ಲೋಪಗಳಾಗಿದೆ ಎಂದು ಪತ್ರಿಕೆಗಳ ಎದುರು ಒಪ್ಪಿಕೊಂಡಿದ್ದಾರೆ.
ಸುಮಾರು ೧೦೦ ಮಂಗಳ ಸಾವು ವರದಿ ಆಗಿದೆ ಆದರೆ ವರದಿ ಆಗದ ಮಂಗಗಳ ಸಾವು ಯಾರಿಗೆ ಗೊತ್ತು?
ಕೆಎಫ್‌ಡಿ ವೈರಸ್ ನಿಂದ ಸತ್ತ ಮಂಗದ ಸ್ಥಳದಿಂದ ೧೦ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮುಂಜಾಗೃತೆಯಾಗಿ ಡಿಎಂಪಿ ತೈಲ ಉಚಿತವಾಗಿ ಸಾವ೯ಜನಿಕರಿಗೆ ವಿತರಿಸಬೇಕು ಮತ್ತು ವೈರಸ್ ನಿರೋದಕ ಲಸಿಕೆಹಾಕ ಬೇಕು, ಆದರೆ ಈ ಹಂತದಲ್ಲಿ ಇದು ಆಗುತ್ತಿಲ್ಲ ಕಾರಣ ಬೇಕಾಗುವಷ್ಟು ಲಸಿಕೆ, ತೈಲದ ದಾಸ್ತಾನು ಸಕಾ೯ರದ ಹತ್ತಿರ ಇಲ್ಲ.
ಇದು ಸಾಂಕ್ರಾಮಿಕ ರೋಗ (Epidemic) ಇದನ್ನು ನಿಯ೦ತ್ರಿಸದಿದ್ದರೆ ಮುಂದೆ ಬಾರೀ ಅನಾಹುತ ಸಂಭವಿಸಬಹುದು ಆದರೆ ಇಲಾಖೆ ಇದು ಸಾ೦ಕ್ರಮಿಕ ರೋಗ ಎಂದು ಒಪ್ಪುತ್ತಿಲ್ಲ. ಇದು ನಿಯಂತ್ರಣ ತಪ್ಪಿದರೆ ಏನಾದೀತು ಯೋಚಿಸಬೇಕು.
ಇಲ್ಲಿ ಯಾರಿಗೂ ಇದರ ಮುಂದಿನ ಪರಿಣಾಮದ ಅರಿವಿಲ್ಲ, ಅರಿವು ಮೂಡಿಸಹೋದವರಿಗೆ ಜನರಿಗೆ ಭಯ ಬಿತ್ತುವ ಕೆಲಸ ಮಾಡಬೇಡಿ ಎನ್ನುತ್ತಾರೆ. ಈ ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಕೃಷಿ ಆದಾರಿತ ಜನಜೀವನ ಸ್ಥಬ್ದವಾಗಿದೆ, ಅಡಿಕೆ ಕೊಯಿಲು, ಕಬ್ಬಿನ ಬೆಲ್ಲ ತಯಾರಿಕೆಗೆ ಜನ ಬರುತ್ತಿಲ್ಲ, ಶಾಲೆಗಳಿಗೆ ಮಕ್ಕಳ ಹಾಜರಾತಿ ಇಲ್ಲ.
ಪ್ರತಿ ತಿಂಗಳು ಕನಿಷ್ಟ ೨ ರಿಂದ ೩ ಸಾವಿರ ಪ್ರವಾಸಿಗಳು ಬರುತ್ತಿದ್ದ ಜೋಗ ಜಲಪಾತಕ್ಕೆ ಈಗ ತಿಂಗಳಿಗೆ ಕನಿಷ್ಟ ೨೦೦ ಜನರೂ ಬರುತ್ತಿಲ್ಲ. ಬಾರತಿಯರಿಗಿಂತ ವಿದೇಶಿ ಪ್ರವಾಸಿಗಳು ಹೆಚ್ಚು ಮು೦ಜಾಗ್ರತೆ ವಹಿಸಿ ಈ ಭಾಗಕ್ಕೆ ಬರುತ್ತಿಲ್ಲ. ಈ ವೈರಸ್ ಹರಡದಂತೆ ಎಷ್ಟು ಜವಾಬ್ದಾರಿ ವಹಿಸಬೇಕೋ ಅಷ್ಟೆ ಈ ವೈರಸ್ ಆತಂಕಕಾರಿಗಳ ಕೈಗೆ ಸಿಗದ೦ತೆಯೂ ನಿಗವಹಿಸಬೇಕು ಇದು ಒಂದು ರೀತಿ ಜೈವಿಕ ಬಾಂಬ್ ಎಂಬುದು ಎಚ್ಚರ ಇರಲಿ!
ನಮ್ಮ ಮನೆಯಿಂದ ೩ ಕಿಲೋಮೀಟರ್ ದೂರದಲ್ಲಿ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಸಮೀಪ ಸತ್ತ ಮಂಗ ಸಿಕ್ಕಿದ್ದು ೭ ಜನವರಿಯಂದು ಇವತ್ತಿಗೆ ೧೭ ದಿನ ಆದರೂ ಇಲ್ಲಿಗೆ ಡಿಎಂಪಿ ತೈಲ, ಲಸಿಕೆ ಸರಬರಾಜು ಆಗಿಲ್ಲ.
ಕೇಂದ್ರ ಸಕಾ೯ರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಇದು ಒಂದು ರಾಷ್ಟ್ರಿಯ ವಿಪತ್ತು ಆದಮೇಲೆ ಪರಿಹಾರಕ್ಕೆ ಹೆಚ್ಚು ಶ್ರಮ ಬೇಕಾಗುತ್ತದೆ. ರಾಜ್ಯ ಸಕಾ೯ರ ಈ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಗಂಭೀರ ಕಾಳಜಿ ವಹಿಸಿಲ್ಲ, ಅಧಿಕಾರಿಗಳ ಅಮಾನತ್ತು ಮಾಡಿ ವಿಷಯಾಂತರ ಮಾಡುತ್ತಿದೆ.
ರಾಜ್ಯ ಸಕಾ೯ರಕ್ಕೆ ಈ ಗಂಭೀರ ವೈರಸ್ ಹರಡುತ್ತಿರುವುದು ಮತ್ತು ಅದರ ನಿಯಂತ್ರಣಕ್ಕೆ ಆಗಬೇಕಾದ ಅವಶ್ಯ ಮುಂಜಾಗ್ರತ ಕ್ರಮ ಮತ್ತು ತಕ್ಷಣ ಅವಶ್ಯವಿರುವ ಡಿಎಂಪಿ ತೈಲ ಮತ್ತು ಲಸಿಕೆ ಸರಬರಾಜಿಗೆ ಒತ್ತಾಯಿಸಬೇಕಾಗಿದ್ದ ಜಿಲ್ಲಾ ಆಡಳಿತ ಸಹ್ಯಾದ್ರಿ ಉತ್ಸವದ ಮೋಜು-ಮಸ್ತಿಯಲ್ಲಿ ಕಳೆದು ಹೋಗಿದೆ.
ಇದನ್ನು ವಿರೋದಿಸಿದ ಕೆಲ ಜನಪರ ಕಾಳಜಿಯ ಪತ್ರಕತ೯ರು, ಸಾಹಿತಿಗಳು ಮತ್ತು ಜನಪರ ಹೋರಾಟಗಾರರನ್ನು ಗೇಲಿ ಮಾಡಿ ಮಂಗನ ಕಾಯಿಲೆ ಅಂತಹ ರೀತಿ ಹರಡಿಲ್ಲ, ನಿಯಂತ್ರಣದಲ್ಲಿದೆ ಎನ್ನುತ್ತಿದ್ದಾರೆ ಇನ್ನು ಕೆಲ ಪತ್ರಕತ೯ರು, ಸಾಹಿತಿಗಳು. ಆದರೆ ಇವತ್ತಿನ ವರದಿ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಸಮೀಪದ ಮಂಡಗದ್ದೆ ಆರೋಗ್ಯಾಧಿಕಾರಿಗೆ ಮಂಗನ ಕಾಯಿಲೆ ಹರಡಿದೆ, ಭದ್ರಾವತಿಯಲ್ಲಿ ಸತ್ತ ಮಂಗ ಸಿಕ್ಕಿದ್ದು ಕೆಎಫ್‌ಡಿ ವೈರಸು ಖಾತ್ರಿ ಆಗಿದೆ.
ಆದ್ದರಿಂದ ಇಲ್ಲಿ ರಾಜಕೀಯ, ಪ್ರತಿಷ್ಟೆ ಬದಿಗಿಟ್ಟು ಎಲ್ಲರೂ ಮುಂದೆ ಆಗುವ ಅನಾಹುತ ತಡೆಯುವ ನಿಟ್ಟಿನಲ್ಲಿ ಯೋಚಿಸಿ ಕಾಯ೯ ನಿರತರಾಗದಿದ್ದಲ್ಲಿ, ಮನುಷ್ಯನ ಜೀವದೊಂದಿಗೆ ಚೆಲ್ಲಾಟ ಆಡುವಂತೆ ಆದೀತು.
ಎಚ್ಚರ!!
ಅತಿಥಿ ಲೇಖಕರು:
ಕೆ.ಅರುಣ್ ಪ್ರಸಾದ್
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ
ಆನಂದಪುರಂ, ಸಾಗರ ತಾಲೂಕ್,
ಶಿವಮೊಗ್ಗ ಜಿಲ್ಲೆ
ಮೂಲ:
ಸಿಬಿನ್ ಪನಯಿಲ್ ಸೊಮನ್
