ಕನ್ನಡ

ಕುಂಭ ಮೇಳ – ಒಂದು ಪಕ್ಷಿನೋಟ

ಕುಂಭಮೇಳದ ಹಿಂದಿನ ಕಥೆ

ಕುಂಭ ಮೇಳ ಎನ್ನುವುದು ಕುಂಭ ರಾಶಿಗೆ ಸಂಬಂಧಿತ ಹಬ್ಬ ಎನ್ನಲಾಗಿದೆ. ಜೊತೆಗೆ, ಪುರಾಣ ಕಥೆಯೊಂದರ ಪ್ರಕಾರ ದೇವತೆಗಳು ಮತ್ತು ಅಸುರರು ಅಮೃತ ಉತ್ಪಾದಿಸಲು ಸಮುದ್ರ ಮಂಥನ ಮಾಡಲಾರಂಭಿಸಿದರು. ಸಮುದ್ರ ಮಂಥನದ ಮೂಲಕ ಅಮೃತ ಉತ್ಪನ್ನವಾಯಿತು. ಅಮರತ್ವ ನೀಡುವ ಅಮೃತ ತುಂಬಿದ ಬಿಂದಿಗೆ(ಕುಂಭ) ಗಾಗಿ ದೇವತೆಗಳು ಮತ್ತು ಅಸುರರು ಜಗಳವಾಡಿದ ಕಥೆಗೂ ಸಂಬಂಧವಿದೆ ಎನ್ನಲಾಗಿದೆ.

ದೇವತೆಗಳು ಅಮೃತ ಕುಡಿಯುವ ಭರದಲ್ಲಿ ನಾಲ್ಕು ಹನಿಗಳು ನಾಲ್ಕು ಕಡೆ ಚೆಲ್ಲಿದವು. ಈ ನಾಲ್ಕು ಸ್ಥಳಗಳೇ ಇಂದಿನ ಪ್ರಯಾಗ್‌ರಾಜ್‌, ಹರಿದ್ವಾರ್, ತ್ರ್ಯಂಬಕೇಶ್ವರ ಮತ್ತು ಉಜ್ಜಯಿನಿ.

ಪ್ರಚಲಿತ ಕುಂಭಮೇಳ

ಆವರ್ತನದ ಮೇಲೆ  ಕುಂಭ ಮೇಳವು ಈ ನಾಲ್ಕೂ ನಗರಗಳಲ್ಲಿ ಒಮ್ಮೆ ನಡೆಯುತ್ತದೆ. ಸ್ಥಳವೊಂದರಲ್ಲಿ ಕುಂಭಮೇಳವು ಹನ್ನೆರಡು ವರ್ಷಗಳಲ್ಲಿ ಒಮ್ಮೆ ನಡೆಯುತ್ತದೆ. ಕುಂಭ ಮೇಳದ ಮುಖ್ಯ ಉತ್ಸವವು ಕೆಳಗಿನ ನದಿ ದಡಗಳಲ್ಲಿ ನಡೆಯುತ್ತದೆ.

  • ಹರಿದ್ವಾರದಲ್ಲಿ ಗಂಗಾನದಿಯ ದಡ
  • ಪ್ರಯಾಗ್‌ರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಅದೃಶ್ಯ ಸರಸ್ವತಿ ನದಿಗಳ ಸಂಗಮ
  • ನಾಶಿಕ್‌ನಲ್ಲಿ ಗೋದಾವರಿ ನದಿಯ ದಡ
  • ಉಜ್ಜಯಿನಿಯ ಶಿಪ್ರ ನದಿಯ ದಡ

ಕುಂಭ ಮೇಳದ ವಿಧಗಳು:

  • ಮಹಾ ಕುಂಭ ಮೇಳ (೧೨ ಪೂರ್ಣ ಕುಂಭ ಮೇಳಗಳ ನಂತರ) ೧೪೪ ವರ್ಷಗಳಲ್ಲೊಮ್ಮೆ ನಡೆಯುತ್ತದೆ
  • ಕುಂಭ ಮೇಳ (ಪೂರ್ಣ ಕುಂಭ ಮೇಳ) ೧೨ ವರ್ಷಗಳಲ್ಲೊಮ್ಮೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತದೆ.
  • ಅರ್ಧ ಕುಂಭ ಮೇಳ ೬ ವರ್ಷಗಳಲ್ಲೊಮ್ಮೆ ನಡೆಯುತ್ತದೆ.

ಕುಂಭಮೇಳದ ವಿದಿವಿಧಾನಗಳು:

  • ನದಿಯಲ್ಲಿ ಸ್ನಾನ
  • ಹಬ್ಬಗಳು, ಉತ್ಸವಗಳು (ಧಾರ್ಮಿಕ ವಿಚಾರಗಳ ಬಗ್ಗೆ ಚರ್ಚೆ, ಭಜನೆ)
  • ಖಾದ್ಯ (ಮಹಾಪ್ರಸಾದ ವಿತರಣೆ)
  • ದರ್ಶನ (ಸಾಧುಗಳು ಕುಂಭಮೇಳಕ್ಕೆ ಆಗಮಿಸುವ ಭಕ್ತರೆಲ್ಲರಿಗೂ ದರ್ಶನ ನೀಡುತ್ತಾರೆ)

ಇತ್ತೀಚಿನ ಕುಂಭಮೇಳ

ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾಕುಂಭ ಮೇಳ ವಿಶ್ವದಲ್ಲೇ ಅತಿದೊಡ್ಡ ಧಾರ್ಮಿಕ ಉತ್ಸವವಾಗಿದೆ. ಭಕ್ತರು, ಸಾಧುಗಳು, ಭದ್ರತೆ ಒದಗಿಸಲು ಪೊಲೀಸರು, ವ್ಯಸ್ಥಾಪಕ ಮಂಡಳಿಯ ಅಧಿಕಾರಿಗಳು, ಸರ್ಕಾರದವರು, ಮಾದ್ಯಮ ಪ್ರತಿನಿಧಿಗಳು ಸೇರಿದಂತೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಬೃಹತ್ಸಂಖೆಗಳಲ್ಲಿ ಬರುವ ಜನರು ಮತ್ತು ಈ ಉತ್ಸವಕ್ಕೆ ನಡೆಸಬೇಕಾದ ಸಿದ್ಧತೆಯ ಪ್ರಮಾಣವನ್ನು ಪರಿಗಣಿಸಿದ, ಮಹಾ ಕುಂಭಮೇಳ ಬಹಳ ದೊಡ್ಡದು. ಪ್ರತಿ ಬಾರಿ ನಡೆಯುವ ಕುಂಭ ಮೇಳವು ಹಿಂದಿನದಿಕ್ಕಿಂತಲೂ ದೊಡ್ಡ ಪ್ರಮಾಣದ್ದಾಗಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಕುಂಭಮೇಳಕ್ಕೆ ಬರುವವರೆಲ್ಲರಿಗೂ ಊಟ-ತಿಂಡಿ, ಕುಡಿಯುವ ನೀರು, ತಂಗಲು ದೊಡ್ಡ ಶಿಬಿರಗಳು, ಸ್ನಾನ-ಶೌಚಗೃಹಗಳು, ಆರೋಗ್ಯ ಶಿಬಿರಗಳು, ಔಷಧ ಮಳಿಗೆಗಳು ಇತ್ಯಾದಿ ಸೇರಿದಂತೆ ಸಮಗ್ರ ವ್ಯವಸ್ಥೆಯನ್ನು ಸರ್ಕಾರ ಮತ್ತು ವ್ಯವಸ್ಥಾಪರು ಒಟ್ಟಿಗೆ ಸೇರಿ ಅಚ್ಚುಕಟ್ಟಾಗಿ ಮಾಡುತ್ತಾರೆ.

ಈ ವರ್ಷ ಚುನಾವಣೆಗಳು ನಡೆಯುವುರಿಂದ, ಪೂರ್ಣಪ್ರಮಾಣದ ಕುಂಭಮೇಳವನ್ನು ಪ್ರಯಾಗ್‌ರಾಜ್‌ನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿತು. ಇದರ ಮೊದಲ ಕ್ರಮವಾಗಿ, ಉತ್ತರಪ್ರದೇಶ ಸರ್ಕಾರವು ಅಲಹಾಬಾದ್‌ನ್ನು ಪ್ರಯಾಗ್‌ರಾಜ್‌ ಎಂದು ಮರುಹೆಸರಿಸುವ ಪ್ರಸ್ತಾಪವ್ನು ಕೇಂದ್ರ ಸರ್ಕಾರ ವಿಳಂಬ ಮಾಡದೆ ಅನುಮೋದಿಸಿತು.

೨೦೧೯ರಲ್ಲಿ, ಪ್ರಯಾಗ್‌ರಾಜ್‌ನಲ್ಲಿ ಕುಂಭ ಮೇಳ ನಡೆಯುವ ಮುಂಚೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಒಂದು ಅದಿಕೃತ ಘೋಷಣೆ ನೀಡಿದರು ಇದರಂತೆ, ಆರು ವರ್ಷಗಳಲ್ಲೊಮ್ಮೆ ನಡೆಯುವ ಅರ್ಧ ಕುಂಭ ಮೇಳವನ್ನು ಕುಂಭ ಮೇಳ, ಹಾಗೂ ೧೨ ವರ್ಷಗಳಲ್ಲೊಮ್ಮೆ ನಡೆಯುವುದನ್ನು ಮಹಾ ಕುಂಭ ಮೇಳ ಎನ್ನಲಾಗುವುದು.

ಕುಂಭ ಮೇಳ ೨೦೧೯ರ ಜನವರಿ ೧೫ರಂದು ಪ್ರಯಾಗ್‌ರಾಜ್‌ನಲ್ಲಿ ಆರಂಭವಾಯಿತು. ಅದ್ದೂರಿಯಾಗಿ ನಡೆಯುತ್ತಿರುವ ಈ ಮೇಳ ಸಮಾಪ್ತಿಯಾಗುವಷ್ಟರಲ್ಲಿ ಉತ್ತರ ಪ್ರದೇಶದ ಆರ್ಥಿಕ ವ್ಯವಸ್ಥೆಗೆ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳ ಆದಾಯ ಸಂದಾಯವಾಗಲಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸ್ವಚ್ಚ ಭಾರತ ಅಭಿಯಾನ ಕೈಗೊಂಡ ನಂತರ ನಡೆದ ಮೊಟ್ಟಮೊದಲ ಮಹಾ ಕುಂಭ ಮೇಳವಿದು. ಕುಂಭ ಮೇಳಕ್ಕೆ ಬರುವ ಲಕ್ಷಾಂತರ ಭಕ್ತರಿಗಾಗಿ ವ್ಯವಸ್ಥಾಪಕರು ತಾತ್ಕಾಲಿಕ ಶೌಚಾಲಯಗಳ ಏರ್ಪಾಟು ಮಾಡಿದ್ದಾರೆ. ಇದರ ಜೊತೆಗೆ ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನೂ ಏರ್ಪಾಟು ಮಾಡಿದ್ದಾರೆ. ಇದರ ಫಲವಾಗಿ ಈ ವರ್ಷದ ಪ್ರಯಾಗ್‌ರಾಜ್ ಮಹಾ ಕುಂಭ ಮೇಳವು ಸ್ವಚ್ಛತಾ ನಿರ್ವಹಣೆಗೆ ಸುದ್ದಿಯಲ್ಲಿದೆ.

ಒಂದು ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದಲ್ಲಿ, ತಿರುಪತಿಯ ವೆಂಕಟರಮಣ ಸ್ವಾಮಿ ದೇವಸ್ಥಾನದ ನಂತರ ರಾಮ ಮಂದಿರವು ಹೆಚ್ಚು ಆದಾಯ ಗಳಿಸುವಲ್ಲಿ ಯಾವುದೇ ಸಂಶಯವಿಲ್ಲ. ವಾಟಿಕನ್‌ ಇಗರ್ಜಿಯ ಸಂಪಾದನೆಯನ್ನೂ ಸಹ ಹಿಂದಿಕ್ಕಬಹುದು ಎನ್ನಲಾಗಿದೆ.

35 Comments

35 Comments

  1. Pingback: bahis siteleri

  2. Pingback: Jelle Hoffenaar

  3. Pingback: Medium Mireille

  4. Pingback: 7lab pharma anavar

  5. Pingback: W88

  6. Pingback: oris replica watches for sale

  7. Pingback: Buy Juul Pods online

  8. Pingback: กู้เงินด่วนมหาสารคาม

  9. Pingback: bitcoin exchange

  10. Pingback: maha pharma official website

  11. Pingback: plumber near me in Maysville

  12. Pingback: Guns for Sale

  13. Pingback: huong dan 188bet

  14. Pingback: 63.250.38.81

  15. Pingback: 토토사이트

  16. Pingback: Smith and Wesson guns in stock

  17. Pingback: 메이저놀이터

  18. Pingback: benefits of intelligent automation

  19. Pingback: fake breitling for bentley flying b

  20. Pingback: 밤토끼시즌2

  21. Pingback: roofing company The Hammocks

  22. Pingback: Plumbing Giant Selma NC

  23. Pingback: female articles on sex drives

  24. Pingback: dark web search engine online

  25. Pingback: G's Landscaping

  26. Pingback: buy cvv uk

  27. Pingback: cyber attacks on banking industry

  28. Pingback: หลังคาชิงเกิ้ลรูฟ

  29. Pingback: fake id

  30. Pingback: juul pods

  31. Pingback: 슬롯게임

  32. Pingback: best cvv website

  33. Pingback: คลิปหลุดใหม่

  34. Pingback: sbo

  35. Pingback: devops expert consulting

Leave a Reply

Your email address will not be published.

7 + seventeen =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us