ಕೃಪೆ: ರವಿ ಬೆಳಗೆರೆ / ವಿಜಯವಾಣಿ ದಿನಪತ್ರಿಕೆ ಬೆಂಗಳೂರು ಅವೃತ್ತಿ
ಕಾಶ್ಮೀರಿಗಳಿಗೆ ಭಾರತದ ದುಡ್ಡು ಮಾತ್ರ ಬೇಕು ಅಷ್ಟೆ. ಅವರ ಮನದ ತುಂಬಾ ಪಾಕಿಸ್ತಾನವೇ ತುಂಬಿಕೊಂಡಿದೆ ಎಂದು ಹಿರಿಯ ಪತ್ರಕರ್ತ ಮತ್ತು ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಹೇಳಿದ್ದಾರೆ.
ಕಾಶ್ಮೀರಿಗಳು “ಹುಟ್ಟಾ ವಕ್ರ”. ಅವರನ್ನು ಯಾವ ರೀತಿಯಲ್ಲು ಸರಿ ಮಾಡಲು ಸಾಧ್ಯವೇ ಇಲ್ಲ ಕಾಶ್ಮೀರಿಗಳು ಒಂದೇ ಒಂದು ರೂಪಾಯಿ ತೆರಿಗೆಯನ್ನು ಕೂಡ ಕೊಡುವುದಿಲ್ಲ. ಇಲ್ಲಿ ಹಲವು ಬಣಗಳಿವೆ. ಕೆಲವರಿಗೆ ಲಾಭದ ದೃಷ್ಟಿಯಿಂದ ಭಾರತ ಬೇಕಾಗಿದ್ದರೆ, ಗೀಲಾನಿಯಂತಹ ಪ್ರತ್ಯೇಕತಾವಾದಿಗಳಿಗೆ ಕಾಶ್ಮೀರ ಸ್ವತಂತ್ರ ರಾಷ್ಟ್ರವಾಗಬೇಕು. ಇತ್ತ ಭಾರತವೂ ಬೇಡ, ಅತ್ತ ಪಾಕಿಸ್ತಾನವೂ ಬೇಡ.
ಶ್ರೀನಗರ ಒಂದು ಪ್ರವಾಸಿ ತಾಣ, ಆದ್ದರಿಂದ ಓಡಾಡಬಹುದು. ಸ್ವಲ್ಪ ಒಳಭಾಗಕ್ಕೆ ಹೋದರೆ ಅ ಸ್ಥಳಗಳು9 ಭಾರತ ಅನ್ನಿಸುವುದೇ ಇಲ್ಲ, ಪಾಕಿಸ್ತಾನದಂತೇ ಇರುತ್ತದೆ. ಅಲ್ಲಿ ಯಾರನ್ನೂ ನಂಬುವಂತಿಲ್ಲ. “ಮೇಲೆ ಪಾಕಿಸ್ತಾನ ಇದೆ, ಕೆಳಗೆ ಭಾರತ ಇದೆ, ನಾವು ಮಧ್ಯದಲ್ಲಿ ಸ್ಯಾಂಡ್ವಿಚ್ ಆಗಿಬಿಟ್ಟಿದ್ದೇವೆ. ನಮಗೆ ಸ್ವಾತಂತ್ರ್ಯ ಬೇಕು” ಎನ್ನುತ್ತಾರೆ ಕೆಲ ಕಾಶ್ಮೀರಿಗಳು.
ಸ್ವಾತಂತ್ರ್ಯ ಗಳಿಸಿದ ನಂತರ ಕಾಶ್ಮೀರಿಗಳು ಏನು ಮಾಡುತ್ತಾರಯೋ ತಮಗೇ ಗೊತ್ತಿಲ್ಲ ಎನ್ನುತ್ತಾರೆ. ಅಲ್ಲಿ ಅನೂ ಬೆಳೆಯುವುದಿಲ್ಲ. ಕಾಲು, ಅಕ್ಕಿ, ಕೇಸರಿ ಹೊರತುಪಡಿಸಿ ಯಾವುದೇ ಕೃಷಿಯಿಲ್ಲ. ಪ್ರವಾಸೋದ್ಯಮದ ಮೂಲಕ ಆದಾಯ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ. ವಿದೇಶದಿಂದ ಪ್ರವಾಸಿಗಳು ಬರುತ್ತಾರೆ ಎನ್ನುತ್ತಾರೆ. ಪ್ರತಿದಿನವು ಭಯೋತ್ಪಾದನೆಯ ಘಟನೆ ನಡೆಯುತ್ತಿರುವಾಗ ಯಾರು ಪ್ರವಾಸ ಮಾಡುತ್ತಾರೆ?
ಪುಲ್ವಾಮಾದಲ್ಲಿ ಪಾಕಿಸ್ತಾನಿ ಭಯೋತ್ಪಾದನಾ ಕೃತ್ಯ ನಡೆದು ಸುಮಾರು ೨೪ ತಾಸುಗಳಲ್ಲಿ ಪ್ರವಾಸ ಬರಬೇಕಿದ್ದವರೆಲ್ಲರೂ ತಮ್ಮ ಕಾದಿರಿಸುವಿಕೆ (reservation) ಎಲ್ಲ ರದ್ದುಗೊಳಿಸಿದರು.
ಸಿಆರ್‌ಪಿಎಫ್ ಕಾನ್ವಾಯ್ ಇಂತಹ ದಿನ ಇಷ್ಟು ಹೊತ್ತಿಗೆ ಬರುತ್ತದೆ ಎಂಬುದು ಜೈಷ್-ಎ-ಮೊಹಮ್ಮದ್‌ನ ಭಯೋತ್ಪಾದಕ ಆದಿಲ್‌ಗೆ ನಿಖರವಾಗಿ ಹೇಗೆ ತಲುಪಲು ಸಾಧ್ಯ? ಒಳಗಿನವರು ಯಾರೋ ತಿಳಿಸಿರಬೇಕು, ಇಲ್ಲದಿದ್ದಲ್ಲಿ ಭಯೋತ್ಪಾದಕ ಸರಿಯಾದ ಸಮಯಕ್ಕೆ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಕಾನ್ವಾಯ್‌ಗೆ ಢಿಕ್ಕಿ ಹೊಡೆಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಬೆಳಗೆರೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಎಂತಹ ವಂಚಕ ರಾಷ್ಟ್ರ ಎಂದರೆ ಇಸ್ಲಾಮಿನಲ್ಲಿ ನಿಷಿದ್ಧವಾದವುಗಳೆಲ್ಲ ಅಲ್ಲಿವೆ. ಸಂಪ್ರದಾಯ ಎನ್ನುವುದು ಹೆಚ್ಚಾಗಿ ಕಾಣಸಿಗುವುದಿಲ್ಲ. ಜೀನ್ಸ್, ಟೈಟ್ ಟಾಪ್ ಧರಿಸಿ ಸಿಗರೇಟು ಸೇದುವ ಯುವತಿಯರು, ಹೆಂಡದ ಹೊಳೆ, ವೇಶ್ಯಾವಾಟಿಕೆ ಎಲ್ಲವೂ ಇವೆ ಎಂದು ಬೆಳಗೆರೆ ವರದಿ ಮಾಡಿದ್ದಾರೆ.
೧೯೬೨ಕ್ಕೆ ಹೋಲಿಸಿದರೆ ಈ ಗಿನ ಪರಿಸ್ಥಿತಿ ಭಿನ್ನವಾಗಿದೆ. ನಮ್ಮ ದೇಶದ ಸೇನೆ ಬಲಿಷ್ಠವಾಗಿದೆ. ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಯೋತ್ಪಾದಕರನ್ನು ಸಂಹಾರ ಮಾಡಲು ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಹಾಗಾಗಿ, ಕಾಶ್ಮೀರದ ಈಗಿನ ಸಮಸ್ಯೆಯನ್ನು ಮೋದಿ ನೇತೃತ್ವದ ಸರ್ಕಾರವು ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂಬುದು ರವಿ ಬೆಳಗೆರೆ ಅಭಿಪ್ರಾಯ.
