ಪೂರ್ವ ವಾಯು ನೆಲೆ ಸೇನಾಪತಿ ಏರ್ ಮಾರ್ಷಲ್ ರಘುನಾಥ್ ನಂಬಿಯಾರ್ ಅವರಿಗೆ ಭಾರತೀಯ ವಾಯು ಸೇನೆಯ ಪ್ರಮುಖವೆನಿಸುವ ಪಶ್ಚಿಮ ವಾಯು ನೆಲೆಯ ಮುಖ್ಯಸ್ಥರ ಹುದ್ದೆ ನೀಡಲಾಗಿದೆ.
ರಘುನಾಥ್ ನಂಬಿಯಾರ್ ಅವರು ಕರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಲೇಸರ್-ಮಾರ್ಗದರ್ಶಿತ ಬಾಂಬ್‌ಗಳನ್ನು ಹೊಡೆದು ಕೆಡವಿ, ನಮ್ಮ ದೇಶದ ನೆಲೆಯ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಪಶ್ಚಿಮ ವಾಯು ನೆಲೆಯು ಹೊಸ ದೆಹಲಿಯಲ್ಲಿದೆ. ರಾಜಸ್ಥಾನದ ಬಿಕಾಣೆರ್ ಇಂದ ಸಿಯಾಚಿನ್ ಹಿಮನದಿಯ ತನಕ ಇದರ ವ್ಯಾಪ್ತಿ. ಭಾರತೀಯ ವಾಯು ಸೇನೆಯ ವಾಯು ನೆಲೆಗಳ ಪೈಕಿ ೪೦%ರಷ್ಟು ಪಶ್ಚಿಮ ವಾಯು ನೆಲೆಯ ವ್ಯಾಪ್ತಿಯಲ್ಲಿದೆ.
ನಂಬಿಯಾರ್ ಅವರು ಐಎಎಫ್‌ನಲ್ಲಿರುವಾಗ ಇದುವರೆಗೂ ಒಟ್ಟಾರೆ ೫೧೦೦ ತಾಸುಗಳ ಕಾಲ ವಿಮಾನ ಹಾರಿಸಿದ್ದಾರೆ. ಇದರಲ್ಲಿ ೨೩೦೦ ತಾಸುಗಳ ಕಾಲ ಮಿರಾಜ್-೨೦೦೦ ಯುದ್ಧ ವಿಮಾನ ಹಾರಿಸಿರುವ ಅನುಭವ ಹೊಂದಿದ್ದಾರೆ.
ಕರ್ಗಿಲ್ ಯುದ್ಧದಲ್ಲಿ ತಾವು ನಡೆಸಿದ ಕಾರ್ಯಾಚರಣೆಯನ್ನು ಮೆಚ್ಚಿದ ಭಾರತ ಸರ್ಕಾರವು, ರಘುನಾಥ್ ನಂಬಿಯಾರ್ ಅವರಿಗೆ ವಾಯು ಸೇನಾ ಪದಕ ನೀಡಿ ಗೌರವಿಸಿತು.
ಭಾರತೀಯ ವಾಯು ಸೇನೆಯ ಅತಿ ಹಳೆಯ ಸ್ಕ್ವಾಡ್ರಾನ್ ಆದ ನಂ ೧ ಸ್ಕ್ವಾಡ್ರಾನ್‌ನ ನಾಯಕತ್ವ ವಹಿಸಿದ್ದಾರೆ.
WhatsApp us