ಭಾರತೀಯ ಜನತಾ ಪಕ್ಷದ ಶಾಸಕ ಹರತಾಳು ಹಾಲಪ್ಪ ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾಸನೂರು ಕಾಡಿನ ಕಾಯಿಲೆ (ಕೆಎಫ್‌ಡಿ) ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಪ ಗ್ರಾಮದ ರಾಮಚಂದ್ರ ಶಾಸ್ತ್ರಿಯವರನ್ನೂ ಸಹ ಹಾಲಪ್ಪರವರು ವಿಚಾರಿಸಿದರು. ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ವೈದ್ಯ್ರರಿಂದ ಮಾಹಿತಿ ಪಡೆದು ಸಮರ್ಪಕ ಚಿಕಿತ್ಸೆ ನೀಡುವಂತೆ ಹಾಲಪ್ಪನವರು ಸಲಹೆ ಕೊಟ್ಟರು.
ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಲ್ಲಿ ಮಂಗನ ಕಾಯಿಲೆಯು (ಕ್ಯಾಸನೂರು ಕಾಡಿನ ಕಾಯಿಲೆ) ೧೯೫೭ರಲ್ಲಿ ಪತ್ತೆಯಾಯಿತು. ಈ ಕಾಯಿಲೆಯ ಹರಡುವಿಕೆಗೆ ಕಾಡಿನ ನಾಶ, ಶರಾವತಿ ಅಣೆಕಟ್ಟಿನ ನಿರ್ಮಾಣದಿಂದ ಉಂಟಾದ ಗ್ರಾಮಗಳ ಮುಳುಗುವಿಕೆ, ಹಾಗೂ ಕೃಷಿಭೂಮಿಯಅವ್ಯಾಹತ ಪರಿವರ್ತನೆಯೇ ಕಾರಣ ಎಂದುಅಧ್ಯಯನವೊಂದು ವರದಿ ಮಾಡಿದೆ.
ಕರ್ನಾಟಕವಲ್ಲದೆ ಕೇರಳ ಮತ್ತು ಮಹಾರಾಷ್ಟ್ರದಲ್ಲೂ ಸಹ ಈ ಕಾಯಿಲೆ ಹರಡಲು ಈ ವಲಯದಲ್ಲಿ ವ್ಯಾಪಕವಾಗಿ ಹರಡಿರುವ ಪಶ್ಚಿಮ ಘಟ್ಟಳಲ್ಲಿನ ಅರಣ್ಯ ನಾಶದ ಪ್ರಭಾವವನ್ನು ತೋರಿಸುತ್ತಿದೆ ಎಂದು ಸಂಶೋಧನಕಾರ ಡಾ. ಬಾಲಕೃಷ್ಣನ್ ಹೇಳಿದ್ದಾರೆ.
ಮೂಲ:

ಸಿಬಿನ್ ಪನಯಲ್ ಸೊಮನ್
WhatsApp us