ಬಂಡೀಪುರದದಲ್ಲಿ ಕಾಡ್ಗಿಚ್ಚು ಹರಡಿ ಸುಮಾರು ೬೦೦ಕ್ಕೂ ಹೆಚ್ಚು ಎಕರೆ ಕಾಡು ಪ್ರದೇಶ ಹಾಗೂ ಅಲ್ಲಿನ ಕಾಡುಪ್ರಾಣಿಗಳು ಸುಟ್ಟು ಕರಕಲಾದವು. ಹುಲಿ ಸಂರಕ್ಷಿತಾರಣ್ಯದ ಒಟ್ಟಾರೆ ಸ್ಥಿತಿ ದಯನೀಯವಾಗಿದೆ.
ಇದರ ಹಿನ್ನೆಲೆಯಲ್ಲಿ ಪರಿಸರವಾದಿ ಚಕ್ರವರ್ತಿ ಚಂದ್ರಚೂಡ್, ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ:
೧. ೧೮೦ ಜನ ಅರಣ್ಯ ಅಧಿಕಾರಿಗಳು ಹೊಂಗೆ ಸೊಪ್ಪು ಹಿಡಿದು ೧೧೩೦೦ ಎಕರೆ ಕಾಡು ರಕ್ಷಿಸಲು ಸಾಹಸ ಪಡುತ್ತಿದ್ದರು. ಪ್ರತಿ ವರುಷ ಬೀಳುವ ಈ ಬಗೆಯ ಅಗಮ್ಯ ಬೆಂಕಿಯ ಮೂಲದ ಮಾಹಿತಿಗಳನ್ನು ಸರಕಾರಕೆ ಕೊಟ್ಟು ದಶಕಗಳಾಗಿವೆ.ಕನಿಷ್ಟ ಉಪಕರಣಗಳಿಲ್ಲ ಕಾರ್ಬನ್ ಟೆಟ್ರಾ ಕ್ಲೋರೈಡ್ ಉಗ್ಗಿಸಬೇಕು… ಹೆಲಿ ಜಾಗ್ವಾರ್ ಗಳು ಬೇಕು, ಕಾರ್ಬನ್ ಟೆಟ್ರಾ ಕ್ಲೋರೈಡ್ ಎಲ್ಲಿದೆ ಸ್ಟಾಕ್ ಏರ್ ಜೆಟ್ ಗಳೆಲ್ಲಿ ಅಂದರೆ ಡಿಸಿಎಫ್ ಅಂಬಾಡಿ ಮಹದೇವ್ ಕಣ್ ಕಣ್ ಬಿಡ್ತಾರೆ.
೨. ಸುತ್ತ ಇರುವ ಹಳ್ಳಿಗರಿಗೆ ಜಾನುವಾರುಗಳಿಗೆ ಹಸಿರು ಹುಲ್ಲು ಬೇಸಿಗೆ ಕಾಲದಲಿ ಕೊಡಲು ಗ್ರೌಂಡ್ ಫೈರ್ ಹಾಕಿದವರ್ಯಾರು … ಹುಲ್ಲು ಹಾಸು ಬೇಸಿಗೆಯ ಮುನ್ನವೇ ಸುಡಬೇಕಲ್ಲ ಆ ಕಾರ್ಯಾಚರಣೆ ಮಾಡಿದ್ರಾ ಎಂದರೆ …. ಆಯಾ ಹಳ್ಳಿಗರೇ ಹುಲ್ಲುಗಾವಲ ಅಳತೆಯಲ್ಲಿ ಗ್ರೌಂಡ್ ಫೈರ್ ಕೊಟ್ಟಿದ್ದರಂತೆ. ಹಾಳಾಗಿ ಹೋಗಲಿ ಕ್ಷಣ ಮಾತ್ರದಲ್ಲಿ ಕಾಡಿನ ಬೆಂಕಿಯ ನಂದಿಸಲು ಅಲ್ಲಲ್ಲಿ ಮಳೆ ಸಂರಕ್ಷಣೆಯ ಗುಂಡಿಗಳಿದ್ರೆ ಪ್ರಾಣಿ ಪಕ್ಷಿಗಳು ನೆಗೆದು ಕಾಪಾಡಿಕೊಳ್ಳುವ ವ್ಯವಸ್ಥೆ ಇರುತ್ತದಲ್ಲ ಅದೆಲ್ಲಿವೆ ಗುಂಡಿಗಳು. ಜಲಗುಂಡಿಗಳ ಕಾಮಗಾರಿ ಡಿಟೈಲ್ ಕೊಡಿ ಅಂದರೆ ಮುಖ ಮುಖ ನೋಡುತ್ತಾರೆ ಅಧಿಕಾರಿಗಳು.
೩. ಬಂಡಿಪುರ ಅರಣ್ಯ ನಾಗರಹೊಳೆ ಊಟಿ ಪ್ರದೇಶದ ತನಕ ಹಬ್ಬಿರುವ ಮರಳು ಕಲ್ಲು ಮಾಫಿಯಾದವರು ಮಾಡಿರುವ ಹೊಸ ರಸ್ತೆಗಳೇಕೆ ಮಚ್ಚಿಲ್ಲ.ಎಷ್ಟು ಆರೆಸ್ಟ್ ಅದೆಷ್ಟು ಕೇಸ್ ಗಳ ಲೆಕ್ಕ ಕೊಡಿ. ಟ್ರಸ್ ಪಾಸರ್ಸ್ ನಕ್ಷೆ ಕೊಡಿ. ದಟ್ಟ ಕಾಡುಗಳಲ್ಲಿ ಹಳ್ಳಿಯವರ ಓಡಾಟ ದಾಖಲಾಗಿದೆ ಅಂದರೆ ಯಾರೆಂದರೆ ಯಾರಿಗೂ ಗೊತ್ತಿಲ್ಲ.
೪. ಅರಣ್ಯ ವಲಯವನ್ನು ನಾಲ್ಕು ಜೋನ್ ಗಳಾಗಿ ವಿಂಗಡಿಸಿ ಕೇವಲ ವಾಚರ್ ಗಾರ್ಡ್ ಗಳನ್ನ ಬಿಟ್ಟರೆ ಆಗೋಯ್ತಾ? ಲಕ್ಷಾತರ ಜೀವತಂತುಗಳು ಉಳಿದಾವಾ? ಈಬೆಂಕಿಯಲಿ ಅಪರೂಪದ ಸರೀಸೃಪಗಳು ಸಸ್ಯಕಾಶಿ ನಾಶವಾಗಿವೆ.ಇವು ಖಂಡಿತ ಮೊಮ್ಮಕ್ಕಳ ಕಾಲಕ್ಕೂ ಬಿಡದಂತೆ ಕಾಡುತ್ತದೆ.
೫. ಬಂಡಿಪುರವಿರಲಿ, ಬೆಂಗಳೂರಿನ ಗಂಗಮ್ಮ ಸರ್ಕಲ್ ಸುತ್ತಲಿನ ೩೭ ಎಕರೆ, ಶ್ರೀರಂಗಪಟ್ಟಣದ ಐವತ್ತು ಎಕರೆ ನಾಶವಾಗಿದೆಯಲ್ಲಾ ಇದೇ ಬೆಂಕಿಗೆ. ಯಾರು ಹೊಣೆ?
೬. ಮುಂದೊಂದು ದಿನ ಜೀವವೈವಿಧ್ಯತೆಯ ಆಹಾರದ ಸರಪಳಿ ನಾಶವಾಗಿ ಮನುಷ್ಯ ಹಂತಹಂತವಾಗಿ ಸಾಯ್ತಾನೆ. ಅಲ್ಲಿ ಸತ್ತ ಜಿಂಕೆ ಕಾಡುನಾಯಿ, ಕಾಡೆಮ್ಮೆ, ಅಳಿಲು ಮೊಲಗಳು ಅಪರೂಪದ ಪಕ್ಷಿಗಳು – ಇವೆಲ್ಲ ಮತ್ತೆ ಹುಟ್ಟಲು ಇಪ್ಪತ್ತೈದು ಕಾಡುವರ್ಷಗಳು ಬೇಕು. ಕೆಂಪು ಕೊಕ್ಕಿನ ಬೆಂಗಾಲಿ ಮೂಲದ ಹಕ್ಕಿಯೊಂದು ಆಕಾಶದಲಿ ಪದೇ ಪದೇ ಹಾರಿದರೆ ಬಿತ್ತು ಬೆಂಕಿ ಅಂತ ಸಾಮಾನ್ಯ ಗಾರ್ಡ್ ಗೂ ಗೊತ್ತಿರುತ್ತೆ, ಕೋತಿಗಳು ವಿಚಿತ್ರವಾಗಿ ಕೂಗುತ್ತವೆ. ಅವು ಕೂಗಿ ಹಾರಿ ಸತ್ತಿವೆ.
ಮನುಷ್ಯ ನೀ ಸಂಪೂರ್ಣ ನಾಶವಾಗುವುದು ಯಾವಾಗ?
#ಮನುಷ್ಯನೀಕಾಲಿಟ್ಟಡೆಸರ್ವನಾಶ
ಅತಿಥಿ ಲೇಖಕರು: ಚಕ್ರವರ್ತಿ ಚಂದ್ರಚೂಡ್
