ಸಂದೇಶ
ಭಾರತದ ೭೦ನೆಯ ಗಣರಾಜ್ಯೋತ್ಸವದ ಪ್ರಯುಕ್ತ, ಬಹರೇನ್ ಸಾಮ್ರಾಜ್ಯದಲ್ಲಿ ನೆಲೆಸಿರುವ ಭಾರತೀಯರೆಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು.
ನಾವು ೭೦ನೆಯ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ವಿಶ್ವ ಬ್ಯಾಂಕ್ ಬಿಡುಗಡೆಗೊಳಿಸಿದ “ವ್ಯವಹಾರ ಪಟ್ಟಿ (೨೦೧೯)” ವರದಿಯ ಪ್ರಕಾರ, ೨೦೧೭ರಲ್ಲಿ ಭಾರತವು ೧೦೦ನೆಯ ಸ್ಥಾನದಲ್ಲಿದ್ದದ್ದು, ೨೦೧೮ರಲ್ಲಿ ೨೩ ಸ್ಥಾನಗಳ ಬಡ್ತಿ ಪಡೆದು ಮೇಲೇರಿದೆ. ಭಾರತವು ಸತತ ಎರಡನೆಯ ವರ್ಷ ಅತ್ಯುತ್ತಮ ರೀತಿಯಲ್ಲಿ ಸುಧಾರಣೆ ಕಾಣುತ್ತಿದೆ ಎಂಬುದನ್ನು ವಿಶ್ವ ಬ್ಯಾಂಕ್ ಗಮನಿಸಿದೆ. ಅಲ್ಲದೆ, ಎರಡು ವರ್ಷಗಳಲ್ಲಿ “ಸರಾಗ ವ್ಯವಹಾರ ಕುದುರಿಸುವಿಕೆಯ ಪಟ್ಟಿ”ಯಲ್ಲಿ ಭಾರತವು ೫೩ ಸ್ಥಾನಗಳ ಬಡ್ತಿ ಪಡೆದಿದೆ. ಈ ರೀತಿಯ ಸುಧಾರಣೆಗಳು, ಸಮಗ್ರ ಸುಧಾರೀಕರಣ ಹಾಗೂ ಖಾಸಗಿ ಮತ್ತು ವಿದೇಶಿ ಹೂಡಿಕೆಗಳಿಗೆ ಸೂಕ್ತ ವಾತಾವರಣ ನಿರ್ಮಿಸಲು ಸಂಕೀರ್ಣ ಕ್ರಮ ಕೈಗೊಳ್ಳಲು ಭಾರತ ಸರ್ಕಾರವು ಬದ್ಧತೆ ತೋರಿದೆ. ಕೆಲವು ಗಮನಾರ್ಹ ಸುಧಾರಣೆಗಳ ಪೈಕಿ, “ಒಂದೇ ದೇಶ, ಒಂದೇ ಮಾರುಕಟ್ಟೆ, ಒಂದೇ ತೆರಿಗೆ ವ್ಯವಸ್ಥೆ” (ಸರಕು-ಸೇವಾ ತರಿಗೆ ಅಥವಾ ಜಿಎಸ್‌ಟಿ), ಹಾಗೂ ಮಧ್ಯಸ್ಥಿಕೆ ಮತ್ತು ಸಂಧಾನದ ಮೂಲಕ ಯಾವುದೇ ವಾಣಿಜ್ಯ ವ್ಯಾಜ್ಯಗಳನ್ನು ಬಗೆಹರಿಸುವ ವ್ಯವಸ್ಥೆ ಸ್ಥಾಪಿಸಿರುವುದರಿಂದ, ದೇಶದಲ್ಲಿ ಹೊಸ ವ್ಯವಹಾರ ತೊಡಗಿಸುವುದು ಇನ್ನೂ ಸುಲಭವಾಗಿದೆ.
ಸಾಂಪ್ರದಾಯಿಕವಾಗಿ, ಭಾರತ ಮತ್ತು ಬಹರೇನ್ ಅತ್ಯುತ್ತಮ ಬಾಂಧವ್ಯ ಹೊಂದಿವೆ. ಈ ಬಾಂಧವ್ಯವು ದಿನೇ ದಿನೇ ದೃಢಗೊಳ್ಳುತ್ತಿದೆ. ೨೦೧೮ರಲ್ಲಿ ದ್ವಿಪಕ್ಷೀಯ ಬಾಂಧವ್ಯದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮಗಳಲ್ಲಿ ಹಲವಾರು ಗಮನಾರ್ಹ ಬೆಳವಣಿಗೆಗಳುಂಟಾದವು. ದ್ವಿಪಕ್ಷೀಯ ವ್ಯಾಪಾರವು ೧ ಶತಕೋಟಿ ಡಾಲರ್‌ನ್ನೂ ಮೀರಿದೆ ಹಾಗೂ ಬಹರೇನ್ ಸಾಮ್ರಾಜ್ಯದಲ್ಲಿ ಭಾರತ ದೇಶದ ಹೂಡಿಕೆಯು ಪ್ರತಿ ವರ್ಷವೂ ಹೆಚ್ಚಾಗುತ್ತಲಿದೆ. ಎರಡೂ ರಾಷ್ಟ್ರಗಳಲ್ಲಿ ನಾನಾ ರೀತಿಯ ಬೆಳವಣಿಗೆಗಳು (ಬಹರೇನ್‌ನಲ್ಲಿ ಆರ್ಥಿಕತೆಯ ವೈವಿಧ್ಯೀಕರಣ, ಭಾರತದ ಪ್ರಮುಖ ಯೋಜನೆಗಳಾದ ಮೇಡ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಸ್ಟಾರ್ಟಪ್ ಇಂಡಿಯಾ) ನಮ್ಮ ಬಾಂಧವ್ಯವನ್ನು ವೈವಿಧ್ಯೀಕರಣ ಹಾಗೂ ದೃಢಗೊಳಿಸಲು ಸಹಕಾರಿಯಾಗಲಿವೆ.
ಬಹರೇನ್‌ನೊಂದಿಗಿನ ನಮ್ಮ ದ್ವಿಪಕ್ಷೀಯ ಬಾಂಧವ್ಯಕ್ಕೆ ಬಹಳ ಮುಖ್ಯವಾದ ಅಂಶವೇನೆಂದರೆ, ಬಹರೇನ್‌ನಲ್ಲಿರುವ ಬೃಹತ್ ಭಾರತೀಯ ಸಮುದಾಯ. ಈ ಸಮುದಾಯವು ಬಾಂಧವ್ಯಕ್ಕೆ ಪ್ರಮುಖ ಆಧಾರಗಂಭವಾಗಿದೆ. ಬಹರೇನ್ ಹಾಗೂ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಇಲ್ಲಿನ ಭಾರತೀಯರ ಸಮುದಾಯದ ಕೊಡುಗೆಯನ್ನು ಉಭಯ ದೇಶಗಳ ನಾಯಕರು ಪ್ರಶಂಸಿಸಿದ್ದಾರೆ.
ಬಹರೇನ್ ಸಾಮ್ರಾಜ್ಯ ಹಾಗೂ ಭಾರತ ಗಣರಾಜ್ಯವು ಬಳೆದು, ಅಭಿವೃದ್ಧಿ, ಹಾಗೂ ಸಮೃದ್ಧಿಯ ಪಥದಲ್ಲಿ ಚಲಿಸಲಿ ಎಂದು ಹಾರೈಸುತ್ತ ನನ್ನ ಈ ಭಾಷಣವನ್ನು ಸಂಪೂರ್ಣಗೊಳಿಸುವೆ.
(ಆಲೋಕ್ ಕೆ ಸಿನ್ಹಾ)
International News Desk, Bahrain
Mr.Sisel Panayil Soman, COO – Middle East
