ಕ್ವಿಕ್ ಮೀಡಿಯಾ ಸೊಲ್ಯೂಷನ್ಸ್ ಕಂಪನಿ ಡಬ್ಲೂ ಎಲ್ ಎಲ್ ಆಯೋಜಿಸಿದ “ಅಂತರರಾಷ್ಟ್ರೀಯ ಬ್ರ್ಯಾಂಡ್ ಮತ್ತು ಫ್ರ್ಯಾಂಚೈಸ್ ಎಕ್ಸ್ಪೊ 2019” (International Brands and Franchises Expo 2019) ದ ಮೊದಲ ಆವೃತ್ತಿಯು 2019ರ ಫೆಬ್ರುವರಿ 11ರಂದು ಅರಂಭವಾಯಿತು. ಎಕ್ಸ್ಪೊದ ಪೋಷಕರಾದ ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರದ (Bahrain Tourism & Exhibitio Authority) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ಖಲೀದ್ ಬಿನ್ ಹಮುದ್ ಅಲ್ ಖಲೀಫಾ ಅವರು ಉದ್ಘಾಟಿಸಿದರು. ಪ್ರಮುಖ ಪಾಲುದಾರ ಟಮಕೀನ್, ಸಹ-ಪಾಲುದಾರ ಯುನಿಡೊ ಐಟಿಪಿಒ ಬಹರೇನ್, ಎಂಇಎನ್‌ಎ ಸೆಂಟರ್ ಆಫ್ ಇನ್ವೆಸ್ಟ್ಮೆಂಟ್, ಬಹ್ರೇನ್ ಎಸ್‌ಎಂಇಸ್ ಸೊಸೈಟಿ, ಬಹ್ರೇನ್ ಮಹಿಳಾ ಉದ್ಯಮಿಗಳ ಸಂಘ, ಮಲೇಷಿಯಾದ ವಿಶ್ವ ವಾಣಿಜ್ಯ ಮಂಡಳಿ – ಈ ಎಲ್ಲ ಸಹ-ಆಯೋಜಕ ಸಂಸ್ಥೆಗಳ ಪ್ರತಿನಿಧಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಹರೇನ್ ಮತ್ತು ಇತರೆ ರಾಷ್ಟ್ರಗಳಲ್ಲಿ ವ್ಯವಹರಿಸುತ್ತಿರುವ ಹಲವು ಉದ್ದಿಮೆಗಳ ಫ್ರಾಂಚೈಸ್, ವ್ಯಾಪಾರ ಮತ್ತು ತಂತ್ರಜ್ಞಾನ ಬ್ರ್ಯಾಂಡ್‌ಗಳಿಗೆ ಈ ಎಕ್ಸ್ಪೊಒಂದು ಪ್ರಚಾರ ವೇದಿಕೆಯಾಯಿತು. ಎಕ್ಸ್ಪೊದಲ್ಲಿ ಭಾಗವಹಿಸುತ್ತಿರುವ ಈ ಉದ್ದಿಮೆಗಳು ಎಫ್ ಅಂಡ್ ಬಿ, ಚಿಲ್ಲರೆ ಮಾರಾಟ, ನಿರ್ಮಾಣ, ಹಣಕಾಸು, ಆರೋಗ್ಯ, ವಸತಿ-ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯವರಿಸುತ್ತಿವೆ. ನವನವೀನ ಬ್ರ್ಯಾಂಡ್ ಪರಿಕಲ್ಪನೆಗಳನ್ನು ಹೊತ್ತು ತಂದ ಈ ಉದ್ದಿಮೆಗಳಿಗೆ, ಫ್ರಾಂಚೈಸ್ ವಿಸ್ತರಣೆ ಮತ್ತು ವ್ಯವಹಾರ ಕುದುರಿಸಿಕೊಳ್ಳಲು ಈ ಎಕ್ಸ್ಪೊ ಅವಕಾಶ ಒದಗಿಸಿತು.
ಈ ಎಕ್ಸ್ಪೊದ ಜೊತೆಗೆ ಕಾರ್ಯಾಗಾರಗಳು ಮತ್ತು ಸಮ್ಮೇಳನಗಳು ನಡೆದವು. ಇಲ್ಲಿ ಬಹರೇನ್‌ನಲ್ಲಿರುವ ಮಹಿಳಾ ಉದ್ಯಮಿಗಳು ಮತ್ತು ಉದಯೋನ್ಮುಖ ಉದ್ದಿಮೆಗಳ ಸಾಫಲ್ಯದ ವೃತ್ತಾಂತಗಳನ್ನು ಹಂಚಿಕೊಳ್ಳಲಾಯಿತು.
ಮೂರು ದಿನಗಳು ನಡೆಯುವ ಈ ಎಕ್ಸ್ಪೊದಲ್ಲಿ, ಉದ್ದಿಮೆದಾರಿಕೆ ಮತ್ತು ಬ್ರ್ಯಾಂಡ್‌ಗಳ ವಿಕಸನ ಹಾಗೂ ಆರ್ಥಿಕ ಸ್ಥಿರತೆಯ ಮೇಲೆ ಕೇಂದ್ರೀಕೃತವಾದ ಆಸಕ್ತಿದಾಯಕ ಕಾರ್ಯಾಗಾರಗಳು ನಡೆಯುತ್ತವೆ.
ಸಿಸೆಲ್ ಪನಯಿಲ್ ಸೊಮನ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಧ್ಯಪ್ರಾಚ್ಯ ವಲಯ, ಇಂಡ್‌ಸಮಾಚಾರ್, ಬಹರೇನ್.
