ಹಾಸನದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ ಪ್ರೀತಮ್ ಗೌಡ ಅವರ ಮನೆಯ ಮೇಲೆ ನಿನ್ನೆ ಕಲ್ಲು ತೂರಾಟ ನಡೆದ ಘಟನೆಯ ಹಿನ್ನೆಲೆಯಲ್ಲಿ, ಪಕ್ಷವು ರಾಜ್ಯಪಾಲರಿಗೆ ಲಿಖಿತ ದಾಖಲೆ (memorandum) ಸಲ್ಲಿಸಿದೆ.
ರಾಜ್ಯಪಾಲ ವಾಜೂಭಾಯಿ ವಾಲಾ ಅವರಿಗೆ ಲಿಖಿತ ದಾಖಲೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗ ಮಾತನಾಡಿದ ಭಾಜಪ ಮುಖಂಡ ಬಿ ಎಸ್ ಯಡಿಯೂರಪ್ಪ, ತಮ್ಮ ಪಕ್ಷವು ಕೇಂದ್ರೀಯ ಗೃಹ ಮಂತ್ರಿ ರಾಜನಾಥ್ ಸಿಂಗ್‌ರಿಗೂ ಸಹ ಲಿಖಿತ ದಾಖಲೆ ಸಲ್ಲಿಸುವುದಾಗಿ ಹೇಳಿದರು. ಇದಕ್ಕೂ ಮುಂಚೆ, ಭಾಜಪ ಸದಸ್ಯರು ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸಿದರು.
ಅಡಿಯೋ ಸುರುಳಿಯಲ್ಲಿ ಪ್ರೀತಮ್ ಗೌಡರದು ಎನ್ನಲಾದ ಧ್ವನಿಯು, ಜಾತ್ಯಾತೀತ ಜನತಾ ದಳದ ಅಧ್ಯಕ್ಷ ಎಚ್ ಡಿ ದೇವೇ ಗೌಡ, ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಪಕ್ಷದ ವಿರುದ್ಧ ನಕಾರಾತ್ಮಕ ಹೇಳಿಕೆ ನೀಡಿತ್ತು. ಇದರ ವಿರುದ್ಧ ಆಕ್ರೋಶಗೊಂಡ ಜಾದಳ ಕಾರ್ಯಕರ್ತರು ಪ್ರೀತಮ್ ಗೌಡ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಒಬ್ಬ ಭಾಜಪ ಕಾರ್ಯಕರ್ತರು ಗಾಯಗೊಂಡರು. ಪ್ರೀತಮ್ ಗೌಡ ಈ ಧ್ವನಿ ತಮ್ಮದಲ್ಲ ಎಂದು ಹೇಳಿದ್ದಾರೆ.
ಚಿತ್ರ ಕೃಪೆ: ಪ್ರೀತಮ್ ಗೌಡ ಟ್ವಿಟರ್ ಖಾತೆ
