ಆನಂದಪುರದ ಪವನ್ ಕುಮಾರ್ ಬಹು ಮುಖ ಪ್ರತಿಭೆಯ ಯುವ ಕಲಾವಿದ, ವರದಿಗಾರ, ದೈವ ಭಕ್ತ, ಸಮಾಜ ಸೇವಕ ಹೀಗೆ ಹಲವಾರು ಆರೋಗ್ಯಕರ ಚಟುವಟಿಕೆಯ ಜೊತೆಗೆ ಆನಂದಪುರಂ ನ ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆದಾರದಲ್ಲಿ ಕೆಲಸ.
ಮೊನ್ನೆ ಆನಂದಪುರಂನಲ್ಲಿ ಮೊದಲ ಶೀಲ್ಡ್ ಡೌನ್ ಆದಾಗ ಅಲ್ಲಿನ ಲೈವ್ ವರದಿ ಮಾಡಿದಾತ ಅದು ಹೇಗೋ +ve ಬಂತು ಅಂದಾಗ ಬೇಸರ ಆಗಿತ್ತು.
ನನ್ನ ಮಗನ ಶಾಲಾ ಸಹಪಾಟಿ ನಮ್ಮ ವರಸಿದ್ದಿ ವಿನಾಯಕ ದೇವಾಲಯದ ಪ್ರತಿ ತಿಂಗಳ ಸಂಕಷ್ಟ ಹರ ಚತುಥಿ೯ಯಿಂದ ಪ್ರತಿ ವರ್ಷದ ಜಾತ್ರೆಯಲ್ಲೂ ಹೆಚ್ಚು ಜವಾಬ್ದಾರಿ ವಹಿಸುವ ನಿಜ ಭಕ್ತ.
ಇವರ ತಂದೆ ರಾಮಣ್ಣ ನನ್ನ ದೋಸ್ತ್ ಸಣ್ಣ ಸಿಮೆಂಟ್ ಅಂಗಡಿ ನಡೆಸುತ್ತಾರೆ ನನ್ನ ಎಲ್ಲಾ ಕಟ್ಟಡ ಕಾಮಗಾರಿಗೆ ಅವರಿಂದಲೇ ಸಿಮೆಂಟ್.
ಹಾಗಾಗಿ ಅತ್ಯಾಪ್ತರಲ್ಲಿ ಯಾರಿಗಾದರೂ ಹೀಗಾದರೆ ಆಗುವ ನೋವು ಹೇಳಿಕೊಳ್ಳುವಂತಿಲ್ಲ, ಅಂಬುಲೆನ್ಸ್ ನಲ್ಲಿ ಹೋಗುವಾಗ ದ್ವನಿಯಲ್ಲಿ ಅಳಕು ಕಂಡಿತು ದೈಯ೯ ಹೇಳಿದೆ ಪ್ರತಿ ನಿತ್ಯ ಪೋನಿನಲ್ಲಿ ದೈಯ೯ ಮತ್ತು ಹಾಡು ಇತರೆ ಕ್ಷಿಪಿಂಗ್ ವಾಟ್ಸ್‌ಪ್ ಮಾಡುತ್ತಿದ್ದೆ.
ಮೊನ್ನೆ ಡಿಸ್ಚಾಜ್೯ ಆಗಿ ಬಂದಿದ್ದೇನೆ ಅಂತ ಪೋನ್ ಮಾಡಿದಾಗ ದ್ವನಿಯಲ್ಲಿ ಯುದ್ದ ಗೆದ್ದು ಬಂದ ಸಂಭ್ರಮ ಇತ್ತು.
ಶಿವಮೊಗ್ಗದಲ್ಲಿ + Ve ಬಂದವರಿಗೆ ನೀಡಿದ ವ್ಯವಸ್ಥೆ ಊಟ ತುಂಬಾ ಚೆನ್ನಾಗಿತ್ತಂತೆ.
ಆದರೆ ಇವರಿಗೆ ಕೊರಾನಾದ ಯಾವುದೇ ಸಿಂಪ್ಟಮ್ ಇಲ್ಲದೇ ಇದ್ದದ್ದು ಆಶ್ಚಯ೯ ಒಂದೇ ಇವರ ದೇಹದ ಪ್ರತಿರೋದ ಕಾರಣ ಅಥವ ಕೊರಾನಾ ಪರೀಕ್ಷೆ ಫಲಿತಾಂಶ ತಪ್ಪೋ ಗೊತ್ತಿಲ್ಲ!?.
ನಮ್ಮನ್ನ ನೋಡಿ ಈಗ ಮಾರು ದೂರು ಓಡುತ್ತಾರೆ ನಮ್ಮ ಪರಿಚಿತರು ಎಂಬ ಈ ಕಿರಿಯ ಮಿತ್ರನ ನೋವಿನ ಮಾತು ಬೇಸರ ತರಿಸಿತು, ನಮ್ಮ ಜನ ಚಿರ೦ಜೀವಿಗಳ೦ತೆ ಭಾವಿಸಿದ್ದಾರೆ ಅವರಿಗೂ ಒಮ್ಮೆ ಬಂದರೆ ಅಂತ ಯೋಚಿಸಿದರೆ ಹೀಗಾಡುತ್ತಿರಲಿಲ್ಲ ಅಂತ ಸಮಾದಾನ ಹೇಳಿದೆ.
ಯಾವುದೇ ತೊಂದರೆ ಇಲ್ಲದೆ ನಮ್ಮ ಊರಿನ ಎಲ್ಲಾ + Ve ಆದವರೂ ಆರಾಮಾಗಿ ಬಂದಿದ್ದು ಸಮಾದಾನ ಮತ್ತು ಸಂತೋಷದ ಸುದ್ದಿ ನಮಗೆಲ್ಲ.

By Arun Prasad
