1991ರಲ್ಲಿ ಆನಂದಪುರಂ ಕನ್ನಡ ಯುವಕ ಸಂಘ ಡಾಕ್ಟರ್ ಮೋದಿಯವರ ಉಚಿತ ಕಣ್ಣಿನ ಚಿಕಿತ್ಸಾ ಶಿಭಿರ ಹಮ್ಮಿಕೊಂಡಿತ್ತು ಅದಕ್ಕಾಗಿ ಪೂರ್ವ ತಯಾರಿ ಸಭೆಯಲ್ಲಿ ಮುಂಬಾಳಿನ ಗೋಕುಲ್ ಪಾರಂನ ಪಾದರ್ ಜೋಸ್ ಅಧ್ಯಕ್ಷರನ್ನಾಗಿ ನನ್ನನ್ನ ಉಪಾಧ್ಯಕ್ಷ ನಾಗಿ ಆಯ್ಕೆ ಮಾಡಿ ಶಿಬಿರದ ಯಶಸ್ವಿಗೆ ಬೇಕಾದ ಸಂಪನ್ಮೂಲ ಕ್ರೂಡಿಕರಿಸುವ ಜವಾಬ್ದಾರಿ ಕೊಟ್ಟಿದ್ದರು.
ಆಗೆಲ್ಲ ಕಣ್ಣಿನ ಪೊರೆ ಬಂದು ಹತ್ತು ಇಪ್ಪತ್ತು ವರ್ಷ ಆದವರು ಇರುತ್ತಿದ್ದರು ಅವರು ಅವರ ಜೊತೆ ಇಬ್ಬರು ಬರುತ್ತಿದ್ದರು ಅವರಿಗೆ ಊಟ ವಸತಿ ವ್ಯವಸ್ಥೆ ಸುಮಾರು 7 ದಿನ ಮಾಡಬೇಕಾಗಿತ್ತು ಮತ್ತು ಮೋದಿಯವರ ಕಣ್ಣಿನ ಆಪರೇಷನ್ ಅಂದರೆ ತಮ್ಮ ಕಣ್ಣು ಸೇಪ್ ಎನ್ನುವಷ್ಟು ನಂಬಿಕೆ ಆದ್ದರಿಂದ ಶಿಬಿರಕ್ಕೆ ಪರೀಕ್ಷಿಸಿಕೊಳ್ಳಲು ಬರುವವರು ಎರೆಡು ಸಾವಿರದ ಹತ್ತಿರ ಇರುತ್ತಿದ್ದರು.
ಇವರಲ್ಲಿ ಪೊರೆ ತೆಗೆಯಬಹುದಾದ ಸುಮಾರು 300 ರಿಂದ 400 ಜನರಿಗೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡುತ್ತಿದ್ದರು ಸುಮಾರು ಸಾವಿರ ಜನರಿಗೆ ಉಟೋಪಚಾರ ಅನಿವಾಯ೯.
ಈ ನೇತ್ರ ಚಿಕಿತ್ಸೆಗಾಗಿ ದಾನಿಗಳನ್ನ ಸಂಪಕಿ೯ಸುವ ಸಂದಭ೯ದಲ್ಲಿ ಪಾದರ್ ಜೋಸ್ ನನ್ನನ್ನ ಅನೇಕ ಶ್ರೀಮಂತರ ಹತ್ತಿರ ಕರೆದೊಯ್ದಿದ್ದರು ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿರಲಿಲ್ಲ ಹಾಗಾಗಿ ನನಗೆ ಹೆಚ್ಚಿನವರ ಪರಿಚಯ ಇರಲಿಲ್ಲ.
ಅದೇ ಮೊದಲ ಸಾರಿ ನಾನು ಚಿಪ್ಪಳಿ ಗೋಪಾಲಕೃಷ್ಣ ರಾಯರ ನೋಡಿದ್ದು, ಎಪಿಎಂಸಿಯ ಅವರ ಸಿದ್ಧಿ ವಿನಾಯಕ ಅಡಿಕೆ ಮಂಡಿಯಲ್ಲಿ ಅವರ ವ್ಯವಹಾರದ ಗಡಿಬಿಡಿಯಲ್ಲಿಯೂ ಪಾದರ್ ಜೋಸ್ ರನ್ನ ಮತ್ತು ಅವರ ಜೊತೆ ಇದ್ದ ನಮ್ಮನ್ನೆಲ್ಲ ಕೂರಿಸಿ ವಿಚಾರಿಸಿ ಇದು ಒಳ್ಳೆಯ ಕೆಲಸ ಅಂತ ಹೇಳಿ 500 ರೂಪಾಯಿ ದೇಣಿಗೆ ನೀಡಿದ್ದರು! ಆ ನೇತ್ರ ಶಿಬಿರಕ್ಕೆ ಅವತ್ತಿನ ಕಾಲಕ್ಕೆ ಇದು ಅತಿ ದೊಡ್ಡ ದೇಣಿಗೆ.
ಅವತ್ತಿನಿಂದ ಅವರನ್ನ ಗಮನಿಸುತ್ತಿದ್ದೆ ಅವರು ಯಾವತ್ತೂ ತಮ್ಮ ಸಜ್ಜನಿಕೆಗೆ ಚ್ಯುತಿ ಬರದಂತೆ ನಡೆದರು, ಅವರ ರೀತಿ ನೀತಿ,ನಡತೆ, ಮಾತು ಮತ್ತು ಅವರ ವೇಷ ಭೂಷಣ ಕೂಡ ಒಂದು ಚೂರು ಕಪ್ಪು ಚುಕ್ಕೆ ಇಲ್ಲದ ಸಂತೃಪ್ತ ಜೀವನ ನಡೆಸಿದರು.
ಇವತ್ತು ಅವರಿಗೆ ಶ್ರದ್ದಾ೦ಜಲಿ ಅಪಿ೯ಸುವ ಸಂಭ೯ದಲ್ಲಿ ಅವರ ನನ್ನ ಮೊದಲ ಬೇಟಿ ನೆನಪಾಯಿತು.
ದೇವರು ಅವರ ಆತ್ಮಕ್ಕೆ ಸದ್ಗತಿ ಸ್ವಗ೯ ಪ್ರಾಪ್ತಿ ನೀಡಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತಾ ಶ್ರದ್ಧಾ೦ಜಲಿ ಅಪಿ೯ಸುತ್ತೇನೆ.
ಕೆ. ಅರುಣ್ ಪ್ರಸಾದ್
ಮಾಜಿ ಜಿ.ಪಂ.ಸದಸ್ಯ
ಆನಂದಪುರಂ.
By Arun Prasad