E.C (ಋಣಬಾರ ಪ್ರಮಾಣ ಪತ್ರ) ಪಡೆಯಲು ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು (08-06-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಸಾಗರದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ E.C ಪಡೆಯಲು ತಾಂತ್ರಿಕ ಸಮಸ್ಯೆಗಳಿಂದ ಜಮೀನಿನ ಮೇಲೆ ಸಾಲ ಪಡೆಯಲು ,ಜಮೀನು ಕ್ರಯ ಮಾಡಿಸಲು ಇನ್ನಿತರ ಉದ್ದೇಶಗಳಿಗೆ ಆನ್ ಲೈನ್ ತಂತ್ರಾಂಶದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಿ,
ಸ್ಥಳದಲ್ಲಿಯೇ ಜಿಲ್ಲಾ ನೋಂದಣಾಧಿಕಾರಿಗಳಿಗೆ ಕರೆ “ಕೈ ಬರಹದ ಮೂಲಕ ಋಣಬಾರ ಪ್ರಮಾಣ ಪತ್ರ” ನೀಡುವಂತೆ ಸೂಚಿಸಿದರು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ನಾಳೆಯಿಂದ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ದೇವೇಂದ್ರಪ್ಪ ಯಲಕುಂದ್ಲಿ,ಲೋಕನಾಥ್ ಬಿಳಿಸಿರಿ, ಚೇತನರಾಜ್ ಕಣ್ಣೂರು ಉಪಸ್ಥಿತರಿದ್ದರು.
By Goutham K S, Sagara