ಕನ್ನಡ

ಅರಣ್ಯ ಅಧಿಕಾರಿಗೆ ಬೆದರಿಕೆ ಹಾಕಿ ದರ್ಪ ತೋರಿದ ಕಾಂಗ್ರೆಸ್ ಶಾಸಕ

“ಕೈ ಕಾಲು ಕತ್ತರಿಸ್ತೀನಿ” ಎಂದುಅರಣ್ಯ ಅಧಿಕಾರಿಯೊಬ್ಬರಿಗೆಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕರೊಬ್ಬರು, ಅಧಿಕಾರ ದುರುಪಯೋಗಪಡಿಸಿ ಗೂಂಡಾಗಿರಿತನ ಮೆರೆದಿದ್ದು ಸುದ್ದಿಯಾಗಿದೆ.

ಭದ್ರಾವತಿ ವಲಯದ ಕಾಡೊಂದರಲ್ಲಿ ದೇವಸ್ಥಾನ ಕಟ್ಟಲು ಗ್ರಾಮಸ್ಥರು ಯತ್ನಿಸುತ್ತಿದ್ದರು. ಇದಕ್ಕೆ ಡಿಸೆಂಬರ್ ೩೧ರಂದು ಕಾಡಿನಲ್ಲಿ ಶಂಕುಸ್ಥಾಪನೆ ಸಹ ಮಾಡಿದ್ದರು. ಆದರೆ ಆ ಕಾಡಿನೊಳಗೆ ದೇವಸ್ಥಾನ ನಿರ್ಮಿಸುವ ಯತ್ನಕ್ಕೆ ವಲಯದ ಅರಣ್ಯ ಅಧಿಕಾರಿಯೊಬ್ಬರು ಆಕ್ಷೇಪವೆತ್ತಿದರು. ಕಾಡಿನೊಳಗೆ ಯಾವುದೇ ಕಟ್ಟಡ ನಿರ್ಮಿಸಲುಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಅಗತ್ಯ ಎಂದು ಅರಣ್ಯ ಅಧಿಕಾರಿ ಗ್ರಾಮಸ್ಥರಿಗೆ ಅರ್ಥೈಸಲು ಯತ್ನಿಸಿದರು. ಆಗ ಅಲ್ಲಿನ ಗ್ರಾಮಸ್ಥರು ಶಾಸಕ ಬಿ ಕೆ ಸಂಗಮೇಶ್ವರ ಅವರನ್ನು ಭೇಟಿಯಾಗಿ ದೇವಸ್ಥಾನ ಕಟ್ಟಲು ಸಹಾಯ ಮಾಡಬೇಕೆಂದು ಕೋರಿದರು.

ಶಾಸಕ ಸಂಗಮೇಶ್ವರ ಅರಣ್ಯ ಅಧಿಕಾರಿಗೆ ಕರೆ ಮಾಡಿ ಅವರನ್ನು ಅವಾಚ್ಯ ಶಬ್ದಗಳಿಂದ ಬಯ್ದು ಬೆದರಿಕೆ ಹಾಕಿದರು. ಸರ್ಕಾರಿ ನೌಕರರಾಗಿರುವ ಅರಣ್ಯಾದಿಕಾರಿಗೆ “ಅವರು ಇಂದು ಅಲ್ಲಿ ಶಾಸ್ತ್ರ ಮಾಡಿಸಿದ್ದಾರೆ; ದೇವಸ್ಥಾನ ಕಟ್ಟಲಿಕ್ಕೆ ಯಾರೂ ಅಡ್ಡಿಪಡಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ ಅವರ ಕೈ ಕಾಲು ಕತ್ತರಿಸಿ ಹಾಕುತ್ತೇನೆ. ಒಳ್ಳೆ ಮಾತಿನಲ್ಲಿ ಹೇಳಿದರೆ ನಿಮಗೆ ಅರ್ಘವಾಗುವುದಿಲ್ಲ  ನಿಮಗೆ ಎಚ್ಚರಿಕೆ ಕೊಡ್ತಿದೀನಿ” ಎಂದರು.

ಪಕ್ಷದ ಶಾಸಕರೊಬ್ಬರು ಈ ರೀತಿಯ ಬೆದರಿಕೆ ಹಾಕಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಕಆಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿದೆ.

Click to comment

Leave a Reply

Your email address will not be published. Required fields are marked *

three + 7 =

To Top
WhatsApp WhatsApp us