ಪುಲ್ವಾಮಾ ಭಯೋತ್ಪಾದಕ ಧಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶವನ್ನುದ್ದೇಶಿಸಿ ಮಾತನಾಡಿದರು.
ಫೆಬ್ರುವರಿ ೧೪ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಹತ್ಯಾಕಾಂಡದಲ್ಲಿ ಪಾಕಿಸ್ತಾನದ ಕೈವಾಡವಿರುವ ಸಾಕ್ಷ್ಯ ಒದಗಿಸಿ, ನಮ್ಮ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಮ್ರಾನ್ ಭರವಸೆ ನೀಡಿದರರು.
ಆದರೆ ಪುಲ್ವಾಮಾ ಪ್ರಕರಣದಲ್ಲಿ ಭಾರತವು ನಮ್ಮ ಮೇಲೆ ಏಕಾಏಕಿ ಧಾಳಿ ಮಾಡಿದಲ್ಲಿ ನಾವೂ ಸಹ ಮುಂದಾಲೋಚಿಸದೇ ತಿರುಗೇಟು ನೀಡಲು ಸಿದ್ಧ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದರು.
೪೦ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಆತ್ಮಾಹುತಿ ಧಾಳಿಗೆ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಕಾರಣ ಎಂದು ಭಾರತವು ಖಡಾಖಂಡಿತವಾಗಿ ಹೇಳಿದೆ.
ಸಾಕ್ಷಿಯಿಲ್ಲದಿದ್ದಾಗಲೂ ಸಹ ಭಾರತವು ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ ಎಂದು ಇಮ್ರಾನ್ ಹೇಳಿದರು. “ನೀವು ಸಾಕ್ಷ್ಯ ಕೊಡಿ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
“ನಮ್ಮದು ಹೊಸ ಪಾಕಿಸ್ತಾನ. ಈ ತರಹ ಭಯೋತ್ಪಾದನೆಯಲ್ಲಿ ತೊಡಗಲು ನಾವು ಅವಕಾಶ ಕೊಡುವುದಿಲ್ಲ” ಎಂದರು. ಯುದ್ಧದ ಬದಲು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಇಮ್ರಾನ್ ಹೇಳಿದರು.
