ಪ್ರಮಾಣಿತ ರಾಸಾಯನಿಕ ಚಿಕಿತ್ಸೆ(chemotherapy)ಗಿಂತಲೂ ಫಲಕಾರಿಯಾಗಬಹುದಾದ ರಾಸಾಯನಿಕ ಸಂಯುಕ್ತವೊಂದನ್ನು ಷೆಫೀಲ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೊಸ ಸಂಶೋಧನೆಯ ಮೂಲಕ ಪತ್ತೆ ಮಾಡಿದ್ದಾರೆ.
ಬಹಳಷ್ಟು ಕ್ಯಾನ್ಸರ್ ಗೆಡ್ಡೆಗಳನ್ನು ಶಮನಗೊಳಿಸಲು ರಾಸಾಯನಿಕ ಚಿಕಿತ್ಸೆಯು ಪ್ರಾಥಮಿಕ ಚಿಕಿತ್ಸೆಯಾಗಿದ್ದು, ಫಲಕಾರಿಯಾಗಿರುವುದೂ ಉಂಟು. ಆದರೆ, ಸಿಸ್ಪ್ಲಾಟಿನ್‌ನಂತಹ ಪ್ರಾಥಮಿಕ ರಾಸಾಯನಿಕ ಚಿಕಿತ್ಸಾ ಔಷಧಿಗೂ ಕೂಡ, ಹಲವು ಕ್ಯಾನ್ಸರ್‌ಗಳು ಸಹಜವಾಗಿಯೂ ಪ್ರತಿರೋಧ ಒಡ್ಡುತ್ತವೆ, ಅಥವಾ ಪ್ರತಿರೋಧ ಒಡ್ಡಲಾರಂಭಿಸುತ್ತವೆ.
ಚಿಕಿತ್ಸೆಯನ್ನು ಪ್ರತಿರೋಧಿಸುವಂತಹ ಕ್ಯಾನ್ಸರ್‌ಗಳ ವಿರುದ್ಧ ಫಲಕಾರಿಯಾಗಬಲ್ಲ ಹೊಸ ಔಷಧಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಸಂಶೋಧನೆಯ ವರದಿಯನ್ನು Journal of the American Chemical Society ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.
ಅಧ್ಯಯನದಲ್ಲಿ, ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ತಯಾರಿಸಿದ ಹೊಸ ರಾಸಾಯನಿಕ ಸಂಯುಕ್ತಗಳನ್ನು ಪ್ರಮಾಣಿತ ಕ್ಯಾನ್ಸರ್ ಚಿಕಿತ್ಸೆಗೂ ಪ್ರತಿರೋಧಿಸುವ ಕ್ಯಾನ್ಸರ್ ಕೋಶಗಳ ಮೇಲೆ ಪ್ರಯೋಗಿಸಿದರು. ಸಾಮಾನ್ಯ ಕೋಶಗಳಿಗೆ ಎಷ್ಟು ವಿಷಕಾರಿ ಎಂಬುದನ್ನು ಪರೀಕ್ಷಿಸಲು ಈ ರಾಸಾಯನಿಕ ಸಂಯುಕ್ತಗಳನ್ನು ತೀವ್ರವಲ್ಲದ ಕೋಶಗಳ ಮೇಲೆ ಪ್ರಯೋಗಿಸಿದರು.
ತೀವ್ಯವಲ್ಲದ ಕೋಶಗಳ ಮೇಲೆ ದುಷ್ಕರಿಣಾಮ ಬೀರದ, ಆದರೆ ಪ್ರಮಾಣಿತ ಚಿಕಿತ್ಸೆಗೆ ವಾಸಿಯಾಗದ ಕ್ಯಾನ್ಸರ್ ಕೋಶಗಳ ಮೇಲೆ ಈ ರಾಸಾಯನಿಕ ಸಂಯುಕ್ತವು ಪ್ರಭಾವ ಬೀರಿದ್ದನ್ನು ಗಮನಿಸಿದರು.
ಪ್ರೊ. ಜಿಮ್ ಥಾಮಸ್ ಹೇಳುವಂತೆ, ಸುಮಾರು ೨೦%ರಷ್ಟು ಕ್ಯಾನ್ಸರ್ ಕೋಶಗಳು, ಕೋಶ ಮರಣ ಪ್ರಕ್ರಿಯೆ ಆರಂಭಿಸುವ ಆಂತರಿಕ ಸೂಚನೆಗಳನ್ನು ಈ ಕ್ಯಾನ್ಸರ್ ಕೋಶಗಳು ಕಡೆಗಾಣಿಸಿ, ಸಾಮಾನ್ಯ ಚಿಕಿತ್ಸೆಗಳಿಗೆ ಪ್ರತಿರೋಧ ಒಡ್ಡಲಾರಂಭಿಸುತ್ತವೆ. ಈ ರೀತಿಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಂತಹ ರಾಸಾಯನಿಕ ಸಂಯುಕ್ತವನ್ನು ನಾವು ಪತ್ತೆ ಮಾಡಿದ್ದೇವೆ.
ಇದು ರಾಸಾಯನಿಕ ಚಿಕಿತ್ಸೆಗೆ ಬಳಸಲಾಗುವ ರಾಸಾಯಿಕ ಸಂಯುಕ್ತಗಳಂತೆ ಸಮರ್ಥ, ಆದರೆ ಚಿಕಿತ್ಸೆಗೆ ಪ್ರತಿರೋಧ ಒಡ್ಡುವ ಕ್ಯಾನ್ಸರ್ ಕೋಶಗಳ ವಿರುದ್ಧವೂ ಪರಿನಾಮಕಾರಿಯಾಗಿದೆ ಎಂದು ವಿವರಿಸಿದರು. ಇದು ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆಗೆ ಬಹಳ ಉಪಯುಕ್ತವಗಲಿದೆ ಎಂದು ಪ್ರೊ ಥಾಮಸ್ ಹೇಳಿದರು.
