ಪುಲ್ವಾಮಾ ಹತ್ಯಾಕಾಂಡವನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೂ ಕೂಡ ತಮ್ಮ ತಮ್ಮ ರೀತಿಯಲ್ಲಿ ಖಂಡಿಸಿದರು. ಹುತಾತ್ಮ ಸೈನಿಕರ ಕುಟಂಬಗಳಿಗೆ ಸಾಂತ್ವನ ಹೇಳಿದರು; ಕೆಲವರು ಧನ ಸಹಾಯ ಮಾಡಲು ನಿರ್ಧರಿಸಿದರು. ಕೇಂದ್ರ ಸರ್ಕಾರ ಏನೇ ಕ್ರಮ ಕೈಗೊಂಡರೂ ನಾವು ಬೆಂಬಲಿಸುವೆವು ಎಂದು ಹೇಳಿಕೆ ಕೊಟ್ಟರು.
ಆದರೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ ದಿವ್ಯಸ್ಪಂದನಾ ಈ ಹತ್ಯಾಕಾಂಡದ ಬಗ್ಗೆ ಒಂದೇ ಒಂದು ಖಂಡನೆಯ ಮಾತು ಕೂಡ ಆಡಲಿಲ್ಲ. ಈಕೆ ನಿಶ್ಶಬ್ದವಾಗಿರುವುದು ಜನರ ಮನಗಳಲ್ಲಿ ಹಲವು ಪ್ರಶ್ನೆಗೆ ಎಡೆ ಮಾಡಿದೆ.
ಹುತಾತ್ಮರಾದ ಯೋಧರ ಪೈಕಿ ಮಂಡ್ಯ ಜಿಲ್ಲೆಯ ಗುರು ಎಂಬವರೂ ಸಹ ಸೇರಿದ್ದರು. ಅವರ ಕುಟಂಬಕ್ಕೆ ಸಂತಾಪ ಸೂಚಿಸುವಂತಹ ಯಾವುದೇ ಸಾಮಾಜಿಕ ಮಾಧ್ಯಮ ಪೋಸ್ಟ್‌ಅನ್ನು ದಿವ್ಯಸ್ಪಂದನಾ ಮಾಡದೇ ಇದ್ದದ್ದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾಗೆಲ್ಲ ಕೇವಲ ನರೇಂದ್ರ ಮೋದಿಯವರನ್ನು ವೈಯಕ್ತಿಕವಾಗಿ ನಿಂದಿಸುತ್ತಲೇ ಇದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಉಗ್ರರ ವಿರುದ್ಧದ ಕ್ರಮ ವಿಚಾರದಲ್ಲಿ ರಾಹುಲ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದನ್ನೂ ಸಹ ದಿವ್ಯಸ್ಪಂದನಾ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೂ ಉಲ್ಲೇಖಿಸಲಿಲ್ಲ. ಇದು ಗಮನಿಸಬೇಕಾದ ವಿಚಾರ.
ಹುತಾತ್ಮರಿಗಾಗಿ ಪಾಲಂ ವಾಯುನೆಲೆಯಲ್ಲಿ ನಡೆದ ಶ್ರದ್ಧಾಂಜಲಿ ಸಮಾರಂಭದಲ್ಲಿ ಬಹಳಷ್ಟು ಪ್ರಮುಖರು ಅಲ್ಲಿ ಸೇರಿದ್ದರೂ, ಅವರನ್ನು ಉಪೇಕ್ಷಿಸಿ, ಕೇವಲ ರಾಹುಲ್ ಅಂತಿ ನಮನ ಸಲ್ಲಿಸುತ್ತಿದ್ದನ್ನು ಮಾತ್ರ ಟ್ವೀಟ್ ಮಾಡುತ್ತಿದ್ದರಂತೆ.
ಮಂಡ್ಯದ ಜನರಿಗೆ ದಿವ್ಯಸ್ಪಂದನಾ ಅವರ ಬಂಡವಾಳ ಗೊತ್ತಾಗಿರುವಂತಿದೆ. ದಿವ್ಯಸ್ಪಂದನಾ ಹಿಂದೆ ಮಂಡ್ಯದಿಂದ ಸಂಸದೆಯಾಗಿ, ನಂತರ ಅಲ್ಲಿ ನಿಂತು ಸೋತು, ಅಲ್ಲಿದ್ದ ಬಾಡಿಗೆ ಮನೆ ಖಾಲಿ ಮಾಡಿ, ಸದ್ದಿಲ್ಲದೆ ದೆಹಲಿ ಸೇರಿಕೊಂಡಿದ್ದಾರೆ.
ಚಿತ್ರ ಕೃಪೆ: Divya Spandana Twitter
ಸಿಬಿನ್ ಪನಯಿಲ್ ಸೊಮನ್
ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್
