ಪ್ರಸರಣ ಮತ್ತು ಸಂವಹನಾ ಮಂಡಳಿ (ಬಿಒಸಿ), ಖಾಸಗಿ ಟಿವಿ ವಾಹಿನಿಗಳಿಗಾಗಿ ನಿಗಧಿಪಡಿಸಿರುವ ಜಾಹೀರಾತಿನ ದರಗಳನ್ನು ಕೇಂದ್ರೀಯ ಸೂಚನಾ ಮತ್ತು ಪ್ರಸರಣ ಮಂತ್ರಾಲಯವು ಪರಿಷ್ಕರಿಸಲು ನಿರ್ಧರಿಸಿದೆ.
ಮಂತ್ರಾಲಯವು ರಚಿಸಿದ ಪರಿಶೀಲನಾ ಸಮಿತಿಯು ಸಲ್ಲಿಸಿದ ವರದಿಯನ್ನು ಆಧರಿಸಿ ಈ ಪರಿಷ್ಕೃತ ದರಗಳನ್ನು ಘೋಷಿಸಿದೆ.
೨೦೧೭ರಲ್ಲಿನ ದರಗಳಿಗೆ ಹೋಲಿಸಿದರೆ, ಬಹಳಷ್ಟು ಖಾಸಗಿ ಟಿವಿ ವಾಹಿನಿಗಳಿಗೆ ಪರಿಷ್ಕೃತ ದರಗಳು ೧೧% ರಷ್ಟು ಹೆಚ್ಚಾಗಲಿವೆ. ವ್ಯಾಪ್ತಿ, ಹೆಚ್ಚಿನ ವೀಕ್ಷಣೆ ಮತ್ತು ಜನಪ್ರಿಯತೆ ಹೊಂದಿರುವ ಇನ್ನೂ ಕೆಲವು ವಾಹಿನಿಗಳಿಗೆ ದರಗಳು ಇನ್ನೂ ಹೆಚ್ಚಾಗಬಹುದು. ವ್ಯಾಪ್ತಿಯನ್ನು ಆಧರಿಸಿ ವಾರ್ತಾ ಹಾಗೂ ವಾರ್ತೆಯಲ್ಲದ ವಾಹಿನಿಗಳಿಗೆ ಬೇರೆ-ಬೇರೆ ದರಗಳನ್ನು ನಿಗಧಿಪಡಿಸಲಾಗುವುದು.
ಮಂತ್ರಾಲಯದ ಈ ನಿರ್ಧಾರದಿಂದಾಗಿ ಹೆಚ್ಚಿನ ದರಗಳ ಅನುಕೂಲ ಪಡೆಯುವ ಉದ್ದೇಶ ಹೊತ್ತಿರುವ ಈ ಟಿವಿ ವಾಹಿನಿಗಳಿಗೆ ಬಿಒಸಿ ಸದಸ್ಯತ್ವ ಪಡೆಯಲು ಸುಲಭವಾಗುವುದು ಎನ್ನಲಾಗಿದೆ.
