ಪಾದ್ರಿಗಳು, ಬಿಷಪ್‌ಗಳು ಕ್ರೈಸ್ತ ಸನ್ಯಾಸಿನಿಯರ (nuns) ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನನ್ನು ಪೋಪ್ ಫ್ರಾನ್ಸಿಸ್ ಒಪ್ಪಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಸನ್ಯಾಸಿನಿಯರನ್ನು ಲೈಂಗಿಕ ಗುಲಾಮೆಯರನ್ನಾಗಿ ಇಟ್ಟುಕೊಳ್ಳಲಾಗುತ್ತಿತ್ತು ಎಂದು ಪೋಪ್ ಒಪ್ಪಿಕೊಂಡಿದ್ದಾರೆ.
ಆ ಪ್ರಕರಣದ ಫಲವಾಗಿ, ತಮಗೆ ಮಂಚೆ ಇದ್ದ ಪೋಪ್ ಬೆನೆಡಿಕ್ಟ್ ಅವರು ಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಸನ್ಯಾಸಿನಿಯರ ಇಡೀ ಘಟಕವನ್ನೇ ಮುಚ್ಚಬೇಕಾಯಿತು ಎಂದು ಪೋಪ್ ವಿವರಿಸಿದರು. ಇಗರ್ಜಿಯು ಈ ಪಿಡುಗಿಗೆ ಪರಿಹಾರವನ್ನು ಹುಡುಕುತ್ತಲಿದೆ ಎಂದು ಪೋಪ್ ಹೇಳಿದರು.
ಕಳೆದ ನವೆಂಬರ್‌ನಲ್ಲಿ ಕ್ಯಾಥೊಲಿಕ್ ಇಗರ್ಜಿಯ ಕ್ರೈಸ್ತ ಸನ್ಯಾಸಿನಿಯರ ಜಾಗತಿಕ ಸಂಘಟನೆಯು “ಮೌನ ಮತ್ತು ಗುಟ್ಟಾಗಿಡುವ ಸಂಸ್ಕೃತಿ”ಯ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿತು.
ಇಗರ್ಜಿಯಲ್ಲಿ ಮಹಿಳೆಯರನ್ನು “ಎರಡನೆಯ ದರ್ಜೆ”ಯ ತರಹ ನಡೆಸಿಕೊಳ್ಳುವ ಪಿಡುಗಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಪೋಪ್ ಹೇಳಿದರು. ಅತ್ಯಾಚಾರ ನಡೆಸಿದಂತಹ ಪಾದ್ರಿಗಳನ್ನು ಅಮಾನತು ಮಾಡುವುದರ ಮೂಲಕ, ತಾನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸಮಾಜಕ್ಕೆ ಸಂದೇಶ ಕಳುಹಿಸುತ್ತಿದೆ.
೨೦೦೫ರಲ್ಲಿ ಪೋಪ್ ಬೆನೆಡಿಕ್ಟ್ ಫ್ರಾನ್ಸ್‌ನ ಸೇಂಟ್ ಜೀನ್‌ನಲ್ಲಿದ್ದಾಗ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸನ್ಯಾಸಿನಿಯರ ಇಡೀ ಘಟಕವ್ನೇ ಮುಚ್ಚಿದರಂತೆ. ಈ ಪ್ರಕರಣದ ಬಗ್ಗೆ ಕಮ್ಯೂನಿಟಿ ಆಫ್ ಸೇಂಟ್ ಜೀನ್ ೨೦೧೩ರಲ್ಲಿ ಹೇಳಿಯೊಂದರಲ್ಲಿ ಒಪ್ಪಿಕೊಂಡಿದೆ.
ಭಾರತದ ಜಾಲಂಧರ್ ಇಗರ್ಜಿಯಲ್ಲಿ ಫ್ರಾಂಕೊ ಮುಳಕ್ಕಳ್ ಎಂಬೊಬ್ಬ ಬಿಷಪ್, ೨೦೧೪ರಿಂದ ೨೦೧೬ರ ತನಕ ಸನ್ಯಾಸಿನಿಯೊಬ್ಬರ ಮೇಲೆ ೧೩ ಸಲ ಲೈಂಗಿಕ ದೌರ್ಜನ್ಯ ಎಸಗಿದ್ದು ಬಾರೀ ಸುದ್ದಿಯಾಯಿತು. ಆದರೆ ಮುಳಕ್ಕಳ್ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಇಗರ್ಜಿಯ ಸನ್ಯಾಸಿನಿಯರು ಪೋಪ್ ಫ್ರಾನ್ಸಿಸ್‌ರವರು ಈ ಹಗರಣದ ಬಗ್ಗೆ ಒಪ್ಪಿಕೊಂಡದ್ದು ಸಂತೋಷ ಎಂದರೂ, ಇಗರ್ಜಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ನಡೆದ #MeToo ಅಬಿಯಾನವು ಅತ್ಯಾಚಾರಕ್ಕೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ತಮ್ಮ ವೃತ್ತಾಂತವನ್ನು ಹಂಚಿಕೊಳ್ಳಲು ಧೈರ್ಯ ತುಂಬಿರುವುದನ್ನು ಇಲ್ಲಿ ಒಲ್ಲೇಖಿಸತಕ್ಕದ್ದು.
