ಅಕ್ಷಯ ಪಾತ್ರ ಸಂಸ್ಥಾನವು ಭಾರತದ ೧೨ ರಾಜ್ಯಗಳಲ್ಲಿ ೧೪,೦೦೦ಕ್ಕೂ ಹೆಚ್ಚು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ೧.೭೬ ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟ ಬಡಿಸುತ್ತಾ ಉತ್ತಮ ಸಮಾಜ ಸೇವೆ ಸಲ್ಲಿಸುತ್ತಾ ಬಂದಿದೆ.
ಇಂದು ವೃಂದಾವನದ ಅಕ್ಷಯ ಪಾತ್ರ ವತಿಯಿಂದ, ಪ್ರಧಾನಿ ನರೇಂದ್ರ ಮೋದಿಯವರು ೩ ಶತಕೋಟಿಯ ಮಧ್ಯಾಹ್ನದ ಊಟವನ್ನು ಇಂದು ಬಡಿಸಲಿದ್ದಾರೆ.
ವೃಂದಾವನ್‌ನಲ್ಲಿ ಅಕ್ಷಯ ಪಾತ್ರೆಯ ವತಿಯಿಂದ ಮೂರು ಶತಕೋಟಿಯ ಊಟ ಬಡಿಸಲು ಸಾಧ್ಯವಾಗಲು ಭಾರತದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ಅವರು ನೆರವು ನೀಡಿದ್ದಾರೆ.
ಈ ಸಮಾರಂಭದಲ್ಲಿ ಉಪಸ್ಥಿತರಾದ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಅಕ್ಷಯ ಪಾತ್ರವು ಅನಂತ ಧನ್ಯವಾದಗಳನ್ನು ಸಲ್ಲಿಸುತ್ತದೆ. ಜೊತೆಗೆ ಭಾರತ ಸರ್ಕಾರ, ಅನೇಕ ರಾಜ್ಯ ಸರ್ಕಾರಗಳು ಸ್ವಯಂಸೇವಕರು, ಉದ್ಯೋಗಿಗಳು, ಸಮರ್ಥಕರು ಮತ್ತು ದಾನಿಗಳೆಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತದೆ.
“ನಾವೆಲ್ಲರೂ ಒಟ್ಟಾಗಿ ಇದನ್ನು ಸಾಧಿಸಿದ್ದೇವೆ, ಇದೇ ರೀತಿ ಒಟ್ಟಾಗಿ ಇನ್ನಷ್ಟು ಧ್ಯೇಯಗಳನ್ನು ಸಾಧಿಸೋಣ” ಎಂಬುದು ಅಕ್ಷಯ ಪಾತ್ರ ಸಂಸ್ಥಾನದ ಧ್ಯೇಯ.
