ಕನ್ನಡ

“ಆಪರೇಷನ್ ಕಮಲ”ದ ಬಗ್ಗೆ ಲೋಕ ಸಭೆಯಲ್ಲಿ ಗದ್ದಲ, ಸದನ ಮುಂದೂಡಿಕೆ

ಹದಿನಾರನೆಯ ಲೋಕ ಸಭೆಯ ಕೊನೆಯ ಅಧಿವೇಶನದ ಕೊನೆಯ ವಾರ ಇಂದು ಆರಂಭವಾಯಿತು. ಅದರೆ ಕಾಂಗ್ರೆಸ್ ಸದಸ್ಯ ಕೆ ಸಿ ವೇಣುಗೋಪಾಲ್, ಕರ್ನಾಟಕದಲ್ಲಿ “ಅಪರೇಷನ್ ಕಮಲ” ವಿಚಾರವನ್ನು ಚರ್ಚೆಗಾಗಿ ಪ್ರಸ್ತಾಪಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೂ ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯುಳ್ಳ ಆಡಿಯೋ ಟೇಪ್ ಚಾಲ್ತಿಯಲ್ಲಿದೆ ಎಂದು ಹೇಳಿದರು.

ಈ ವಿಚಾರವನ್ನು ಪ್ರಶ್ನಾ ಸಮಯದ ನಂತರ ಚರ್ಚಿಸಲು ಅನುಮತಿ ನೀಡಲಾಗುವುದು ಎಂದು ಲೋಕ ಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಹೇಳಿದರು. ಪ್ರಶ್ನಾ ಸಮಯದ ಮೊದಲ ಪ್ರಶ್ನೆಯನ್ನು ಭಾರತೀಯ ಜನತಾ ಪಕ್ಷದ ಗಣೇಶ್ ಸಿಂಗ್ ಕೇಳಿ, ಅದಕ್ಕೆ ಕೇಂದ್ರೀಯ ಮಂತ್ರಿ ಪ್ರಕಾಶ್ ಜಾವಡೇಕರ್ ಉತ್ತರಿಸುತ್ತಿದ್ದರು. ಅಗ ಕಾಂಗ್ರೆಸ್ ಸದಸ್ಯರು “ಹಣದ ರಾಜಕೀಯ ಬೇಡ”, “ರಾಜಕೀಯ ಕುದುರೆ ವ್ಯಾಪಾರ ಬೇಡ” ಎಂಬ ಪ್ಲಾಕಾರ್ಡ್ ಹಿಡಿದು ಸದನದ ಬಾವಿಯತ್ತ ಧಾವಿಸಿದರು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯಿಟ್ಟು ತೆಲುಗು ದೇಶಂ ಪಕ್ಷದ ಸದಸ್ಯರೂ ಸಹ ಸದನದ ಬಾವಿಗೆ ಧಾವಿಸಿದರು. ತೃಣಮೂಲ ಕಾಂಗ್ರೆಸ್ ಸಿಬಿಐ ದುರುಪಯೋಗದ ವಿರುದ್ಧ ಘೋಷಣೆ ಕೂಗಿದರು.

ಇಷ್ಟೆಲ್ಲ ಗದ್ದಲದ ಪರಿಣಾಮವಾಗಿ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಸದನವನ್ನು ೧೨ ಘಂಟೆಯ ತನಕ ಮುಂದೂಡಿದರು.

Click to comment

Leave a Reply

Your e-mail address will not be published. Required fields are marked *

one × 4 =

To Top
WhatsApp WhatsApp us